ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮ
ಚಾಮರಾಜನಗರ : ಪ್ರೌಢಾವಸ್ಥೆಯ ಮಕ್ಕಳು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು
ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಅವರು
ತಿಳಿಸಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕಲ್ ಕಾಲೇಜ ಸಮೀಪದಲ್ಲಿರುವ ವೃತ್ತಿಪರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಮಾನಸ ಜಿಲ್ಲಾ ಸಂಪನ್ಮೂಲ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಡೆದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರೌಢಾವಸ್ಥೆ ಚಂಚಲ ಮನಸ್ಸಿಗೆ ಪರಿಣಾಮ ಬೀರುತ್ತದೆ. ಆಗಾಗಿ ಪ್ರೌಢಾವಸ್ಥೆಯ ಮಕ್ಕಳು ಮನಸಿಗೆ ಕಡಿವಾಣ ಹಾಕಿ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು. ಕ್ಷಣಿಕವಾದ ಪ್ರೀತಿ, ಪ್ರೇಮದಿಂದ, ಕೆಟ್ಟ ಚಟದಿಂದ ದೂರವಿರಬೇಕು. ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿಟ್ಟುಕೊಂಡು ಎಚ್ಚರದಿಂದವಿದ್ದು ಓದಿನಕಡೆ ಗಮನ ಕೊಟ್ಟರೆ. ಒಳ್ಳೆಯ ವಿದ್ಯಾರ್ಥಿಯಾಗಿ ಮುಂದಿನ ದಿನಗಳಲ್ಲಿ ಒಳ್ಳೆಯ ಅಧಿಕಾರಿ ಆಗಬಹುದು ಎಂದರು.
ಮಕ್ಕಳ ರಕ್ಷಣೆಗಾಗಿ 54 ಹಕ್ಕುಗಳಿವೆ. ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಿದ್ದು ಬದುಕು ಹಕ್ಕು ಎಲ್ಲರಿಗೂ ಇದ್ದು ಅದೇ ರೀತಿಯಲ್ಲಿ.18 ವರ್ಷದೊಳಗಿನ ಪ್ರತಿ ಮಕ್ಕಳಿಗೂ ಮೂಲಭೂತ ಮಾನವ ಹಕ್ಕುಗಳಾಗಿವೆ. ಮುಖ್ಯವಾಗಿ ಬದುಕುಹಕ್ಕು, ಶಿಕ್ಷಣದ ಹಕ್ಕು, ರಕ್ಷಣೆಯಹಕ್ಕು, ಭಾಗವಹಿಸುವಿಕೆಯ ಹಕ್ಕು, ಅಭಿವೃದ್ಧಿ ಹೊಂದುವ ಹಕ್ಕು ಇದೆ ಎಂದರು.
ಬಾಲ್ಯವಿವಾಹದಿಂದ ಮಕ್ಕಳ ಹಕ್ಕು ಹಾಳಾಗುತ್ತದೆ. ಮಕ್ಕಳನ್ನು ಓದು ಬಿಡಿಸಿ ಬಾಲಕಾರ್ಮಿಕತೆಗೆ ದೂಡುವುದು ಒಂದು ಅಪರಾಧವಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು 2012ರಲ್ಲಿ ಪೋಕೋ ಕಾಯ್ದೆ ಜಾರಿಗೆ ಬಂದಿದೆ. ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ವಿಶೇಷ ನ್ಯಾಯಾಲಯದಲ್ಲಿ ಜೀವಾವಧಿ.. ಶಿಕ್ಷೆ ಮರಣದಂಡನೆ, ಶಿಕ್ಷೆ ಇದೆ ಎಂದರು.
ಮಾನಸ ಜಿಲ್ಲಾ ಸಂಯೋಜಕ ಕೆ.ಸಿ.ರೇವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ-ಕಾಲೇಜು ಮಕ್ಕಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ನಮ್ಮ ಸಂಸ್ಥೆ ವತಿಯಿಂದ ಕಾನೂನು ಜಾಗೃತಿ ಮೂಡಿಸಲಾಗುತ್ತಿದೆ. ಮಕ್ಕಳು, ದಲಿತರು,.. ಮಹಿಳೆಯರ ಮೇಲಿನ ದೌರ್ಜನ್ಯ ಗಳು ನಡೆದಂತಹ ಸಂದರ್ಭಗಳಲ್ಲಿ ದೌರ್ಜನ್ಯಗಳನ್ನು ಹೇಗೆ ತಡೆಗಟ್ಟಬೇಕು. ಅವರಿಗೆ ಯಾವ ರೀತಿಯಲ್ಲಿ ನ್ಯಾಯ ಕೊಡಿಸಬೇಕು ಎಂಬುದರ ಬಗ್ಗೆ ಜಾಗೃತಿ ಮೂಡಿಲಾಗುತ್ತದೆ ಎಂದರು.
ಜನಹಿತಾಶಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ಅನುಪಮ ಟ್ರಸ್ಟ್‌ನ ಡಾ.ಪ್ರೇಮ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿಲಯ… ಪಾಲಕಿ ರಾಜಮ್ಮ, ಪ್ರಾಂಶುಪಾಲ ಸಿ.ರಂಗಸ್ವಾಮಿ, ವಿದ್ಯಾರ್ಥಿಗಳು ಹಾಜರಿದ್ದರು.