ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ನೂತನ ಕಾರ್ಯದರ್ಶಿಯಾಗಿ ವಕೀಲ ಎಂ.ಚಿನ್ನಸ್ವಾಮಿ ನೇಮಕ

ಚಾಮರಾಜನಗರ: ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಕಾನೂನು, ಮಾನವಹಕ್ಕುಗಳು ಹಾಗೂ ಮಾಹಿತಿ ಹಕ್ಕು  ವಿಭಾಗದ ಕಾರ್ಯದರ್ಶಿ ಯಾಗಿ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷರಾದ ಹಿರಿಯ ವಕೀಲ ಎಂ. ಚಿನ್ನಸ್ವಾಮಿ ನೇಮಕಗೊಂಡಿದ್ದಾರೆ.
    ಎಐಸಿಸಿ ಕಾನೂನು, ಮಾನವಹಕ್ಕುಗಳು ಹಾಗೂ ಮಾಹಿತಿಹಕ್ಕು ವಿಭಾಗದ ಅಧ್ಯಕ್ಷ ಡಾ, ಅಭಿಷೇಕ್ ಮನು ಸಿಂಘ್ವಿ ರವರ ಆದೇಶದ ಮೇರೆಗೆ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ, ಕೆ, ಶಿವಕುಮಾರ್ ರವರ ಅನುಮೋದನೆಯೊಂದಿಗೆ ಕರ್ನಾಟಕ ಪ್ರದೇಶ ಸಮಿತಿಯ ಕಾನೂನು ವಿಭಾಗದ ಅಧ್ಯಕ್ಷ ಸಿ, ಎಂ, ಧನಂಜಯ ರವರು ಚಾಮರಾಜನಗರದ ಹಿರಿಯ ವಕೀಲ ಎಂ,ಚಿನ್ನಸ್ವಾಮಿ ರವರಿಗೆ ರಾಜ್ಯ ಕಾರ್ಯದರ್ಶಿಯಾಗಿ ನೇಮಕಮಾಡಿದ್ದಾರೆ.
   ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೇಸ್ ಕಚೇರಿಯಲ್ಲಿ  ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಜ್ಯಸಭಾ ಸದಸ್ಯ ಜಿ,ಸಿ, ಚಂದ್ರಶೇಖರ್ ರವರು ಚಿನ್ನಸ್ವಾಮಿ ರವರಿಗೆ ನೇಮಕಾತಿ ಪತ್ರ ನೀಡಿದರು. ಕೊಳ್ಳೇಗಾಲದ ಮಾಜಿ ಶಾಸಕ ಜಿ, ಎನ್, ನಂಜುಂಡಸ್ವಾಮಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *