ಶಿಲ್ಪಕಲಾ ಸೌಂದರ್ಯಕ್ಕೆ ಜೀವ ತುಂಬಿದ ಅಮರಶಿಲ್ಪಿ ಜಕಣಾಚಾರಿ : ಶಾಸಕರಾದ ಸಿ. ಪುಟ್ಟರಂಗಶೆಟ್ಟಿ

ಚಾಮರಾಜನಗರ: ಅಮರಶಿಲ್ಪಿ ಜಕಣಾಚಾರಿಯವರು ಅದ್ಭುತ ಕಲಾ ಪ್ರಕಾರಗಳ ಮೂಲಕ ಶಿಲ್ಪಕಲಾ ಸೌಂದರ್ಯಕ್ಕೆ ಜೀವ ತುಂಬಿದ್ದಾರೆ ಎಂದು ಮೈಸೂರು ಸೇಲ್ಸ್ ಇಂಟರ್‍ನ್ಯಾಷನಲ್ ಲಿಮಿಟೆಡ್ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

 ನಗರದ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಜಕಣಾಚಾರಿಯವರು ನಿರ್ಮಿಸಿದ ದೇವಾಲಯಗಳ ಶಿಲ್ಪಕಲಾ ಸೌಂದರ್ಯ ಜೀವಂತಿಕೆಯಿಂದ ಕೂಡಿದ್ದು, ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ. ಇದು ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಮುಂದುವರಿದಿರುವ ಯುಗವಾಗಿದ್ದು, ಯಾವುದೇ ಕೆಲಸ ಕಾರ್ಯಗಳು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಆದರೆ ಯಾವುದೇ ತಂತ್ರಜ್ಞಾನವಿಲ್ಲದ ಅಂದಿನ ಕಾಲದಲ್ಲಿ ಶಿಲ್ಪಕಲೆಯಲ್ಲಿ ಉತ್ತಮ ಕರಕುಶಲತೆ ಪ್ರದರ್ಶಿಸಿದ ಜಕಣಾಚಾರಿಯವರು ಇಂದಿಗೂ ಪ್ರಸ್ತುತವಾಗಿದ್ದಾರೆ ಹಾಗೂ ಸ್ಮರಣೀಯರಾಗಿದ್ದಾರೆ ಎಂದರು. 

 ಹೊಯ್ಸಳ ಅರಸರ ಕಾಲದಲ್ಲಿ ನಿರ್ಮಿಸಲಾದ ಬೇಲೂರು, ಹಳೆಬೀಡು ಹಾಗೂ ಸೋಮನಾಥಪುರದ ದೇವಾಲಯಗಳು ಅದ್ಭುತ ಶಿಲ್ಪಕಲೆಗಳನ್ನು ಹೊಂದಿದೆ. ಕರ್ನಾಟಕದ ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿದ ಅಮರಶಿಲ್ಪಿ ಜಕಣಾಚಾರಿ ಅವರ ಜಯಂತಿ ಕಾರ್ಯಕ್ರಮವು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಡೆಯಬೇಕು. ವಿಶ್ವಕರ್ಮ ಸಮುದಾಯ ಸಂಘಟಿತರಾಗಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುಂಚೂಣಿಗೆ ಬರಬೇಕು ಎಂದು ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು. 

 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನ ಅವರು ಮಾತನಾಡಿ ಅಮರಶಿಲ್ಪಿ ಜಕಣಾಚಾರಿ ಅವರು 800 ವರ್ಷಗಳ ಹಿಂದೆಯೇ ಶಿಲ್ಪಕಲೆಯಲ್ಲಿ ಮಾಡಿದ ಸಾಧನೆ ಅವಿಸ್ಮರಣೀಯವಾಗಿವೆ. ಶಿಲ್ಪಕಲೆಯಲ್ಲಿ ಅವರು ಮಾಡಿದ ಸಾಧನೆ ಹಾಗೂ ವಿಶಿಷ್ಟ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡಬೇಕು ಎಂದÀರು. 

   ಮುಖ್ಯ ಭಾಷಣ ಮಾಡಿದ ಕೊಳ್ಳೇಗಾಲದ ನಿವೃತ್ತ ಶಿಕ್ಷಕರಾದ ಮುಳ್ಳೂರು ಪಿ. ಸಿದ್ದಪ್ಪಾಜಿ ಅವರು      ತುಮಕೂರು ಜಿಲ್ಲೆಯ ಕೈದಾಳ ಗ್ರಾಮದಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರು ಜನಿಸಿದರು. ಅವರ ಶಿಲ್ಪಿ ಜಕಣಾಚಾರಿಯವರು ನಿರ್ಮಿಸಿದ 93 ದೇವಾಲಯಗಳಲ್ಲಿ ಇಂದು ಸೋಮನಾಥಪುರ, ಬೇಲೂರು ಮತ್ತು ಹಳೆಬೀಡಿನಲ್ಲಿ ಮಾತ್ರ ಅಸ್ತಿತ್ವದಲ್ಲಿವೆ. ಟಿ. ನರಸೀಪುರ ತಾಲೂಕಿನ ಸೋಮನಾಥಪುರ ದೇವಾಲಯವನ್ನು ಜಕಣಾಚಾರಿಯವರು 15 ವರ್ಷಗಳ ಅವಧಿಯಲ್ಲಿ ನಿರ್ಮಿಸಿದರು ಎಂದರು. 

   ಜಕಣಾಚಾರಿಯವರು ನಿರ್ಮಿಸಿದ ದೇವಾಲಯಗಳ ಶಿಲ್ಪಕಲೆಯಲ್ಲಿ ಅತ್ಯದ್ಭುತ ಕೆತ್ತನೆಗಳನ್ನು ಕಾಣಬಹುದಾಗಿದೆ. ಅದೇ ಮಾದರಿಯಲ್ಲಿ ಬೇಲೂರು, ಹಳೆಬೀಡುಗಳಲ್ಲಿ ದೇವಾಲಯಗಳಲ್ಲಿನ ಸುಂದರ ಕೆತ್ತನೆ ಇಂದಿಗೂ ಜನರ ಕಣ್ಮನ ಸೆಳೆಯುತ್ತಿವೆ. ಹೊಯ್ಸಳರ ರಾಜ ವಿಷ್ಣುವರ್ಧನನು ಜಕಣಾಚಾರಿಯವರ ಕಾಯಕವನ್ನು ಮೆಚ್ಚಿ ಅಮರಶಿಲ್ಪಿ ಎಂಬ ಬಿರುದು ನೀಡಿ ಗೌರವಿಸಿರುವುದು ಬಹಳ ವಿಶೇಷವಾಗಿದೆ ಎಂದು ಮುಳ್ಳೂರು ಪಿ. ಸಿದ್ದಪ್ಪಾಜಿ ಅವರು ತಿಳಿಸಿದರು. 

   ಕಾರ್ಯಕ್ರಮದಲ್ಲಿ ಕರಕುಶಲ ಕಲೆಗಳಲ್ಲಿ ಸಾಧನೆಗೈದ ಸಮುದಾಯದ 10 ಮಂದಿಯನ್ನು ಸನ್ಮಾನಿಸಲಾಯಿತು.

   ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಎಸ್. ರಾಜು, ವಿಶ್ವಕರ್ಮ ಸಮುದಾಯದ ಜಿಲ್ಲಾಧ್ಯಕ್ಷರಾದ ಹೊನ್ನಳ್ಳಿ ಮಹೇಶ್, ಪ್ರಧಾನ ಕಾರ್ಯದರ್ಶಿ ಹರದÀನಹಳ್ಳಿ ಸುರೇಶ್, ಗೌರವಾಧ್ಯಕ್ಷರಾದ ಸೋಮಾಚಾರಿ, ವಿಶ್ವಕರ್ಮ ನಿಗಮ ಮಂಡಳಿಯ ನಾಮನಿರ್ದೇಶಿತ ಸದಸ್ಯರಾದ ಶ್ರೀನಿವಾಸ ಆಚಾರ್, ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಪದ್ಮಾ ಪುರುμÉೂೀತ್ತಮ್, ಮುಖಂಡರಾದ ಲಿಂಗಣ್ಣಚಾರಿ, ಶ್ರೀನಿವಾಸಮೂರ್ತಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *