- ಭೋಗಾಪುರದಲ್ಲಿ ನೂತನ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ
ಚಾಮರಾಜನಗರ : ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನಗಳನ್ನು ಅಧ್ಯಯನ ಕೇಂದ್ರಗಳಾಗಿ ಮಾಡಲೇಬೇಕು ಎಂದು ಮೈಸೂರಿನ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.
ತಾಲೂಕಿನ ಭೋಗಾಪುರ ಗ್ರಾಮದಲ್ಲಿ ನಡೆದ ವಿಶ್ವಜ್ಞಾನಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಮಾತನಾಡಿದರು. ಸೌಲಭ್ಯ ವಂಚಿತ ಬಡಾವಣೆಯ ಪೌರಕಾರ್ಮಿಕ ಮಗನೂ ಆರ್‌ಬಿಐ ಬ್ಯಾಂಕ್ ಮುಖ್ಯ ಅಧಿಕಾರಿಯಾಗಿದ್ದಾರೆ. ಯುಕೆ ಗೆ ಹೋಗುತ್ತಾರೆ ಅಂದ ಮೇಲೆ ಭೋಗಾಪುರ ಗ್ರಾಮದಲ್ಲಿ ಎಲ್ಲ ಸೌಲಭ್ಯಗಳಿರುವ ಮಕ್ಕಳ ಎಷ್ಟರ ಮಟ್ಟಿಗೆ ಓದಬೇಕು. ಅದಕ್ಕಾಗಿ ದಯಮಾಡಿ ಅಂಬೇಡ್ಕರ್ ಸಮುದಾಯ ಭವನವನ್ನು ಅಧ್ಯಯನ ಕೇಂದ್ರವನ್ನಾಗಿ ಮಾಡಲೇಬೇಕು. ಇಲ್ಲದಿದ್ದರೆ ನಿಮ್ಮ ಗ್ರಾಮಕ್ಕೆ ಯಾವುದೇ ಕಾರಣಕ್ಕೂ ಬರಲ್ಲ ಎಂದರು.
ಅಂಬೇಡ್ಕರ್ ಸಮುದಾಯ ಭವನಗಳನ್ನೂ ತಾಲೂಕು, ಹೋಬಳಿ, ಗ್ರಾಮಗಳಲ್ಲಿ ಕಟ್ಟಿಕಟ್ಟಿ ನಿಲ್ಲಿಸಿ ಅವುಗಳಿಗೆ ಧೂಳುಹಿಡಿದುಕೊಂಡು ಫ್ಯಾನುಗಳು ಮುರಿದು ಬಿದ್ದು ಹೋಗಿದ್ದು, ಕಿಟ್ಟುಬಾಗಿಲು ಹಾಳಾಗಿವೆ. ಆಗಾಗಿ ಭೋಗಾಪುರ ಗ್ರಾಮದ ಚರಿತ್ರೆ ಬದಲಾಗುವುದು ಈಟಿ, ಭರ್ಜಿ, ಕತ್ತಿಗಳಿಂದ ಅಲ್ಲ ಪೆನ್ನಿನ ಮುಖಾಂತರವಾಗಿ. ನಿಮ್ಮ ಮಕ್ಕಳಿಗೆ ಪೆನ್ನು ಕೊಟ್ಟರೆ ಅವರು ಗ್ರಾಮದ ಚರಿತ್ರೆ ಬದಲು ಮಾಡಿಬಿಡುತ್ತಾರೆ’ ಎಂದರು.
ದೇಶದ 7029 ಹಳ್ಳಿಗಳಲ್ಲಿ ದಲಿತರಲ್ಲಿ
ಸತ್ತರೆ ಅಂತ್ಯಸಂಸ್ಕಾರಕ್ಕೆ ಸ್ಮಶಾನಗಳಿಲ್ಲ.. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಂತದಲ್ಲಿ ಶಾಲೆಬಿಟ್ಟು ಕಲ್ಯಾಣ ಮಂಟಪಗಳಲ್ಲಿ ಅಡುಗೆ, ಎಲೆ ಹಾಕಲು ಹೋಗುತ್ತಿ ದ್ದಾರೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು. ರಾಜಕಾರಣಿಗಳು ತಾಯಿತನದ ಹೃದಯ ಇರಬೇಕು. ಬಿ.ರಾಚಯ್ಯನವರು ರಾಗಿಹೊಲದಿಂದ ರಾಜಭವನಕ್ಕೆ ಹೋದ ಪುಣ್ಯಪುರುಷರು ಅವರು ಫೋಟೋಗಳು ಸಿದ್ದಯ್ಯನಪುರ ಹಿಡಿದು ಚಂದಕವಾಡಿ ಬಿಸಲವಾಡಿ, ಅಮಚವಾಡಿ ಇತರೆ ಗ್ರಾಮಗಳಲ್ಲಿ ಅವರ ಫೋಟೋ ಇದೆ ಎಂದರು.
ಅಂಬೇಡ್ಕರ್ ಎಂದರೆ ಭಾಷಣವಲ್ಲ ತ್ಯಾಗ. ನಿಮ್ಮ ಮಕ್ಕಳು ಐಎಎಸ್, ಐಪಿಎಸ್, ಕೆಎಎಸ್ ಮಾಡಿದಾಗ ಮಾತ್ರ ಅಂಬೇಡ್ಕರ್ ಜೀವಂತವಾಗಿರುತ್ತಾರೆ. ಅವರು ಭಾಷಣ, ಪ್ರತಿಮೆಯಲ್ಲಿ ಇಲ್ಲ ಅವರು ಬರವಣಿಗೆ, ಪುಸ್ತಕದಲ್ಲಿ ಇದ್ದಾರೆ. ಆಗಾಗಿ ಮಕ್ಕಳ ಕೈಯಲ್ಲಿ ಅಂಬೇಡ್ಕರ್ ಪುಸ್ತಕ ಕೊಟ್ಟು ಅಂಬೇಡ್ಕರ್ ಸಮುದಾಯ ಭವನದಲ್ಲಿ ಓದಿಸಿದರೆ ಮುಂದಿನ ದಿನಗಳಲ್ಲಿ ಆದ್ಭುತವಾದ ಕಾಂತಿ ಮಾಡುತ್ತಾರೆ. ಈ ಕೆಲಸವನ್ನು ನೀವು ಮಾಡುವ ಮೂಲಕ ಅಂಬೇಡ್ಕರ್ ಕನಸು ನನಸು ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವರಿಗೂ ಮೀಸಲಾತಿ ಕೊಟ್ಟಿದ್ದಾರೆ. ಅವರ ಮೀಸಲಾತಿ ಋಣದಿಂದ ನಾನು ನಾಲ್ಕು ಬಾರಿ ಶಾಸಕರಾಗಲು ಸಾಧ್ಯವಾಯಿತು. ಅವರ ತತ್ತ್ವ, ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಹೋಗೋಣ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅಂಬೇಡ್ಕರ್ ಸಮುದಾಯ ಭವನಗಳು ಜೂಜುಕೇಂದ್ರಗಳಾಗುತ್ತಿದೆ. ಅದರ ಬಗ್ಗೆ ಗ್ರಾಮದ ಯಜಮಾನರುಗಳು ಗಮನಹರಿಸಬೇಕು ಸಮುದಾಯದ ಒಳ್ಳೆಯ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರ ಅಭಿವೃದ್ಧಿಗಾಗಿ ಹಿಂದೂ ಕೋಡ್ ಬಿಲ್ ಮಂಡಿಸಲು ಮುಂದಾದಾಗ ಜಾರಿಗೆ ತೀವ್ರ ವಿರೋಧ ವ್ಯಕ್ತವಾದ ಕಾರಣದಿಂದ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದರು.
ಭೋಗಾಪುರ ವಸತಿಯುಕ್ತ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಪಿ.ದೇವರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಹೆಚ್.ವಿ.ಚಂದ್ರು, ತಾ.ಪಂ.ಮಾಜಿ ಸದಸ್ಯ ಆರ್.ಮಹದೇವು, ಫಾಸ್ಟರ್ರೆ.ಶಾಂತಕುಮಾರಿ, ದೀಪಾ ಅಕಾಡೆಮಿ ರವಿ, ಎಪಿಎಂಸಿ ಮಾಜಿ ಅಧ್ಯಕ್ಷ ನಾಗೇಂದ್ರ, ಪಿಡಿಓ ಮಾನಸ, ಕುದೇರು ಪೊಲೀಸ್ ಠಾಣೆಯ ಸಬ್‌ಇನ್‌ಪೆಕ್ಟರ್ ಈಶ್ವರ, ಮುಖಂಡ ಮಹೇಶ್ ಕುದರ್, ಯಜಮಾನರಾದ ಮಹಾಲಿಂಗು, ಶ್ರೀಧರ್, ಮಲ್ಲಿಕಾರ್ಜುನ, ಮುಖಂಡರಾದ ಗುರುಲಿಂಗಯ್ಯ, ಶಿವಮಲ್ಲಯ್ಯ, ರವಿ, ಚನ್ನಕೇಶವ, ಪ್ರಕಾಶ್, ಕೆಂಪರಾಜು, ದರ್ಶನ್, ಸಚಿನ್ ಜಯರಾಂ, ರಾಜೇಶ್, ಮೋಹನ್ ಹಾಗೂ ಗ್ರಾಮದ ಎಲ್ಲ ಕೋಮಿನ ಯಜಮಾನರು, ಗ್ರಾಮಸ್ಥರು ಹಾಜರಿದ್ದರು.