ಅಂಬೇಡ್ಕ‌ರ್ ದಲಿತರ ಸ್ವತ್ತಲ್ಲ, ದೇಶದ ಸ್ವತ್ತು : ಸಚಿವ ಹೆಚ್.ಸಿ.ಮಹದೇವಪ್ಪ

* ಹೊಂಗನೂರಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಶಂಕುಸ್ಥಾಪನಾ ಸಮಾರಂಭ


ಚಾಮರಾಜನಗರ : ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದವರ ಬಾಯಿಯಲ್ಲಿ ಸಂವಿಧಾನ ಓದುವಂತೆ ಮಾಡಿದ ಏಕೈಕ ಸರ್ಕಾರ ಸಿದ್ದರಾಮಯ್ಯನವರ ಸರ್ಕಾರ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಹೇಳಿದರು.
ತಾಲೂಕಿನ ಹೊಂಗನೂರು ಗ್ರಾಮದಲ್ಲಿ
ನಡೆದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಶಂಕುಸ್ಥಾಪನಾ ಸಮಾರಂಭವನ್ನು
ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕ‌ರ್ ಎಂದರೆ ದಲಿತರ ಸ್ವತ್ತಲ್ಲ ದೇಶಸ್ವತ್ತು. ದೇಶಕ್ಕಾಗಿ, ದೇಶ ಅಭಿವೃದ್ಧಿಗಾಗಿ, ದೇಶದ ಐಕ್ಯತೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಬಾಲ್ಯದಲ್ಲೇ  ಕಷ್ಟಪಟ್ಟು ಓದಿ ದೇಶಕ್ಕೆ ಒಂದು ಶ್ರೇಷ್ಠ ಸಂವಿಧಾನ ಬರೆದುಕೊಟ್ಟಿದ್ದಾರೆ. ಅ ಸಂವಿಧಾನದಲ್ಲಿ ಏನಿದೆ ಅನ್ನುವುದೆ ಗೊತ್ತಿಲ್ಲದೆ ಬಹಳಷ್ಟು ಜನರು ಅದನ್ನು ಬದಲಾವಣೆ ಮಾಡಬೇಕು ಎಂದು ಮಾತನಾಡುತ್ತಿದ್ದರು. ಅದನ್ನು ಮನಗಂಡು ವಿದ್ಯಾರ್ಥಿಯಂದ ಹಿಡಿದು. ಪ್ರಧಾನಮಂತ್ರಿವರಗೆ ಸಂವಿಧಾನ ಪೀಠಿಕೆ ಓದುವಂತೆ ಮಾಡಿದ್ದೇ ನಮ್ಮ ಸರ್ಕಾರ ಎಂದರು.
ಜಿಲ್ಲೆಯಲ್ಲಿ ಎಸ್‌ಸಿ ಎಸ್‌ಸಿ, ಓಬಿಸಿ ಜನರು ಹೆಚ್ಚು ಇದ್ದಾರೆ. ನಂಜುಂಡಪ್ಪ ವರದಿ ಪ್ರಕಾರ ಜಿಲ್ಲೆಯು ಹಿಂದುಳಿದೆ. ಬಿ.ರಾಚಯ್ಯನವರ ನಾಯಕತ್ವ, ಅಧಿಕಾರ ಬಿಟ್ಟರೆ. ನೀರಾವರಿ, ಭೂಮಿ ಮಂಜೂರಾತಿ, ಶಿಕ್ಷಣ ಸಂಸ್ಥೆಗಳು ಇತರ ನಾಗರಿಕ ಸೌಲಭ್ಯಗಳು ಒದಗಿಸಿಕೊಟ್ಟಿಲ್ಲ. ಜಿಲ್ಲೆಯ ಸೇರಿದಂತೆ ಇಡೀ ರಾಜ್ಯದ ಜನರಿಗೆ ಅರಣ್ಯಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸಿ ಭೂಮಿ ಕೊಟ್ಟಿದ್ದಾರೆ. ದಲಿತರಿಗೆ ಭೂಮಿ ಇದ್ದರೆ ಸಾಮಾಜಿಕ ಸಾಮಾನತೆ ಇದ್ದಂತೆ ಎಂದು ಅಂಬೇಡ್ಕರ್ ರವರು ಹೇಳಿದ್ದಾರೆ ಎಂದರು.
  ಎಸ್‌ಸಿ, ಎಸ್‌ಟಿಗಳು ಒಗ್ಗಟ್ಟಾಗಿ : ಹೊಂಗನೂರು ಗ್ರಾಮದಲ್ಲಿ ಅಹಿತಕರ ಘಟನೆ
ಉಂಟಾಗಿ ಸುಮಾರು 500ಕ್ಕೂ ಹೆಚ್ಚು ಮಂದಿ ಅಮಾಯಕರು ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ಎಸ್‌ಸಿ, ಎಸ್‌ಟಿಗಳು ಒಂದೇ ನಿಮಯದಡಿಯಲ್ಲಿ ಬರುತ್ತೇವೆ ಬಂದ ಮೇಲೆ ಜಗಳ ಏಕೆ ಆಡುತ್ತೀರಿ. ಶೇ. 24% ಹೆಚ್ಚದರೆ ಎಷ್ಟು ರಾಜಕೀಯ ಶಕ್ತಿ ಬರುತ್ತದೆ. ಆ ಶಕ್ತಿ ಬಳಸಿಕೊಂಡು ಎಷ್ಟೊಂದು ಅಭಿವೃದ್ಧಿ ಹೊಂದಬಹುದು. ಸಚಿವ ಸಂಪುಟದ ಉಪ ಸಮಿತಿ ಮಾಡಿದ್ದೇವೆ. ಎಲ್ಲೆಲ್ಲಿ ಈ ತರ ಗಲಾಟೆ ಆಗಿರುತ್ತವೆ ಕ್ರಿಮಿನಲ್ ವಿಚಾರಬಿಟ್ಟು ಬೇರೆಬೇರೆ ಸಣ್ಣ ಪುಟ್ಟ ವಿಚಾರಗಳನ್ನು ನೋಡಿ ಹಂತವಾಗಿ ಸಚಿವ ಸಂಪುಟದಲ್ಲಿ ವಿಥ್‌ಡ್ರಾಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸಿದರೆ ಸಮಿತಿಯಲ್ಲಿ ನಾನು ಇದ್ದೇನೆ, ಗೃಹಸಚಿವರು ಇದ್ದಾರೆ ಅಲ್ಲೇ ವಿತ್‌ ಡ್ರಾ ಮಾಡಿಸೋಣ ಎಂದರು. ಹೊಂಗನೂರು ಗ್ರಾಮ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.
ದಿವ್ಯಸಾನಿಧ್ಯ ವಹಿಸಿದ್ದ ಮೈಸೂರಿನ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್‌ಸ್ವಾಮೀಜಿ ಮಾತನಾಡಿ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನವಾಗದ ರೀತಿಯಲ್ಲಿ ನೋಡಿಕೊಳ್ಳುವುದೇ ಅವರ ಋಣತೀರಿಸುವ ಕೆಲಸ ಆಗಿದೆ. ಅವರಿಗೆ ಅವಮಾನ ಮಾಡುವವರು ಮಾನವರಾಗಲು ಸಾಧ್ಯವಿಲ್ಲ. ಅವರ ನೆರಳಿನಲ್ಲಿ ಇರವವರು ಇಡೀ ದೇಶದ ಜನ ಅಂಬೇಡ್ಕರ್‌ರಿಗೆ ಅವಮಾನವಾಗುವ ಕೆಸಲ ಮಾಡಬಾರದು. ಅವರಿಗೆ ಅವಮಾನವಾದರೆ ನಮಗೆ ನಾವೇ ಅವಮಾನ ಮಾಡಿಕೊಂಡಂತೆ ಎಂದರು
. ಅಧ್ಯಕ್ಷತೆ ವಹಿಸಿದ್ಧ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಗಳ ನಡುವೆಯಲ್ಲೂ ಕೊಳ್ಳೇಗಾಲ ಕ್ಷೇತ್ರದ.. ಅಭಿವೃದ್ಧಿಗೆ ಮೊದಲ ಬಾರಿಗೆ 25 ಕೋಟಿ ರೂ. ಕೊಟ್ಟರು. ಎಲ್ಲ ಅನುದಾನವನ್ನು ಅಂಬೇಡ್ಕ‌ರ್, ವಾಲ್ಮೀಕಿ, ಕನಕ, ಭಗೀರಥ, ಬಾಬೂಜಿ, ಬುದ್ಧವಿಹಾರಕ್ಕೆ ಹಾಗೂ ಇತರ ಭವನಗಳ ನಿರ್ಮಾಣಕ್ಕಾಗಿ ಅನುದಾನ ಹಂಚಿಕೆ ಮಾಡಲಾಯಿತು. ಈಗ 50 ಕೋಟಿ ಅನುದಾನ ನೀಡಿದ್ದಾರೆ ಅದನ್ನು ಕ್ಷೇತ್ರದ ರಸ್ತೆ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ಕ್ಷೇತ್ರದ ಜನತೆಗೆ ನಾನು ಸೇವಕ : ಜಾಗದ ಅಳತೆ ತಕ್ಕಂತೆ ಡಾ.ಬಾಬಾ ಸಾಹೇಬ್ಅಂಬೇಡ್ಕ‌ರ್ ಪುತ್ಥಳಿಯನ್ನು ಸುಂದರವಾಗಿ ನಿರ್ಮಿಸಿಕೊಳ್ಳಬೇಕು. ಅಂಬೇಡ್ಕ‌ರ್ ಭವನ. ನಿರ್ಮಾಣಕ್ಕೆ ಸರ್ಕಾರ 1.25 ಕೋಟಿ ರೂ. ನೀಡಿದೆ. ಈಗಾಗಲೇ 70 ಲಕ್ಷ ರೂ. ಬಿಡುಗಡೆ ಆಗಿದೆ. ಕ್ಷೇತ್ರದಲ್ಲಿ ಅನೇಕ ಭವನ ನಿರ್ಮಾಣ ಹಂತದಲ್ಲಿವೆ. ಭವನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೊರಜಗತ್ತಿಗೆ ನಾನು ಶಾಸಕನಾದರೂ ಕ್ಷೇತ್ರದ ಜನತೆಗೆ ಸೇವಕನಾಗಿದ್ದೇನೆ ಮತ್ತೊಂದು ಸಚಿವ ಸಂಪುಟ ಸಭೆ ಆಗಬೇಕು. ತಂದೆ ಬಿ.ರಾಚಯ್ಯ ಗಡಿಜಿಲ್ಲೆಯಿಂದ ರಾಜ್ಯದ ಉದ್ದಲಕ್ಕೂ ಜಮೀನು ವಿತರಣೆ ಮಾಡಿದ್ದಾರೆ.ಹೊಂಗನೂರು ಏತನೀರಾವತಿ ಆಗಲು ಕೆ.ಎನ್.ನಾಗೇಗೌಡರ ಕಾರಣರು. ಯೋಜನೆಯು ಈ ಭಾಗದ ಜನತೆಗೆ ಅನುಕೂಲವಾಗಿದೆ. ಆ ಕೆರೆಯ ಅಭಿವೃದ್ಧಿಗೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 14. 5 ಕೋಟಿ ಮಂಜೂರು ಮಾಡಿದ್ದಾರೆ ಎಂದರು.
 ಶಿಕ್ಷಕ ನಂಜುಂಡಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಹೆಚ್.ವಿ.ಚಂದ್ರು ಗ್ರಾ.ಪಂ.ಅಧ್ಯಕ್ಷೆ ರೂಪುಮೋಹನ್,ಉಪಾಧ್ಯಕ್ಷ ನವೀನ್ ಕುಮಾರ್, ಸದಸ್ಯ ಮಣಿಕಂಠ,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಂಟೇಶ್, ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು),ಜಿ.ಪಂ.ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ನಲ್ಲೂರು ಸೋಮೇಶ್ವರ, ತಾ.ಪಂ.ಮಾಜಿ ಅಧ್ಯಕ್ಷ ಆರ್.ಮಹದೇವು, ಸಾಹಿತಿ ಸಿದ್ದರಾಜು, ಮುಖಂಡರಾದ ನಾಗಯ್ಯ, ಪುಟ್ಟಸ್ವಾಮಿ, ಯ.ವೀರಣ್ಣ, ಯ.ನಾಗಯ್ಯ  ಜಿ.ಪಂ.ಮಾಜಿ ಸದಸ್ಯ ಲಕ್ಷ್ಮೀಪುಟ್ಟಸ್ವಾಮಿ, ಕಮಲ್ ,ತಾ.ಪಂ.ಮಾಜಿ ಸದಸ್ಯ ಮಹದೇವು, ಮುಖಂಡ ಕಿನಕಹಳ್ಳಿರಾಜು,  ಅಂಬೇಡ್ಕರ್ ಪುತ್ಥಳಿ ನಿರ್ಮಾಣ
ಸಮಿತಿ ಯ ಶಿವರಾಮ್, ಪುಟ್ಟನಂಜಯ್ಯ, ಶಂಕರ್, ಚೇತನ್, ರವಿಕುಮಾರ್, ಗೋಪಾಲ್, ಶ್ರೀನಿವಾಸ,
ಗ್ರಾ.ಪಂ.ಸದಸ್ಯ ಚಾಮದಾಸ್, ಕವಿತಾನಟರಾಜು, ಮಾಜಿ ಅಧ್ಯಕ್ಷ ನಿರ್ಮಲಾರಾಮು,ಕಂದಹಳ್ಳಿ ‌ನಂಜುಂಡಸ್ವಾಮಿ, ಡಾ.ನಂಜರಾಜ ಸ್ವಾಗತಿಸಿದರು.

Leave a Reply

Your email address will not be published. Required fields are marked *