ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆ ಮತ್ತು ಬುದ್ಧನಗರ ಹಿತಾ ರಕ್ಷಣಾ ಸಮಿತಿ ವತಿಯಿಂದ ನಗರದಲ್ಲಿ ಮೊಂಬತ್ತಿ ಮೆರವಣಿಗೆ ನಡೆಯಿತು.
ನಗರದ ಸಾರನಾಥ ಬೌದ್ಧ ವಿಹಾರದಲ್ಲಿ ಸಾಮೂಹಿಕ ಬುದ್ದ ವಂದನೆ ಸಲ್ಲಿಸಿ ಆರಂಭವಾದ ಮೆರವಣಿಗೆ, ದೀಪಾಂಕರ ಬೌದ್ಧ ವಿಹಾರ , ಧಮ್ಮಪಥ ಬೌದ್ಧ ವಿಹಾರ ಬುದ್ದನಗರದ ಡಾ. ಬಿಆರ್ ಅಂಬೇಡ್ಕರ್ ಗ್ರಂಥಾಲಯ, ಹೌಸಿಂಗ್ ಬೋರ್ಡ್, ನ್ಯಾಯಾಲಯ ರಸ್ತೆ, ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿಗೆ ತೆರಳಿ ಸಾಮೂಹಿಕ ಬುದ್ದವಂದನೆ ಸಲ್ಲಿಸಿ ಮುಕ್ತಾಯಗೊಂಡಿತು.
ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಶಾಖೆಯ ಅಧ್ಯಕ್ಷ ಆರ್.ಬಸವರಾಜು, ಉಪಾಧ್ಯಕ್ಷ ರಾದ ಮಲ್ಲಿಕ್ ಯಲಕ್ಕೂರು, ಉಮೇಶ್ ಕುದರ್, ತಾಲೂಕು ಅಧ್ಯಕ್ಷ ಕೃಷ್ಣಯ್ಯ,ಬುದ್ಧನಗರ ಹಿತರಕ್ಷಣ ಸಮಿತಿ ಅಧ್ಯಕ್ಷ ಮಹದೇವು , ಕಾರ್ಯದರ್ಶಿ ಶಂಕರಪ್ಪ, ವಕೀಲರಾದ ನಾಗಣ್ಣ, ಕರಿನಂಜನಪುರ ಯಜಮಾನ ಬಸವಣ್ಣ
ಹಾಗೂ ಪದಾಧಿಕಾರಿಗಳು ಬೌದ್ದ ಬಂಧುಗಳು ಭಾಗವಹಿಸಿದ್ದರು.