ಮಲುಗನಹಳ್ಳಿ ಹಾಲಿನ ಡೇರಿಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ಜಿಲ್ಲಾ ಹಾಲು ಒಕ್ಕೂಟದಿಂದ ದೊರೆಯುವ ಸವಲತ್ತುಗಳನ್ನು ಹಾಲು ಉತ್ಪಾದಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸರ್ಕಾರದ ನಾಮನಿರ್ದೇಶಿತ ಮೈಮುಲ್ ನಿರ್ದೇಶಕರಾದ ಮಲ್ಲಿಕಾರವಿಕುಮಾರ್ ಹೇಳಿದರು.

ಅವರು ತಾಲೂಕಿನ ಮಲುಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಒಕ್ಕೂಟದಿಂದ ಮೈಸೂರು ನಗರದಲ್ಲಿ ಮಹಿಳಾ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಲಾಗಿದ್ದು ಇದರಲ್ಲಿ ಹಾಲು ಉತ್ಪಾದಕರುಗಳ ಮಕ್ಕಳು ಮೈಸೂರು ನಗರದಲ್ಲಿ ಯಾವುದೇ ಪದವಿ ತರಗತಿಯಲ್ಲಿ ಓದುತ್ತಿರುವವರಿಗೆ ಅವಕಾಶವನ್ನು ಕಲ್ಪಿಸಲಾಗುವುದು.

ಹಸುಗಳಿಗೆ ವಿಮೆ ಮಾಡಿಸಲಾಗುವುದು ಹಾಗೂ ಮ್ಯಾಟ್ ಗಳನ್ನು ನೀಡಲಾಗುವುದು, ಮೃತಪಟ್ಟ ಹಾಲು ಉತ್ಪಾದಕರುಗಳಿಗೆ ಇಪ್ಪತ್ತು ಸಾವಿರ ರೂ ನೆರವು ನೀಡಲಾಗುವುದು ಇದರ ಜೊತೆಗೆ ನೀಡುವ ವಿವಿಧ ಸೌಲಭ್ಯಗಳನ್ನು ಹಾಲು ಉತ್ಪಾದಕರುಗಳು ಪಡೆಯುವ ಮೂಲಕ ಅಭಿವೃದ್ಧಿ ಪಥದತ್ತ ಸಾಗಬೇಕು ಎಂದು ಕರೆ ನೀಡಿದರು.

ಸಂಘಗಳ ಸದಸ್ಯರುಗಳು ಸಂಘಕ್ಕೆ ಗುಣಮಟ್ಟದ ಹಾಲನ್ನು ಹಾಕಬೇಕು ಆ ಮೂಲಕ ಸಂಘದ ಬೆಳವಣಿಗೆಯೊಂದಿಗೆ ತಾವುಗಳು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.

ಸಂಘದ ಸದಸ್ಯರುಗಳು ಸಂಘದಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಗತ್ಯ ಮಾಹಿತಿಯನ್ನು ಪಡೆಯಬೇಕು, ಯಾವುದೇ ಗೊಂದಲಗಳು ಇದ್ದರೆ ಅದನ್ನು ಸ್ಪಷ್ಟವಾಗಿ ಮಾಹಿತಿ ನೀಡಿ ಪರಿಹರಿಸಿಕೊಳ್ಳುವ ಕೆಲಸ ಮಾಡಬೇಕು. ಆ ಮೂಲಕ ಸಂಘದಲ್ಲಿ ಯಾವುದೇ ರೀತಿಯ ಗೊಂದಲಗಳು ಆಗದಂತೆ ಸರ್ವರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಂಘದಲ್ಲಿನ ಮಾಹಿತಿಗಳ ಬಗ್ಗೆ ಸಂಘದ ಸೂಚನಾ ಫಲಕದಲ್ಲಿ ಪ್ರಕಟಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ಹಾಲು
ಉತ್ಪಾದಕರುಗಳಿಗೆ ದೊರೆಯುವ ಸೌಲಭ್ಯಗಳು ಹಾಗೂ ಅರಿವಿನ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು.

ಸಂಘಕ್ಕೆ ಮೈಮುಲ್ ವತಿಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ವತಿಯಿಂದ ಮೈಮುಲ್ ನಿರ್ದೇಶಕರಾದ ಮಲ್ಲಿಕಾ ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಶಿಲ್ಪ ಗಣೇಶ್, ಸದಸ್ಯರಾದ ಯೋಗೇಶ್, ಆಶಾರವಿ, ಮಾರ್ಗ ವಿಸ್ತರಣಾಧಿಕಾರಿ ನೇಮಿನಾಥ ಮಾಕಾಣಿ, ಸಂಘದ ಅಧ್ಯಕ್ಷ ಎಂ.ಎಸ್.ತೇಜುಮೂರ್ತಿ, ಉಪಾಧ್ಯಕ್ಷ ರಾಮಚಂದ್ರ ನಿರ್ದೇಶಕರುಗಳಾದ ನಾರಾಯಣಗೌಡ,
ಎಂ.ಕೆ.ರಾಘವೇಂದ್ರ, ಎಂ.ಎಸ್.ಗಣೇಶ, ಚಂದ್ರ, ಕುಮಾರ, ಎಂ.ಎಸ್.ಮೂರ್ತಿ, ಎಂ.ಆರ್.ನಟೇಶ, ಲಲಿತ, ಎಸ್.ಎನ್.ಜ್ಯೋತಿ, ಸಿಇಓ ಎಂ.ಇ.ಜ್ಯೋತಿ, ಹಾಲು ಪರೀಕ್ಷಕ ನಂಜುಂಡ, ಸಹಾಯಕ ದಿನೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *