ಎಪಿಎಂಸಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಕಾಂಗ್ರೆಸ್ ಮುಖಂಡರಿಂದ ಸನ್ಮಾನ

ಚಾಮರಾಜನಗರ: ಚಾಮರಾಜನಗರ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷರಾಗಿ ವಿ.ಸಿ.ಹೊಸೂರು ಗ್ರಾಮದ ಎಚ್.ಎನ್.ಮಹದೇವಸ್ವಾಮಿ(ಸೋಮೇಶ) ಮದ್ದೂರು ಗ್ರಾಮದ ರಾಮಚಂದ್ರ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ನಗರದ ಕೃಷಿಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಜಯಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಎಚ್.ಎನ್.ಮಹದೇವಸ್ವಾಮಿ (ಸೋಮೇಶ) ಉಪಾಧ್ಯಕ್ಷ ರಾಮಚಂದ್ರ ಅವರನ್ನು ಜಿಲ್ಲಾಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಸನ್ಮಾನಿಸಿ ಅಭಿನಂದಿಸಿದರು.

ಕಚೇರಿ ಹೊರಾವರಣದಲ್ಲಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಮಾಲಾರ್ಪಣೆ ಮಾಡಿ, ಸಿಹಿತಿನ್ನಿಸಿ ಸಂಭ್ರಮಾಚರಣೆ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ, ಆರ್.ಮಹದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಎಪಿಎಂಸಿ ಸದಸ್ಯ ಎ.ಎಸ್.ಪ್ರದೀಪ್, ಜಿಪಂ ಮಾಜಿಸದಸ್ಯ ರಮೇಶ್, ಎಪಿಎಂಸಿ ಮಾಜಿಸದಸ್ಯ ಶಿವಸ್ವಾಮಿ, ಎಸ್ಸಿಮೋರ್ಚಾ ಅಧ್ಯಕ್ಷ ನಲ್ಲೂರುಸೋಮೇಶ್, ಮರಿಯಾಲದ ಹುಂಡಿ ಕುಮಾರ್, ಮುತ್ತಿಗೆದೊರೆ, ದೊಡ್ಡರಾಯಪೇಟೆ ಮೂರ್ತಿ, ರವಿಗೌಡ, ನಾಗವಳ್ಳಿ ನಾಗಯ್ಯ, ವೀರಭದ್ರಸ್ವಾಮಿ, ಮರಿಸ್ವಾಮಿ, ನಂಜೇದೇವನಪುರ ಪುರುಷೋತ್ತಮ್, ಶೇಖರ್, ಎಚ್.ಎಂ.ಮಹದೇವಶೆಟ್ಟಿ, ಹನುಮಂತು ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *