ವಿಜಯನಗರ ಬಡಾವಣೆಗೆ ಮೂಲಭೂತ ಸೌಕರ್ಯಕ್ಕಾಗಿ ಎಡಿಸಿಗೆ ಮನವಿ

ನ.20 ರೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಸಿಎಂ ಎದುರು ಪ್ರತಿಭಟನೆ : ನಿವಾಸಿಗಳ ಎಚ್ಚರಿಕೆ

ಚಾಮರಾಜನಗರ: ನಗರದ 8 ನೇ ವಾರ್ಡನ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದ ಸಮೀಪದಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ವಿಜಯನಗರ ಬಡಾವಣೆಗೆ  ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು  ಒತ್ತಾಯಿಸಿ ನಿವಾಸಿಗಳು ನಗರದ ಜಿಲ್ಲಾಡಳಿತ ಭವನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಬಡಾವಣೆ ನಿರ್ಮಾಣಗೊಂಡು ಸುಮಾರು 15 ವರ್ಷಗಳೇ ಆಗಿದ್ದರು ಕೂಡ  ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿಲ್ಲ. ಪಕ್ಷದ ಮಹದೇಶ್ವರ ಬಡಾವಣೆ, ಡಿ ಆರ್ ಪೋಲಿಸ್ ಕ್ವಾಟ್ರರ್ಸ್ ನಿಂದ ಬರುವ ಚರಂಡಿ ನೀರಿನ ಮುಖ್ಯ ಕಾಮಗಾರಿಯು ಸ್ಥಗಿತಗೊಂಡಿರುವ ಕಾರಣ  ನಮ್ಮ ಬಡಾವಣೆ ಗೆ ನೀರು ಬಂದು ತುಂಬಿಕೊಂಡು ತೊಂದರೆ ಆಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಬೇಕು.
     ಈ ಬಡಾವಣೆಯು ನಂಜನಗೂಡು ರಸ್ತೆಯ ಕೈಗಾರಿಕಾ ಪ್ರದೇಶಕ್ಕೆ ಸೇರಿಸಿದ್ದು, ಮನೆಯ ತೆರಿಗೆ ಕಮರ್ಷಿಯಲ್ ತೆರಿಗೆಯಾಗಿ ಮಾರ್ಪಾಡಾಗಿರುತ್ತದೆ. ಇದರ ಬಗ್ಗೆ ನಗರಸಭಾ ಪೌರಾಯುಕ್ತ, ಕಂದಾಯ ಇಲಾಖೆ ಅಧಿಕಾರಿಗಳಿಗೆ  ಮನವಿ ಸಲ್ಲಿಸಿದರು ಯಾವುದೇ ಕ್ರಮಕೈಗೊಂಡಿಲ್ಲ. ಬಡಾವಣೆ ಸ್ವಚ್ಚತೆ ಇಲ್ಲದ ಕಾರಣ  ಹಾವು ,ವಿಷಜಂತುಗಳ ಆವಾಸ ಸ್ಥಾನವಾಗಿದೆ ನ.20 ರೊಳಗೆ ಸಮಸ್ಯೆ ಬಗೆಹಿಸದ್ದಿದ್ದಾರೆ ಮುಖ್ಯಮಂತ್ರಿ ಬಡಾವಣೆ ಮುಖಾಂತರ ಆಗಮಿಸುವ ವೇಳೆಯಲ್ಲಿ ರಸ್ತೆ ತಡೆ ಮಾಡುವುದಾಗಿ  ನಿವಾಸಿಗಳಾದ
ಚೂಡಾ ಮಾಜಿ ಅಧ್ಯಕ್ಷ ಆರ.ಸುಂದರ್,  ಉಮ್ಮತ್ತೂರು ಚಂದ್ರು, ನಿವಾಸಿಗಳು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ  ವಿ.ಶ್ರೀನಿವಾಸಪ್ರಸಾದ್, ಮಾದೇಶ್, ಸುರೇಶ್, ಮಹಾದೇವಸ್ವಾಮಿ, ಆಶಾ, ಸಿದ್ದಶೆಟ್ಟಿ, ಮಹೇಶ್, ಸುರೇಶ್.  ಗಂಗಾಧರ್. ಮಲ್ಲೇಶ್, ಗುತ್ತಿಗೆದಾರ.ಶಂಕರ್, ಕರಿಯನಕಟ್ಟೆ ಮಾದೇಶ್,  ಅಗ್ರಾಂ, ಸಿದ್ದಪ್ಪ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *