ಚಾಮರಾಜನಗರ: ಪರಿಶಿಷ್ಟ ಜಾತಿಯ ಶೇ.15 ರಷ್ಟು ಮೀಸಲಾತಿಯಲ್ಲಿ ಒಳಮೀಸಲಾತಿ ಬೇಡ , ಹಳೆ ಮೀಸಲಾತಿಯನ್ನು ಮುಂದುವರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಒಳಮೀಸಲಾತಿ ಪ್ರವರ್ಗ ಎ, ಪ್ರವರ್ಗ
ಬಿ, ಪ್ರವರ್ಗ ಸಿ ಎಂದು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ ಇದರಿಂದ ಎಲ್ಲ ಸವಲತ್ತುಗಳ ಎ.ಗುಂಪಿನ ಸಮುದಾಯಕ್ಕೆ ಸಿಗುತ್ತದೆ ಇದರಿಂದ ಬಿ.ಮತ್ತು ಸಿ ಗುಂಪಿನ ಸಮುದಾಯಗಳಿಗೆ ಅನ್ಯಾಯ ಆಗುತ್ತದೆ. ಆದರಿಂದ ರಾಜ್ಯ ಸರ್ಕಾರ ಒಳ ಮೀಸಲಾತಿ ಪರಿಗಣಿಸದೆ ಹಿಂದಿನ ಪರಿಶಿಷ್ಟ ಜಾತಿ ಶೇ.15ರ ಮೀಸಲಾತಿಯ ಮಾನದಂಡಗಳನ್ನು ಮಾಡುವ ಮೂಲಕ ಪ್ರವರ್ಗ ಬಿ. ಪ್ರವರ್ಗ ಸಿ
ಗುಂಪಿನ ಸಮುದಾಯಕ್ಕೆ
ನ್ಯಾಯ ಕೊಡಿಸಿಕೊಡಬೇಕು ಎಂದು
ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಕೊಲೋಂಬೋ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಲಂಬಾಣಿ ಸೇವಾ ಸಂಘದ ಜಿಲ್ಲಾಧ್ಯಕ್ಷ ಶಿವಾಜಿ ಆರ್ .ಮೆಘಾವತ್, ತಾ.ಪಂ.ಮಾಜಿ ಸದಸ್ಯ ಕುಮಾರ್ ನಾಯಕ್, ಕೊರಮ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀನಿವಾಸಮೂರ್ತಿ, ವೆಂಕಟೇಶ್ ನಾಯಕ್, ಬಾಲಾಜಿ ನಾಯಕ್, ಪಳನಿಸ್ವಾಮಿ,
ಗ್ರಾ.ಪಂ.ಮಾಜಿ ಬಸವರಾಜು, ಜ್ಯೋತಿ, ಉಲ್ಲೇಶ್ ನಾಯಕ್, ನಾಗೇಶ್ ನಾಯಕ್, ಉಮಾಶಂಕರ್, ವೆಂಕಟೇಶ್ ನಾಯಕ್, ಬಾಲಾಜಿ ನಾಯಕ್ ಇತರರು ಹಾಜರಿದ್ದರು.