ನಗರದ ದೊಡ್ಡರಸನ ಕೊಳಕ್ಕೆ ಶಾಶ್ವತ ನೀರು ತುಂಬಿಸುವಂತೆ ಡಿಸಿಗೆ ಮನವಿ

ಚಾಮರಾಜನಗರ: ನಗರದ ಅತ್ಯಂತ ಪ್ರಮುಖ ಕೊಳವಾದ ದೊಡ್ಡರಸಿನ ಕೊಳಕ್ಕೆ ಕೆರೆ, ನದಿಯಿಂದ ಶಾಶ್ವತವಾಗಿ ನೀರು ತುಂಬಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ವತಿಯಿಂದ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಅವರಿಗೆ ಮನವಿ ಸಲ್ಲಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪದಿಂದ ಹಾಗೂ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗದೆ ಅಂತರ್ಜಲ
ತೀವ್ರ ಕುಸಿತಕ್ಕೆ ಕಾರಣವಾಗಿದೆ. ಚಾಮರಾಜನಗರದಲ್ಲಿದ್ದ ಅನೇಕ ಕೊಳಗಳನ್ನು ಮುಚ್ಚಿಸಿದ ಪರಿಣಾಮ ಪಟ್ಟಣದಲ್ಲಿ ನೀರು ಸರಿಯಾಗಿ ಶೇಖರಣೆಯಾಗದೆ ತೀವ್ರ ನೀರಿನ ಸಮಸ್ಯೆ ಆಗಿದೆ. ಈ ಹಿಂದೆ ಚಾಮರಾಜನಗರದಲ್ಲಿ ಸುಮಾರು 7, 8 ಕೊಳಗಳಿದ್ದು ನೀರು ಸಂಪೂರ್ಣ ಶೇಖರಣೆಯಾಗಿ ಬಾವಿಗಳು ಮತ್ತು ಬೋರ್ ವೆಲ್ ಗಳ
ಲ್ಲಿ ನೀರು ಸದಾ ಇರುತ್ತಿತ್ತು. ಇದು ಇತ್ತೀಚಿಗೆ ನೀರು ಇಲ್ಲದಂತಾಗಿದೆ. ಆದ್ದರಿಂದ ತಾವು ದೊಡ್ಡ ಅರಸಿನ ಕೊಳಕ್ಕೆ ಶಾಶ್ವತವಾಗಿ ನೀರನ್ನು ತುಂಬಿಸುವ ವ್ಯವಸ್ಥೆಯನ್ನು ಮಾಡಿದರೆ ಪಟ್ಟಣ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗಲಿದೆ. ಈ ಹಿಂದೆ ದೊಡ್ಡ ಅರಸಿನ ಕೊಳದ ಪಕ್ಕದಲ್ಲಿ ದೊಡ್ಡ ಕೆರೆಯಿದ್ದು ಇಲ್ಲಿಗೆ ಮಳೆಯಾದ ಸಂದರ್ಭದಲ್ಲಿ ನೀರು ದೊಡ್ಡ ಕೆರೆಗೆ ತುಂಬಿ ಆ ನಂತರ ದೊಡ್ಡ ಅರಸಿನ ಕೊಳವು ತುಂಬಿ ಆ ನಂತರ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂದೆ ಇದ್ದ ಕಲ್ಯಾಣಿಗೂ ನೀರು ತುಂಬುವ ವ್ಯವಸ್ಥೆ ಇತ್ತು. ಆದರೆ ಈಗ ಇಲ್ಲದಿರುವುದರಿಂದ ತಾವು ಈ ತಕ್ಷಣ ಪ್ರಸಿದ್ಧ ದೊಡ್ಡ ಅರಸಿನ ಕೊಳಕ್ಕೆ ಶಾಶ್ವತವಾದಂತಹ ಯಾವುದಾದರು ನದಿ, ಕೆರೆಯ ಮೂಲದಿಂದ ಶಾಶ್ವತವಾಗಿ ನೀರನ್ನು ತುಂಬಿಸುವ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷ ಶ್ರೀನಿವಾಸಗೌಡ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪಣ್ಯದಹುಂಡಿ ರಾಜು, ನಿಜಧ್ವನಿ ಗೋವಿಂದರಾಜ, ರವಿಚಂದ್ರಪ್ರಸಾದ್ ಕಹಳೆ, ರಾಚಪ್ಪ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *