ಒಳಮೀಸಲಾತಿಯಲ್ಲಿ ಬಲಗೈ ಸಂಬಂಧಿಸಿದ ಜಾತಿಗಳಿಗೆ ಅನ್ಯಾಯದ ವಿರುದ್ಧ ಸದನದಲ್ಲಿ ಧ್ವನಿ ಎತ್ತುವಂತೆ ಶಾಸಕರಿಗೆ ಮನವಿ

ಚಾಮರಾಜನಗರ: ಒಳಮೀಸಲಾತಿಯಿಂದ ಬಲಗೈ ಸಂಬಂಧಿಸಿದ ಜಾತಿಗಳಿಗೆ ಅನ್ಯಾಯ ಆಗುವುದನ್ನು ಕುರಿತು ಶಾಸನ ಸಭೆಯಲ್ಲಿ ಮಾತನಾಡುವಂತೆ ಒತ್ತಾಯಿಸಿ.ಗಡಿ ಕಟ್ಟೆ ಯಜಮಾನರು, ಬಲಗೈ ಸಮುದಾಯಗಳ ಒಕ್ಕೂಟ ,ಡಾ.ಬಿ.ಆರ್.ಅಂಬೇಡ್ಕರ್ ಮಹಾಸಭಾ ವತಿಯಿಂದ ನಗರದ ಪ್ರವಾಸಿಮಂದಿರದಲ್ಲಿ  ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
  ಕರ್ನಾಟಕ ಸರ್ಕಾರವು ತರಾತುರಿಯಲ್ಲಿ ಒಳಮೀಸಲಾತಿ ಪಾಸ್ ಮಾಡಲು ಹೊರಟಿರುವುದು ಪರಿಶಿಷ್ಟ ಜಾತಿಯ ಬಲಗೈ ಸಂಬಂಧಿತ ಜಾತಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಕುರಿತು ಶಾಸನ ಸಭೆಯಲ್ಲಿ ಸಮರ್ಥವಾಗಿ ಮಾತನಾಡಿ, ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರವನ್ನು ಒತ್ತಾಯ ಮಾಡಬೇಕೆಂದು ಈ ಮೂಲಕ ನಮ್ಮ ಸಂಘಟನೆಯು ಒತ್ತಾಯ ಮಾಡುತ್ತದೆ.
ಒಳಮೀಸಲಾತಿಯನ್ನು ಹೇಗೆ ಸರಿಪಡಿಸಬೇಕು ಎಂಬುದರ ಬಗ್ಗೆ ತಮ್ಮ ಗಮನಕ್ಕೆ
ಮೀಸಲಾತಿ ಜಾರಿಯಲ್ಲಿ ಇರುವಾಗ ಒಳಮೀಸಲಾತಿ ಅವೈಜ್ಞಾನಿಕ ಒಂದು ವೇಳೆ ಒಳಮೀಸಲಾತಿ ಜಾರಿ ಮಾಡುವುದಾದರೆ ರೋಸ್ಟರ್ ಬಿಂದುವಿನಿಂದ ಎಲ್ಲಾ ಸಮುದಾಯಕ್ಕೂ ಅನ್ಯಾಯವಾಗುತ್ತದೆ. ಇದನ್ನು ಸರಿಪಡಿಸಬೇಕು.ಸರ್ಕಾರ ಶೈಕ್ಷಣಿಕ ಪ್ರವೇಶ ಸಂದರ್ಭದಲ್ಲಿ ಮೂರಕ್ಕಿಂತ ಕಡಿಮೆ ಪ್ರವೇಶಾತಿಗಳು ಇದ್ದರೆ ಇಂತಹ ಸಂದರ್ಭದಲ್ಲಿ ಎಸ್.ಸಿ. ಸಾಮಾನ್ಯ ಎಂದು ಪರಿಗಣಿಸಿ, ಪ್ರವರ್ಗ ಎ ಬಿ ಸಿ ವರ್ಗಗಳು ಅರ್ಜಿ ಸಲ್ಲಿಸಿ ಪ್ರದೇಶಕ್ಕೆ ಅವಕಾಶ ಮಾಡಿಕೊಡಬೇಕು. ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿ ಮಸೂದೆಯಲ್ಲಿ ಈ ಮಾರ್ಪಾಡು ತುಂಬಾ ಅಗತ್ಯವಾಗಿರುತ್ತದೆ.
  ಸರ್ಕಾರಿ ಉದ್ಯೋಗ ನೇಮಕಾತಿ ಸಂದರ್ಭದಲ್ಲಿ ಮೂರಕ್ಕಿಂತ ಕಡಿಮೆ ಹುದ್ದೆಗಳು ಪರಿಶಿಷ್ಟ ಜಾತಿಗೆ ಮೀಸಲಾದಾಗ ಈ ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡಲು ಮುಂದಾದಾಗ ಎಸ್.ಸಿ. ಸಾಮಾನ್ಯ ಎಂದು ಪರಿಗಣಿಸಿ, ಹುದ್ದೆಗಳಿಗೆ ಎ ಬಿ ಸಿ ವರ್ಗಗಳು ಅರ್ಜಿ ಸಲ್ಲಿಸುವಂತೆ ಮಾಡಬೇಕು. ಸರ್ಕಾರ ಜಾರಿಗೆ ತಂದಿರುವ ಒಳಮೀಸಲಾತಿ ಮಸೂದೆಯಲ್ಲಿ ಈ ಮಾರ್ಪಾಡು ತುಂಬಾ ಅಗತ್ಯವಾಗಿರುತ್ತದೆ.
ಸುಪ್ರೀಂ ಕೋರ್ಟನ ಆದೇಶದಂತೆ ಪರಿಶಿಷ್ಟ ಜಾತಿ ಒಳಗೆ ತಾರತಮ್ಯ ಇರುವುದರ ಬಗ್ಗೆ ಸರ್ಕಾರದಲ್ಲಿ ನಿಖರವಾದ ದತ್ತಾಂಶದ ಮಾಹಿತಿ ಇಲ್ಲ. ಹಾಗಾಗಿ ಒಳಮೀಸಲಾತಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕು.
ಪರಿಶಿಷ್ಟ ಜಾತಿಯನ್ನು ಪ್ರವರ್ಗ ಬಿ ಸಿ ವರ್ಗೀಕರಣ ಮಾಡಿರುವುದು ಸಂವಿಧಾನ ವಿರೋಧಿ. ಹಾಗಾಗಿ ಈ ವರ್ಗೀಕರಣವನ್ನು ಈ ಕೂಡಲೇ ತೆಗೆಯಬೇಕು.
ಪರಿಶಿಷ್ಟ ಜಾತಿಯೊಳಗೆ ಒಂದು ಹುದ್ದೆಗೆ ಅರ್ಹ ಅಭ್ಯರ್ಥಿ ಸಿಗದ ಸಮಯದಲ್ಲಿ ಈ ಹುದ್ದೆಯನ್ನು ಬ್ಯಾಕ್‌ಲಾಗ್ ಎಂದು ಪರಿಗಣಿಸಬೇಕು.
ಇಲ್ಲಿಯತನಕ ಎಲ್ಲಾ ಸರ್ಕಾರಿ ಹುದ್ದೆಯಲ್ಲಿರುವ ಪರಿಶಿಷ್ಟ ಜಾತಿ ನೌಕರರು ಹುದ್ದೆಯನ್ನು ಪಡೆದಿರುವುದು ಆದಿ ಕರ್ನಾಟಕ, ಆಧಿ ಆಂಧ್ರ, ಆದಿ ದ್ರಾವಿಡ ಎಂದು, ಆ ಕಾರಣಕ್ಕೆ ಈ ಎಲ್ಲಾ ಹುದ್ದೆಗಳನ್ನು ಪರಿಗಣಿಸಿ ಒಳಮೀಸಲಾತಿ ಜಾರಿ ಮಾಡಿರುವುದು
ಆದಿ ಕರ್ನಾಟಕ, ಅದಿ ಆಂಧ್ರ, ಆದಿ ದ್ರಾವಿಡ ಸಮುದಾಯಕ್ಕೆ ಸೇರಿದ ಜನರನ್ನು ಪ್ರವರ್ಗ ಎ ಬಿ ಸಿ ಗುಂಪಿನಲ್ಲಿ ಯಾವುದಾದರೂ ಗುಂಪಿಗೂ ಸೇರಿಸಬಹುದು ಎಂಬುದು ಸರಿಯಾದ ಕ್ರಮವಲ್ಲ, ಇದನ್ನು ಸರಿಪಡಿಸಬೇಕು.
ಈ ಎಲ್ಲಾ ಕಾರಣಗಳಿಂದ ಒಳಮೀಸಲಾತಿಯು ತುಂಬಾ ಗೊಂದಲಮಯವಾಗಿದ್ದು, ಈ ಎಲ್ಲಾ ತಾರತಮ್ಯಗಳನ್ನು ಸರಿಪಡಿಸುವಂತೆ ಒತ್ತಾಯಿಸಿ, ಶಾಸನ ಸಭೆಯಲ್ಲಿ ಗಟ್ಟಿದ್ದನಿಯಲ್ಲಿ ಮಾತನಾಡಬೇಕೆಂದು ಕಟ್ಟೆ ಗಡಿ ಯಜಮಾನರು. ಬಲಗೈ ಸಮುದಾಯದ ಒಕ್ಕೂಟ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಮಹಾಸಭಾ ಶಾಸಕರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಆದಿಕರ್ನಾಟಕ ಮಹಾಸಭಾದ ಅಧ್ಯಕ್ಷ ಉಮೇಶ್‌ಕುದರ್‌, ಗೌರವಾಧ್ಯಕ್ಷ ಸಿ.ಕೆ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಗಣೇಶ್‌ಪ್ರಸಾದ್‌, ನಗರಸಭಾ ಮಾಜಿ ಸದಸ್ಯ ಬಸವರಾಜು, ತಾ.ಪಂ.ಮಾಜಿ ಸದಸ್ಯ ಶಿವಸ್ವಾಮಿ, ಗ್ರಾ.ಪಂ.ಮಾಜಿ ಅಧ್ಯಕ್ಷ ರೇಚಂಬಳ್ಳಿ. ವಾಸು, ಗಾಳೀಪುರ ಪುಟ್ಟಸ್ವಾಮಿ.. ರಂಗಸ್ವಾಮಿ, ಕುಂಭೇಶ್ವರ ಸ್ವಾಮಿ ರಾಮಸಮುದ್ರ ಸುರೇಶ್, ಶಿವರಾಜ್ ಸಿದ್ದಯ್ಯನಪುರ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *