ವಿದ್ಯುತ್ ಚಿತಾಗಾರ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಪೌರಾಯುಕ್ತರಿಗೆ ಮನವಿ

ಚಾಮರಾಜನಗರ:  ಜಿಲ್ಲಾ ಕೇಂದ್ರದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಮಾಡುವಂತೆ ಒತ್ತಾಯಿಸಿ ವಿಜಯಕುಮಾರ್ ಜಟ್ಟಪ್ಪ ಅವರ ನೇತೃತ್ವದಲ್ಲಿ  ನಗರದ ನಗರಸಭೆ ಕಚೇರಿಯಲ್ಲಿ
ಪೌರಾಯುಕ್ತ ಪರಶುರಾಮ ಛಲವಾದಿ ಅವರಿಗೆ ಮನವಿ ಸಲ್ಲಿಸಲಾಯಿತು.
  2020-21 ರಿಂದಲೂ ಸಹ ಚಾಮರಾಜನಗರ ದಲ್ಲಿ ಒಂದು ಸುಸಜ್ಜಿತ ವಿದ್ಯುತ್ ಚಾಲಿತ ಚಿತಾಗಾರ ನಿರ್ಮಾಣ ಮಾಡಲು ಹೋರಾಟ ಮಾಡುತ್ತಾ ಜಿಲ್ಲೆಯ ಶಾಸಕರು, ಸಂಸದರು, ಉಸ್ತುವಾರಿ ಮಂತ್ರಿಗಳು, ಮುಖ್ಯ ಮಂತ್ರಿಗಳು, ಜಿಲ್ಲಾಧಿಕಾರಿಗಳು ಎಲ್ಲರಿಗೂ ಅರ್ಜಿ ಸಲ್ಲಿಸಿ ಒತ್ತಾಯ ಮಾಡಿ ಸಂಬಂಧಿಸಿದ ಸಂಸದರು, ಉಸ್ತುವಾರಿ ಮಂತ್ರಿಗಳು, ಮುಖ್ಯ ಮಂತ್ರಿಗಳ ಕಛೇರಿಯಿಂದ ಪತ್ರವ್ಯವಹಾರ ನಡೆದು ತಮ್ಮ ಕಛೇರಿಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದ್ದು ಸರಿಯಷ್ಟೆ. 2024-25ನೇ ಸಾಲಿನ ಆಯವ್ಯಯ ಮಂಡಿಸಿದ ಅಂದಿನ ಆಡಳಿತಾಧಿಕಾರಿಗಳು ವಿದ್ಯುತ್ ಚಾಲಿತ ಚಿತಾಗಾರಕ್ಕೆ 2.50 ಕೋಟಿ ರೂ.ಗಳನ್ನು ಮೀಸಲು ಇಟ್ಟಿರುತ್ತಾರೆ. ಈವರೆವಿಗೂ ಸಹ ಕ್ರಮ ಕೈಗೊಂಡಿಲ್ಲ. ಆದ್ದರಿಂದ  2026-27ನೇ ಆಯವ್ಯಯದಲ್ಲಿ
ವಿದ್ಯುತ್ ಚಾಲಿತ ಚಿತಾಗಾರದ ಕಾಮಗಾರಿಯನ್ನು ಆರಂಭಿಸಿ ಕೂಡಲೇ ಚಿತಾಗಾರ  ನಿರ್ಮಿಸಿ  ಶವ ಸಂಸ್ಕಾರಕ್ಕೆ  ಅವಕಾಶ ಮಾಡಿಕೊಡಬೇಕು ಎಂದು ಪೌರಾಯುಕ್ತರಿಗೆ ಸಲ್ಲಿಸಿರುವ ಮನವಿಯಲ್ಲಿ ವಿಜಯಕುಮಾರ್ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ
ವೇಲುಮಣಿ, ಮಹದೇವಪ್ಪ, ರಂಗಸ್ವಾಮಿ ನಾಯಕ, ಅಮಚವಾಡಿ ಶಿವಣ್ಣ ಹಾಜರಿದ್ದರು.

Leave a Reply

Your email address will not be published. Required fields are marked *