ಒಳಮೀಸಲಾತಿಯಲ್ಲಿ 101 ಜಾತಿಗಳಿಗೂ ಸಮಾನವಾಗಿ ನ್ಯಾಯ ಕೊಡಿಸುವಂತೆ ಜಿಲ್ಲೆಯ  ಶಾಸಕರುಗಳಿಗೆ ಮನವಿ

  • ಎರಡು ಬಸ್ಗಳಲ್ಲಿ ತೆರಳಿ ಅವರ ಇರುವ ಸ್ಥಳದಲ್ಲಿ ಶಾಸಕರಿಗೆ ಮನವಿ ಸಲ್ಲಿಕೆ.
  • ಒಳ ಮೀಸಲಾತಿ ಬೇಡ, ಹಳೆ ಮೀಸಲಾತಿ ಮುಂದುವರಿಸುವಂತೆ ಘೋಷಣೆ ಕೂಗಿದರು.


ಚಾಮರಾಜನಗರ:  ಒಳ ಮೀಸಲಾತಿ ಬಗ್ಗೆ ಇರುವ ಗೊಂದಲಗಳು, ಸಮಸ್ಯೆಗಳು ಹಾಗೂ ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವವರೆವಿಗೆ ಒಳ ಮೀಸಲಾತಿ ರಹಿತ ಹಳೆ ಮೀಸಲಾತಿಯನ್ನು ಜಾರಿಗೊಳಿಸಿ
ಹೊರಡಿಸಿರುವ ಆದೇಶವನ್ನು ಮುಂದುವರೆಸಲು  ಸದನದಲ್ಲಿ ಧ್ವನಿ ಎತ್ತುವಂತೆ  ಒತ್ತಾಯಿಸಿ
ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ, ಗಡಿ ಕಟ್ಟೆ ಯಜಮಾನರುಗಳು ಹಾಗೂ ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ಸಂರಕ್ಷಣಾ ಸಮಿತಿ ವತಿಯಿಂದ  ಪ್ರತಿಭಟನೆ ನಡೆಸಿ  ಜಿಲ್ಲೆಯ ಶಾಸಕರಾದ
ಎಂ.ಎಸ್.ಐ.ಎಲ್ ಅಧ್ಯಕ್ಷರು,  ಶಾಸಕ ಸಿ.ಪುಟ್ಟರಂಗಶೆಟ್ಟಿ , ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಹನೂರು ಶಾಸಕ ಮಂಜುನಾಥ್ ,ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ ಪ್ರಸಾದ್,
ಅವರಿಗೆ ಮನವಿ ಸಲ್ಲಿಸಲಾಯಿತು.
   ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ನಗರದ ಪ್ರವಾಸಿಮಂದಿರದಲ್ಲಿ, ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ನಗರದ ಪಿಡಬ್ಲ್ಯೂಡಿ ಬಡಾವಣೆಯ ನಿವಾಸದಲ್ಲಿ, ಶಾಸಕ ಗಣೇಶಪ್ರಸಾದ್ ಅವರಿಗೆ ಹಾಗೂ ಹನೂರು ಶಾಸಕ ಮಂಜುನಾಥ್ ಅವರಿಗೆ ಹನೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
  ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಗೆಜೆಟೆಡ್ ಪ್ರೋಬ್ರೆಷನರಿ ಅಧಿಕಾರಿಗಳ ನೇಮಕಾತಿಗೆಸಂಬಂಧಿಸಿದಂತೆ ಕೆಪಿಎಸ್ ಸಿ ಗೆ ನೀಡಿರುವ ತೀರ್ಪಿನ ಶೇಕಡ 17ರ ಮೀಸಲಾತಿಯನ್ನು ರದ್ದು ಪಡಿಸಿದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ. ಉಚ್ಚ ನ್ಯಾಯಾಲಯವು ಈಗಾಗಲೇ ಅಧಿ ಸೂಚನೆ ಹೊರಡಿಸಿರುವುದನ್ನು ಹೊರತು ಪಡಿಸಿ ಯಾವುದೇ ಹೊಸ ಅಧಿ ಸೂಚನೆ ಹೊರಡಿಸದಂತೆ ತಡೆಯಾಜ್ಞೆ ನೀಡಿದೆ ಹಾಗೂ ಶೇಕಡ 15+3ರ ಮೀಸಲಾತಿ ಜಾರಿಗೆ ಯಾವುದೇ ತೊಂದರೆ ಇಲ್ಲ ಎಂದು ಮೌಖಿಕವಾಗಿ ಸೂಚಿಸಿರುತ್ತದೆ.

 ಅಲೆಮಾರಿ ಸಮುದಾಯವು ಒಳಮೀಸಲಾತಿಗೆ ಸಂಬಂಧಿಸಿದಂತೆ, ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣದಲ್ಲಿ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬ ಷರತ್ತು ವಿಧಿಸಿ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ಸೂಚನೆ ನೀಡಿರುತ್ತದೆ.
ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ, ಪ್ರವರ್ಗ- A.B.C ಎಂದು ವರ್ಗೀಕರಿಸಿ ಜಾತಿ ಪ್ರಮಾಣ ಪತ್ರ ವಿತರಿಸಲು ಹೊರಡಿಸಿರುವ ಆದೇಶದಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಬಹಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಒಳಮೀಸಲಾತಿಯ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿ ಅಲ್ಲದೇ ಇತರೆ ಸಮುದಾಯದವರೆವಿಗೂ ಉದ್ಯೋಗ ನೇಮಕಾತಿಯಲ್ಲಿ ಸಮಸ್ಯೆಯಾಗಿದ್ದು, ವಯೋಮಿತಿ ಮೀರಿದ ಅಭ್ಯರ್ಥಿಗಳು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ರಾಜ್ಯ ಸರ್ಕಾರವು ಮೀಸಲಾತಿ ಗೊಂದಲ ಮುಗಿದು ನ್ಯಾಯಾಲಯದ ಅಡೆತಡೆಗಳು ನಿವಾರಣೆಯಾಗುವವರೆವಿಗೆ “ಒಳ ಮೀಸಲಾತಿ ರಹಿತ ಹಳೆ ಮೀಸಲಾತಿ” ಪದ್ಧತಿಯನ್ನೇ ಮರು ಜಾರಿ ಮಾಡಿ ದಿನಾಂಕ: 27.02.2026 ರಂದು ಶೇಖಡ 15-3 ರಷ್ಟು ಮೀಸಲಾತಿಯನ್ನು ಮುಂದುವರೆಸಿ ಹೊರಡಿಸಿರುವ ಆದೇಶವನ್ನು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟವು ಸ್ವಾಗತಿಸುತ್ತದೆ.  ಒಳಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳಿಗೂ ಸಮಾನವಾಗಿ ನ್ಯಾಯ ಕೊಡಿಸಿಕೊಡಬೇಕು ಎಂದು ಶಾಸಕರಿಗೆ ಸಲ್ಲಿಸಿರುವ ಮನವಿಯಲ್ಲಿ ಬಲಗೈ ಸಮುದಾಯ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
  ಬಲಗೈ ಸಮುದಾಯದ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಯ್ಯನಪುರ ಶಿವಕುಮಾ‌ರ್, ಗಡಿಯಜಮಾನರಾದ ರವಿಕುಮಾರ್, ಈರಣ್ಣ, ಪಾಪಣ್ಣ, ಸೋಮಣ್ಣ, ಮುದ್ದಮಲ ಯ್ಯ, ಮುಖಂಡರಾದ ಆರ್.ಮಹದೇವು, ನಗರಸಭಾ ಮಾಜಿ ಆ‌ರ್.ಪಿ.ನಂಜುಂಡಸ್ವಾಮಿ, ನಲ್ಲೂರು ಮಹದೇವಸ್ವಾಮಿ, ವೀರಭದ್ರ, ನಾಗಯ್ಯ, ಸೋಮೇಶ್, ಸೋಮವಾರಪೇಟೆ ಮಹದೇವಯ್ಯ, ಮಂಗಲ ಕುಮಾರ್, ಜ್ಯೋತಿಗೌಡನಪುರ ಲಿಂಗರಾಜು, ದಡದಹಳ್ಳಿ ಗೋವಿಂದರಾಜು ಸೇರಿದಂತೆ 100 ಹೆಚ್ಚು ಮಂದಿ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *