ಚಾಮರಾಜನಗರ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕಲೆ ಸಾಹಿತ್ಯ, ಸಂಗೀತ, ನೃತ್ಯ, ಸಾಂಸ್ಕೃತಿಕ, ಅತ್ಯುತ್ತಮ ನಿರೂಪಕಿ, ಪ್ರತಿಭಾವಂತ ವಿದ್ಯಾರ್ಥಿನಿ, ಇವರನ್ನು ಗುರುತಿಸಿ ನಗರದ ಪ್ರತಿಷ್ಠಿತ ಸಂಸ್ಥೆಯಾದ ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಹಾಗೂ ಶ್ರೀ ವರಮಹಾಲಕ್ಷ್ಮಿ ಸಾಂಸ್ಕೃತಿಕ ಕ್ರೀಡಾ ಸೇವೆಯ ಸಂಸ್ಥೆ ವತಿಯಿಂದ ರಾಜ್ಯಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಎಂದು ವೇದಿಕೆ ಅಧ್ಯಕ್ಷ ಜಿ.ಬಂಗಾರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಯಾವುದಾದರೂ ವೃತ್ತಿಯಲ್ಲಿ ಸಾಧನೆ ಮಾಡಿರಬೇಕು. ಪ್ರಶಸ್ತಿ ಪತ್ರ, ಫೆÇೀಟೋಸ್, ಪತ್ರಿಕೆ ಕಟ್ಟಿಂಗ್ಸ್ ಇರಬೇಕು ಸರ್ಕಾರಿ, ಖಾಸಗಿ, ಉದ್ಯೋಗ ಮತ್ತು ಓದುತ್ತಿರುವರು, ಸಮಾಜ ಸೇವೆಯಲ್ಲಿ ಕರ್ತವ್ಯ ನಿರತ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದಾಗಿದೆ.
ಫೆಬ್ರವರಿ 29ರ ಗುರುವಾರ ಕೊನೆಯ ದಿನಾಂಕ. ವಿಳಾಸ: ಜಿ ಬಂಗಾರು, ಫಲ ಮೃತ ಐಸ್ ಕ್ರೀಮ್ ಪಾರ್ಲರ್, ಭುವನೇಶ್ವರಿ ವೃತ ಸಮೀಪ ಚಾಮರಾಜನಗರ. ಮಾಹಿತಿಗಾಗಿ 9242252119 ಸಂಪರ್ಕಿಸಬಹುದು ಎಂದು ಜಿ.ಬಂಗಾರು ತಿಳಿಸಿದ್ದಾರೆ.