ಜಿಲ್ಲೆಯ 16 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿಗಳು ಗ್ರೇಡ್-2 ನಿಂದ ಗ್ರೇಡ್-1 ಪಂಚಾಯಿತಿಗಳಾಗಿದ್ದು ಇದಕ್ಕೆ ತಕ್ಕಂತೆ ಜಿಲ್ಲೆಯಲ್ಲಿ 16 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. 

  ಚಾಮರಾಜನಗರ ತಾಲೂಕಿನ ದೊಡ್ಡಮೋಳೆ, ಹರವೆ, ಕೂಡ್ಲೂರು, ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು, ಬೊಮ್ಮಲಾಪುರ, ಬೊಮ್ಮನಹಳ್ಳಿ, ಮಂಗಲ, ಪುತ್ತನಪುರ, ಹನೂರು ತಾಲೂಕಿನ ಕಣ್ಣೂರು, ಕುರಟ್ಟಿ ಹೊಸೂರು, ಮಂಗಲ, ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ, ತೆಳ್ಳನೂರು, ಸಿಂಗನಲ್ಲೂರು, ಯಳಂದೂರು ತಾಲೂಕಿನ ಮಾಂಬಳ್ಳಿ, ಯರಗಂಬಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಅವಕಾಶವಿದೆ. 

  ಆಸಕ್ತ ಅಭ್ಯರ್ಥಿಗಳು https://sevasidhu.karnataka.gov.in/gramaone/gramaone franchise. Kannada.html  ಜಾಲತಾಣದ ಮುಖಾಂತರ ಮಾರ್ಚ್ 15ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಸಹಾಯವಾಣಿ ಸಂಖ್ಯೆ 9148712473 ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *