ಚಾಮರಾಜನಗರ: ಆದರ್ಶ ವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ 7 ರಿಂದ 9ನೇ ತರಗತಿಯವರೆಗೆ ಖಾಲಿ ಇರುವ ಪ್ರವೇಶಗಳನ್ನು ಭರ್ತಿ ಮಾಡಲು ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕನ್ನಡ, ಇಂಗ್ಲಿμï, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ತಲಾ ಶೇ.16ರಷ್ಟು ಪ್ರಶ್ನೆಗಳಿದ್ದು ಶೇ.10 ರಷ್ಟು ಸಾಮಾನ್ಯ ಜ್ಞಾನ ಹಾಗೂ ಭೌದ್ದಿಕ ಸಾಮಥ್ರ್ಯದ ಮೇಲೆ ಒಟ್ಟು 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.
7ನೇ ತರಗತಿಯಲ್ಲಿ ಸಾಮಾನ್ಯ 2, ಪರಿಶಿಷ್ಟ ಜಾತಿಗೆ 1, ಸಿ-1 ಗೆ 1 ಸೇರಿದಂತೆ ಒಟ್ಟು 4 ಪ್ರವೇಶಗಳು ಹಾಗೂ 8ನೇ ತರಗತಿಯಲ್ಲಿ ಸಾಮಾನ್ಯ 4, ಸಿ-1 ಕ್ಕೆ 1, 3ಎ ಗೆ 2 ಸೇರಿ ಒಟ್ಟು 7 ಪ್ರವೇಶಗಳು ಮತ್ತು 9ನೇ ತರಗತಿಯಲ್ಲಿ ಪರಿಶಿಷ್ಟ ಜಾತಿಗೆ 2, ಸಿ-1 ಗೆ 1, 3ಎ ಗೆ 1 ಸೇರಿ ಒಟ್ಟು 4 ಪ್ರವೇಶಗಳು ಲಭ್ಯವಿದೆ.
ಚಾಮರಾಜನಗರ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಜೂನ್ 24 ರಿಂದ ವಿತರಿಸಲಾಗುತ್ತದೆ. ಅರ್ಜಿ ಸಲ್ಲಿಸಲು ಜುಲೈ 8 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Like this:
Like Loading...
Related