ಚಾಮರಾಜನಗರದಲ್ಲಿ ಅಪ್ಪು ಹುಟ್ಟುಹಬ್ಬದ ಸಂಭ್ರಮ, ಅಭಿಮಾನಿಗಳಿಂದ ಕೇಕ್ ಕತ್ತರಿಸಿ ಹಂಚಿಕೆ, ಅನ್ನಸಂತರ್ಪಣೆ

  • ಅಪ್ಪು ಎಂದೆಂದಿಗೂ ಅಜರಾಮರ : ಮನುಕುಮಾರ್

ಚಾಮರಾಜನಗರ:  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ ಅಂಗವಾಗಿ ಅಭಿಮಾನಿ‌ ಬಳಗದ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ನಗರದ ಗುರುನಂಜಶೆಟ್ಟರ ಛತ್ರದ ಮುಂಭಾಗದಲ್ಲಿ ಅಪ್ಪು ಅಭಿಮಾನಿ ಬಳಗದ ವತಿಯಿಂದ ಅಯೋಜಿಸಿದ ಕಾರ್ಯಕ್ರಮ ದಲ್ಲಿ  ಅಪ್ಪು ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿ ಕೇಕ್ ಕತ್ತರಿಸಿ ಅಪ್ಪು ಅಮರ ಎಂದು ಜೈಕಾರ ಕೂಗಿ ಅಪ್ಪುಗೆಯ ಗುರುವನ್ನು‌ ಅಭಿಮಾನಿಗಳು ಸ್ಮರಿಸಿಕೊಂಡರು.
ನಂತರ ಅನ್ನಸಂತರ್ಪಣೆ ನಡೆಯಿತು.
  ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅಭಿಮಾನಿ ಮನುಕುಮಾರ್ ಮಾತನಾಡಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 51 ನೇ ಹುಟ್ಟುಹಬ್ಬವನ್ನು  ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಗಿದೆ.ಅಪ್ಪು ನಮ್ಮೊಂದಿಗೆ ಇಲ್ಲದಿದ್ದರೂ, ಅವರ ನಗು ಮತ್ತು ಮಾನವೀಯತೆ ಎಂದಿಗೂ ನೆನಪಿನಲ್ಲಿ ಉಳಿಯುತ್ತದೆ.  ಅವರು ಅಜರಾಮರವಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್ ಬಿಐ ವ್ಯವಸ್ಥಾಪಕ ಮಿಥುನ್, ಉಪ ವ್ಯವಸ್ಥಾಪಕ ರಾದ ಸುವಿಕಾಶ್, ಚಿಕ್ಕಣ್ಣ, ಶ್ರಾವಣ್, ವಿನಯ್,  ರಾಹುಲ್,ಸುರಾಜ್, ಬಂಗಾರನಾಯಕ, ಮಣಿ, ಸಂತೋಷ, ಹರದನಹಳ್ಳಿ ರವಿ, ನಾಗೇಂದ್ರ, ಚಂದ್ರು, ಕೃಷ್ಣ, ವಿಜಯಭಾಸ್ಕರ್, ಪ್ರತಾಪ್, ರೈಲ್ವೆ ಸುರೇಶ್,  ಅಭಿಮಾನಿ ಮನು ಕುಮಾರ್, ಶ್ರೇಷ್ಠ ಹಾಜರಿದ್ದರು.

Leave a Reply

Your email address will not be published. Required fields are marked *