ಚಾಮರಾಜನಗರ: ತುಮಕೂರು ಸಿದ್ದಗಂಗಾ ಡಾ.ಶ್ರೀ ಶಿವಕುಮಾರಸ್ವಾಮಿ ಅವರ 119ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ 5 ಸಾವಿರ ಜನತೆಗೆ ದಾಸೋಹ ವ್ಯವಸ್ಥೆ ಮಾಡಿಸಿದ ನಗರದ
ಇಂಚರ ಹೋಟೆಲ್ ಸಮೂಹದ ಮಾಲೀಕ ಸ್ಟೈಲ್ ಮಂಜುನಾಥ್ ಅವರನ್ನು ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ಕಲಾವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಇಂಚರ ಹೋಟೆಲ್ ಮುಂಭಾಗದಲ್ಲಿ ಮಂಜುನಾಥ್ ಅವರಿಗೆ ಶಾಲುಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಮಂಜುನಾಥ್ ದೇವರಸೇವೆ ಮಾಡಿದ್ದೇನೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದ ಹೇಳಿದರು
ಸಂಘದ ಅಧ್ಯಕ್ಷ ಹೊಸೂರುಶಿವಣ್ಣ, ಬಿಜೆಪಿ ಮುಖಂಡ ಬಂಗಾರನಾಯಕ, ಶಿಕ್ಷಕ ನಂಜುಂಡಸ್ವಾಮಿ, ಕನ್ನಡ ಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕ ಶಿವಲಿಂಗಮೂರ್ತಿ, ಸಿ.ಡಿ.ಪ್ರಕಾಶ್, ಶಿವಣ್ಣ, ಸಂದರ್, ಜಾನಪದ ಗಾಯಕ ಗುರುರಾಜು, ಉತ್ತುವಳ್ಳಿ ಆಶ್ರಯ ವೃದ್ದ ಮತ್ತು ಅನಾಥಾಶ್ರಮದ ರಮೇಶ್ ಪ್ರಭು ಇತರರು ಹಾಜರಿದ್ದರು.