
ಚಾಮರಾಜನಗರ: ನಗರದ ಉತ್ತುವಳ್ಳಿ ಸಮೀಪವಿರುವ ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್ ವೃದ್ಧ ಮತ್ತು ಅನಾಥಾಶ್ರಮಕ್ಕೆ ಸಮಾಜ ಸೇವಕ ಸುರೇಶ್ ಗೌಡ ಅವರ ಸಹೋದರಿ ನಂಜನಗೂಡಿನ ಸುಧಾ ಶಿವಕುಮಾರ್ 10 ಸಾವಿರ ರೂ. ದೇಣಿಗೆ ನೀಡಿದರು.
ಚೆಕ್ ವಿತರಿಸಿ ಮಾತನಾಡಿದ ಸುಧಾ ಶಿವಕುಮಾರ್ ಅವರು, ವೃದ್ಧ ಮತ್ತು ಅನಾಥಾಶ್ರಮ ನಡೆಸುವುದು ಅಷ್ಟು ಸುಲಭವಲ್ಲ. ಈ ಕೆಲಸಕ್ಕೆ ತುಂಬಾ ತಾಳ್ಮೆ, ಸಮಾನ ಮನಸ್ಸು ಅಗತ್ಯ. ಕಳೆದ ಎರಡು ವರ್ಷಗಳಿಂದ ಇಂತಹ ಪುಣ್ಯದ ಕೆಲಸ ಮಾಡುತ್ತಿರುವ ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್ ವೃದ್ಧ ಮತ್ತು ಅನಾಥಾಶ್ರಮದ ಅಧ್ಯಕ್ಷರಾದ ರಮೇಶ್ ಪ್ರಭು ಅವರ ಸೇವೆಯನ್ನು ಶ್ಲಾಘಿಸಿದರು.

ಈ ಅನಾಥಾಶ್ರಮಕ್ಕೆ ಈ ಹಿಂದೆ ಹಲವು ಬಾರಿ ಭೇಟಿ ನೀಡಿದ್ದೆ. ಅಲ್ಲಿನ ವಯೋವೃದ್ಧರಿಗೆ ಅನುಕೂಲವಾಗುವಂತಹ ಸಾಮಗ್ರಿಗಳ ಖರೀದಿಗಾಗಿ ಕೈಲಾದಷ್ಟು ದೇಣಿಗೆ ನೀಡಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ವಯೋವೃದ್ಧರನ್ನು ತಮ್ಮ ಸಂಗೀತದ ಮೂಲಕ ಕಲಾವಿದರಾದ ಹರದನಹಳ್ಳಿ ನಟರಾಜು ರಂಜಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಸುರೇಶ್‍ಗೌಡ, ಚಲನಚಿತ್ರ ಹಿರಿಯ ನಟರಾದ ಘಟಂ ಕೃಷ್ಣ, ಬಿ.ಬೊಮ್ಮಾಯಿ, ಸಂಜೀವಿನಿ ಟ್ರಸ್ಟ್ ಕಾರ್ಯದರ್ಶಿ ಸತೀಶ್, ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್ ವೃದ್ಧ ಮತ್ತು ಅನಾಥಾಶ್ರಮದ ಅಧ್ಯಕ್ಷರಾದ ರಮೇಶ್ ಪ್ರಭು, ಮಾದೇಶ್, ಅನು, ಭವ್ಯ ಮತ್ತಿತರರಿದ್ದರು.