ಸಿದ್ದರಾಮಯ್ಯ ಸರ್ಕಾರದ ದೌರ್ಜನ್ಯ, ದಬ್ಬಾಳಿಕೆ ವಿರುದ್ದ ನಿರಂತರ ಹೋರಾಟ : ಎನ್. ಮಹೇಶ್ ಘೋಷಣೆ
ಚಾಮರಾಜನಗರ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಿಳಾ ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಭೋದಿಸಿರುವುದನ್ನು ಖಂಡಿಸಿ ನಗರದ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ನೂರಕ್ಕೆ ಹೆಚ್ಚು ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಪೆÇೀಲಿಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಹಾಗೂ ಜಿಲ್ಲಾಧ್ಯಕ್ಷ ಸಿ.ಎಸ್ ನಿರಂಜನ್ ಕುಮಾರ್ ಅವರ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆ ತಡೆ ನಡೆಸಿ, ರಸ್ತೆತಡೆ ನಡೆಸಿದರು. ಹನುಮ ಧ್ವಜ ತೆರವು ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು.
ನಂತರ ಬಿ. ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳುತ್ತಿದ್ದಂತೆ ಪೆÇೀಲಿಸರು ಜಿಲ್ಲಾಡಳಿತ ಭವನದ ಮುಖ್ಯದ್ವಾರ ಬಂದ್ ಮಾಡಿದರು. ಗೇಟ್ ಮುಂದೆ ಪೊಲೀಸರ ಸರ್ಪಗಾವಲು ಹಾಕಿದ್ದರು. ಪ್ರತಿಭಟನಾನಿರತರು ಜಿಲ್ಲಾಡಳಿತ ಭವನಕ್ಕೆ ನುಗ್ಗಲು ಯತ್ನಿಸಿದ್ದರು.
ಪೊಲೀಸರು ಪ್ರತಿಭಟನಾ ನಿರತ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮಾಜಿ ಶಾಸಕ ಎಸ್.ಬಾಲರಾಜು, ವೆಂಕಟರಮಣಸ್ವಾಮಿ, ಪಾಪು, ಪ್ರಣಯ್, ಮೂಡ್ನಾಕೂಡ್ ಪ್ರಕಾಶ್, ಜನದ್ವನಿವೆಂಕಟೇಶ್, ದತ್ತೇಶ್, ಡಾ.ಎ.ಆರ್.ಬಾಬು, ಕೂಡ್ಲೂರು ಶ್ರೀಧರಮೂರ್ತಿ, ಅಯ್ಯನಪುರ ಶಿವಕುಮಾರ್, ಕೆರೆಹಳ್ಳಿಮಹದೇವಸ್ವಾಮಿ, ಶಾಂತಮೂರ್ತಿ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಬಂಗಾರನಾಯಕ, ಶಿವರಾಜ್, ನಟರಾಜು, ಮಹೇಂದ್ರ, ಆಶಾನಟರಾಜು, ದ್ರಾಕ್ಷಯಿಣಿ, ಸರಸ್ವತಿ, ಸೂರ್ಯಬಾಲರಾಜು, ಲೋಕೇಶ್ ಕೆ.ಎಲ್.ವೃಷಬೇಂದ್ರ, ಕೂಸಣ್ಣ, ಸೇರಿದಂತೆ 100 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೆÇೀಲಿಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಇದಕ್ಕು ಮುನ್ನಾ ಪ್ರತಿಭಟನಕಾರನ್ನುದ್ದೇಶಿಸಿ ಮಾತನಾಡಿದ ಎನ್. ಮಹೇಶ್, ಸಿಎಂ ಸಿದ್ದರಾಮಯ್ಯ ಅವರು ಹಿಂದುಗಳನ್ನು ವಿರೋಧಿಸುವ ಮೂಲಕ ಅಲ್ಪ ಸಂಖ್ಯಾತರನ್ನು ತೃಷ್ಟಿಕರಿಸಲು ನಿರತರಾಗಿದ್ದಾರೆ. ಕೆರಗೋಡಿನಲ್ಲಿ ಹನುಮ ಧ್ವಜವನ್ನು ತೆರವು ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ಹಿಂದುಗಳ ಭಾವನೆಗಳನ್ನು ಧಕ್ಕೆ ಉಂಟು ಮಾಡಿದ್ದಾರೆ. ಕೆರಗೋಡು ಗ್ರಾಮಸ್ಥರ ಪ್ರತಿಭಟನೆಗೆ ಬೆಂಬಲ ನೀಡಲು ಬಂದ ಬಿಜೆಪಿ ನಾಯಕರನ್ನು ಬಂಧಿಸುವ ಮೂಲಕ ಪೊಲೀಸರÀನ್ನು ಅಸ್ತ್ರ ಮಾಡಿಕೊಂಡಿದ್ದೀರಿ. ಇದರ ವಿರುದ್ದ ನಮ್ಮ ನಿರಂತರ ಹೋರಾಟ ಮಾಡಲಿದ್ದಾರೆ ಎಂದರು.
ದೇಶದ ಅತ್ಯುನ್ನತ ಪದವಿಯಲ್ಲಿರುವ ರಾಷ್ಟ್ರಪತಿ ದ್ರೌಪತಿ ಮರ್ಮ ಅವರನ್ನು ಏಕ ವಚನದಲ್ಲಿ ಸಂಭೋದಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ವ್ಯಕ್ತಿತ್ವವನ್ನು ತೋರಿಸಿದ್ದಾರೆ. ಇದು ಕಾಂಗ್ರೆಸ್ ಸಂಸ್ಕøತಿಯಾಗಿದೆ. ಕೆಳ ಮಟ್ಟದ ವ್ಯಕ್ತಿತ್ವವನ್ನು ತೋರಿಸಿದ್ದಾರೆ ಎಂದು ಕಿಡಿಕಾರಿದರು.