ದೇಶಕ್ಕೆ ಬಾಬೂಜಿ ಕೊಡುಗೆ ಅಪಾರ : ಬಸವನಪುರ ರಾಜಶೇಖರ

 ಚಾಮರಾಜನಗರ:  ಭಾರತ ದೇಶದ ಉಪಪ್ರಧಾನಿ ಡಾ.ಬಾಬುಜಗಜೀವನರಾಂ ಅವರ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ನಿತ್ಯ ಜೀವನದಲ್ಲಿ ಸ್ಮರಿಸಿಕೊಳ್ಳಬೇಕು ಎಂದು ಜಿಲ್ಲಾ ಮಾದಿಗ ಸಮುದಾಯದ ಸಂಘಟನೆಗಳ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಬಸವನಪುರ ರಾಜಶೇಖರ
ಹೇಳಿದರು.
    ನಗರದ 15ನೇ ವಾರ್ಡನಲ್ಲಿ ಡಾ.ಬಾಬುಜಗಜೀವನರಾಂ ಯುವಕರ ಕಲಾ ಸಂಘದ ವತಿಯಿಂದ ನಡೆದ ಡಾ.ಬಾಬುಜಗಜೀವನರಾಂ ಅವರ 119 ನೇ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಷಾರ್ಚನೆ ಮಾಡಿ ಕೇಕ್ ಕತ್ತರಿಸಿ
ಮಾತನಾಡಿದರು.
    ಡಾ. ಬಾಬು ಜಗಜೀವನರಾಂ ಅವರು ವಿವಿಧ ಖಾತೆಗಳೊಂದಿಗೆ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು ಜನವರಿ 1979 ರಿಂದ ಜುಲೈ 1979 ರವರೆಗೆ ಭಾರತದ ಉಪ ಪ್ರಧಾನ ಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು.  ಬಾಂಗ್ಲಾದೇಶದ ರಚನೆಗೆ ಕಾರಣವಾದ 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಅವರು ಭಾರತದ ರಕ್ಷಣಾ ಸಚಿವರಾಗಿ ಪ್ರಮುಖ ಪಾತ್ರ ವಹಿಸಿದರು .  ಎರಡು ಪ್ರತ್ಯೇಕ ಅಧಿಕಾರಾವಧಿಯಲ್ಲಿ ಕೇಂದ್ರ ಕೃಷಿ ಸಚಿವರಾಗಿ , ಅವರು ಹಸಿರು ಕ್ರಾಂತಿ ಮತ್ತು ಭಾರತೀಯ ಕೃಷಿಯ ಆಧುನೀಕರಣಕ್ಕೆ ಗಮನಾರ್ಹವಾಗಿ ಕೊಡುಗೆ ನೀಡಿದರು. ಅವರನ್ನು ನಿತ್ಯಾ ಸ್ಮರಿಸುವ ಕೆಲಸ ಆಗಬೇಕು ಎಂದರು.
  ಕಾರ್ಯಕ್ರಮದಲ್ಲಿ ಸಂಘದ  ಅಧ್ಯಕ್ಷ ಡ್ಯಾನ್ಸ್ ಬಸವರಾಜು, ಉಪಾಧ್ಯಕ್ಷ ರಾಜೇಶ್, ಕನ್ನಡ ಯುವಕರ ಕಲಾ ಸಂಘದ ಜಿಲ್ಲಾಧ್ಯಕ್ಷ ಚಾ.ಸಿ.ಮಂಜುನಾಥ್, ಸದಸ್ಯರಾದ ಗಿರಿಪ್ರಕಾಶ್, ಪ್ರಭುಸ್ವಾಮಿ, ಆಟೋ ಲಿಂಗರಾಜು, ದೀಪು, ಸತೀಶ್, ಯಜಮಾನ ರಾದ ಸಿದ್ದಣ್ಣ, ಲಿಂಗಣ್ಣ, ಕುಮಾರ್ ಇತರರು ಹಾಜರಿದ್ದರು.

ಚಿತ್ರ: ಚಾಮರಾಜನಗರದ 15ನೇ ವಾರ್ಡ್ ನ ಪೌರಕಾರ್ಮಿಕರ ಬಡಾವಣೆಯಲ್ಲಿ   ಡಾ.ಬಾಬುಜಗಜೀವನರಾಂ ಯುವಕರ ಕಲಾ ಸಂಘದ ವತಿಯಿಂದ ನಡೆದ ಡಾ.ಬಾಬುಜಗಜೀವನರಾಂ ಅವರ 119 ನೇ ಜಯಂತಿಯನ್ನು ಆಚರಿಸಲಾಯಿತು.

Leave a Reply

Your email address will not be published. Required fields are marked *