ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಒಂದು ಕಡೆ ರಸ್ತೆ ಪಕ್ಕದ ಪ್ಯಾರಪಿಟ್ ವಾಲ್ ಕುಸಿದಿರುವ ಕಾರಣ ಲೋಕೋಪಯೋಗಿ ಇಲಾಖೆ ದುರಸ್ತಿ ಕಾರ್ಯವನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜುಲೈ 29 ಮತ್ತು 30ರಂದು ಬೆಟ್ಟದ ದೇವಾಲಯ ಮುಚ್ಚಲ್ಪಡುತ್ತದೆ. ಅಲ್ಲದೇ ಈ ಎರಡೂ ದಿನಗಳಂದು ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.