ನಗರಸಭಾ ಮಾಜಿ ಸದಸ್ಯ ಶಿವಣ್ಣ ಮನೆಗೆ ಬಾಲರಾಜು ಭೇಟಿ: ಬಿಜೆಪಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ಗೆಲ್ಲಿಸಲು ಮನವಿ

ಚಾಮರಾಜನಗರ: ನಗರಸಭಾ ಮಾಜಿ ಸದಸ್ಯ ಹಾಗೂ ಬಿಜೆಪಿ ನಗರ ಮಂಡಲದ ಮಾಜಿ ಅಧ್ಯಕ್ಷ ಶಿವಣ್ಣ ಅವರ ಮನೆಗೆ ಚಾ.ನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಸ್. ಬಾಲರಾಜು ಭೇಟಿ ನೀಡಿ, ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡರು.

ನಗರದ ಭಗೀರಥ ಬಡಾವಣೆಯಲ್ಲಿರುವ ಶಿವಣ್ಣ ಅವರ ಮನೆ ಸೇರಿದಂತೆ ಈ ಭಾಗದಲ್ಲಿ ಚುನಾವಣಾ ಪ್ರಸಾರ ನಡೆಸಿದ ಬಾಲರಾಜು, ದೇಶಕ್ಕೆ ನರೇಂದ್ರ ಮೋದಿ ಅವರು ಅವಶ್ಯಕತೆ ಬಹಳ ಇದೆ. ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಲು ತಮ್ಮೆಲ್ಲರ ಅಮೂಲ್ಯವಾದ ಮತವನ್ನು ಬಿಜೆಪಿಗೆ ಹಾಕಬೇಕಬೇಕೆಂದು ಕೋರಿಕೊಂಡರು.

ಶಿವಣ್ಣ ಅವರನ್ನು ಭೇಟಿಯಾದ ಬಾಲರಾಜು ಸುಮಾರು 40 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ಶಿವಣ್ಣ ಅವರು ಅತ್ಯಂತ ಹಿರಿಯ ಬಿಜೆಪಿ ಕಾರ್ಯಕರ್ತರು. ನಗರಸಭಾ ಸದಸ್ಯರಾಗಿ, ನಗರ ಘಟಕದ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸುವ ಜೊತೆಗೆ ದೇಶಕ್ಕಾಗಿ ಪ್ರಧಾನಿ ಮೋದಿ ಅವರು ಗೆಲ್ಲಬೇಕೆಂದು ಛಲದಿಂದ ಹೋರಾಟ ಮಾಡುವರು. ಇಂಥವರು ಪ್ರಚಾರ ಕಣದಲ್ಲಿರಬೇಕು. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿಪಡಿಸೋಣ. ನಮ್ಮೊಂದಿಗೆ ಕೈ ಜೋಡಿ, ಬಿಜೆಪಿ ಗೆಲ್ಲಲು ಶ್ರಮಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಅಭ್ಯರ್ಥಿ ಬಾಲರಾಜು ಅವರನ್ನು ಶಿವಣ್ಣ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸ, ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಆಲೆ ಇದೆ. ಕಳೆದ ಬಾರಿ ಶ್ರೀನಿವಾಸಪ್ರಸಾದ್ ಅವರು ಬಿಜೆಪಿಯಿಂದ ಗೆದ್ದು ಸಂಸದರಾಗಿದ್ದರು. ಅದರಂತೆ ನೀವು ಸಹ ಈ ಚುನಾಣೆಯಲ್ಲಿ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸಿ,ಲೋಕಸಭೆಗೆ ಹೋಗಿ, ಮೋದಿ ಅವರಿಗೆ ಬೆಂಬಲ ನೀಡುವವರಿದ್ದೀರಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷ ಸುರೇಶ ನಾಯಕ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿರಾಟ್ ಶಿವು, ಹೊಂಗನೂರು ಮಹದೇವಸ್ವಾಮಿ ಇತರರು ಇದ್ದರು.

ಚಾಮರಾಜನಗರ ಉಪ್ಪಾರ ಬಡಾವಣೆಯಲ್ಲಿರುವ ನಗರಸಭಾ ಮಾಜಿ ಸದಸ್ಯ ಹಾಗೂ ಬಿಜೆಪಿ ನಗರ ಮಂಡಲದ ಮಾಜಿ ಅಧ್ಯಕ್ಷ ಶಿವಣ್ಣ ಅವರ ಮನೆಗೆ ಚಾ.ನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಸ್. ಬಾಲರಾಜು ಭೇಟಿ ನೀಡಿದರು.

Leave a Reply

Your email address will not be published. Required fields are marked *