- ಸೂಕ್ತ ಪರಿಹಾರ ಕೊಡಿಸುವಂತೆ ರೈತ ಮಹಾದೇವಸ್ವಾಮಿ ಜಿಲ್ಲಾಡಳಿತಕ್ಕೆ ಮನವಿ
ಚಾಮರಾಜನಗರ: ಇತ್ತೀಚೆಗೆ ಸುರಿದ ಧಾರಾಕಾರ ಮಳೆ,ಗಾಳಿಗೆ ರಾಮಸಮುದ್ರದಲ್ಲಿ ಬಾಳೆ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದ್ದು,
. ಕಟಾವಿಗೆ ಸಿದ್ಧವಾಗಿದ್ದು, ನಾಳೆ ಬಾಳೆ ಕಟಿಂಗ್ ವ್ಯಾಪಾರಿಗಳು ಬರುತ್ತಿದ್ದರು. ಕಾಸು ಕೈಸೇರುವ ಮೊದಲೇ ಬಾಳೆ ನಾಶವಾಗಿದೆ. ರೈತರಲ್ಲಿ ಆತಂಕ ತಂದಿದೆ.
ರಾಮಸಮುದ್ರ ಗ್ರಾಮದ ಮಹಾದೇವಸ್ವಾಮಿ ( ರಾಜು ) ಎಂಬ ರೈತರಿಗೆ ಸೇರಿದ ,1.5 ಎಕರೆ ಪ್ರದೇಶದ ಸುಮಾರು 1500ಕ್ಕೂ ಹೆಚ್ಚು ಬಾಳೆ ಗಿಡಗಳು ನೆಲಸಮವಾಗಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ರೂ.ನಷ್ಷವಾಗಿದೆ. ಬಾಳೆಗೆ ಫಸಲಿಗೆ ಮಾಡಿದ ಸಾಲ ಬಡ್ಡಿ ಕಟ್ಟಲು ತೊಂದರೆ ಆಗಿದೆ. ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ನಷ್ಡಕ್ಕೊಳಗಾದ ರೈತ ಮಹಾದೇವಸ್ವಾಮಿ ಆಳಲು ತೊಡಗಿಕೊಂಡಿದ್ದಾರೆ.