ಮೈಸೂರು: ಜಿಲ್ಲೆಯ ಸಾಲಿಗ್ರಾಮ ತಾಲ್ಲೂಕಿನ ಬಂಡಹಳ್ಳಿ – ನಾಡಪ್ಪನಹಳ್ಳಿ ಕೊಪ್ಪಲು ಗ್ರಾಮದಲ್ಲಿ ಉಪ್ಪಾರ ಸಮಾಜದ ವತಿಯಿಂದ ಮಹರ್ಷಿ ಶ್ರೀ ಭಗೀರಥ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಶ್ರೀ ಭಗೀರಥ ಮಹರ್ಷಿ ಅವರ ಭಾವಚಿತ್ರಕ್ಕೆ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿ ಪುಷ್ಪರ್ಚಾನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿ ಸಾರ್ವಜನಿಕರುಗಳಿಗೆ ಸಿಹಿ ವಿತರಣೆ ಮಾಡಲಾಯಿತು.
ನಂತರ ಶ್ರೀ ಭಗೀರಥ ಮಹರ್ಷಿ ಅವರ ಭಾವಚಿತ್ರವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಉಪ್ಪಾರ ಸಂಘದ ಉಪಾಧ್ಯಕ್ಷ ನಾಡಪ್ಪನಹಳ್ಳಿ ಕೊಪ್ಪಲು ರಾಮಕೃಷ್ಣ, ನಿರ್ದೇಶಕ ಬಂಡಹಳ್ಳಿ ಪುಟ್ಟಸ್ವಾಮಿ, ಶಿಕ್ಷಕ ಎನ್.ಜೆ.ಸ್ವಾಮಿ, ಮುಖಂಡರುಗಳಾದ ಟಿ.ಮೈಲಾರಿ, ಬಿ.ಜೆ.ಲೋಕೇಶ್, ಕೃಷ್ಣೆಗೌಡ, ನಾಗೇಗೌಡ, ಟಿ.ದೇವರಾಜ, ಚಿಗರೇಗೌಡ,
ಬಿ.ಇ.ಧರ್ಮ, ಪ್ರತಾಪ್, ಯಜಮಾನರುಗಳು, ಮಹಿಳೆಯರು, ಯುವಕರು, ಮಕ್ಕಳು ಸೇರಿದಂತೆ ಹಲವರು ಭಾಗವಹಿಸಿದ್ದರು.