ಬದುಕು ಬದಲಿಸಿದ ಬಸವಮಾರ್ಗ !

  • ಸೈನಕ್ಕೆ ಸೇರಬೇಕೆಂದುಕೊಂಡಿದ್ದವ ವ್ಯಸನದ ವಿರುದ್ಧ ಹೋರಾಡಿಗೆದ್ದ !
  • ಶತ್ರಗಳನ್ನು ಕೊಲ್ಲಬೇಕೆಂದುಕೊಂಡಿದ್ದವನು ತನ್ನ ದೌರ್ಬಲ್ಯಕೊಂದ!

ಸಂತೋಷ್‌ಗೆ ಬಾಲ್ಯದಿಂದಲೂ ಭಾರತೀಯ ಸೇನೆಗೆ ಸೇರಬೇಕು ಎನ್ನುವ ಹೆಬ್ಬಯಕೆ.! ಯಾರಾದರು ನೀನು ದೊಡ್ಡವನಾದ ಮೇಲೆ ಏನಾಗಬೇಕು ಅಂದುಕೊಂಡ್ಡಿದ್ದೀಯಾ ಎಂದು ಕೇಳಿದರೆ? ನಾನು ಸೈನಿಕನಾಗಬೇಕು ಎಂದುಕೊಂಡಿದ್ದೇನೆ. ಗಡಿಕಾಯ್ದು, ದೇಶವನ್ನುರಕ್ಷಣೆ ಮಾಡುತ್ತೇನೆ ಎಂದು ಅಭಿಮಾನದಿಂದ ಹೇಳುತ್ತಿದ್ದ. ಶಾಲೆಯಲ್ಲೂ ಕೂಡ ಅಷ್ಟೆ ಶಿಸ್ತಿನ ಸಿಪಾಯಿಯಂತೆ ಇದ್ದ ಸಂತೋಷ್! ಆದರೆ ವಯಸ್ಸಿಗೆ ಬರುವ ವೇಳೆಗೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದ ಸಂತೋಷ, ವ್ಯಸನಕ್ಕೆ ದಾಸನಾಗಿ, ತನ್ನಜೀವನವನ್ನು ನರಕ ಮಾಡಿಕೊಂಡು ಬಿಟ್ಟ! ಕೊನೆಗೆ ಆತನಜೀವ, ಜೀವನಕ್ಕೆ ನೆರವಾದದ್ದು, ಮೈಸೂರಿನ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿಕೇಂದ್ರ! ಈಗ ಸಂತೋಷ್ ಹೇಗಿದ್ದಾನೆ, ಎಲ್ಲಿದ್ದಾನೆ…? ತಿಳಿದುಕೊಳ್ಳಬೇಕಾ? ಆಗಿದ್ದರೆ ಈ ನೈಜ್ಯಕಥೆಯನ್ನುಒಮ್ಮೆ ಓದಿ…!

ಶಾಲೆಯಲ್ಲಿ ಶಿಸ್ತಿನ ಸಿಪಾಯಿ : ಬಾಲ್ಯದಿಂದಲೂ ಸಂತೋಷ್ ಚಟುವಟಿಕೆಯ ಹುಡುಗ ! ಶಾಲೆಯಲ್ಲೂ ಶಿಸ್ತಿನ ಸಿಪಾಯಿ. ಸಂತೋಷನಧೈರ್ಯ, ಸ್ಥೈರ್ಯವನ್ನ ಆ ವಯಸ್ಸಿನಲ್ಲೇ ಮೈಗೂಡಿಸಿಕೊಂಡಿದ್ದ. ತಾನು ಸೈನಿಕನಾಗಬೇಕು ಎಂದು ಮಹಾದಾಸೆಇಟ್ಟುಕೊಂಡಿದ್ದ. ಇಂತಹಆತನ ಕನಸಿಗೆ ಹಿಂಬುಕೊಟ್ಟಿದ್ದು ಎನ್‌ಸಿಸಿ. ಸೈನಿಕನಾಗಬೇಕು ಎಂದೇ ಸಂತೋಷ್ ಎನ್‌ಸಿಸಿಗೆ ಸೇರಿಕೊಂಡಿದ್ದ. ಈತನ ಆಸಕ್ತಿ, ಶ್ರಮಕಂಡ ಎನ್‌ಸಿಸಿ ಮಾಸ್ಟರ್ ಸಂತೋಷನನ್ನು ಬೆನ್ನುತ್ತಟ್ಟಿ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಕಡಿಮೆಅವಧಿಯಲ್ಲೇ ಎನ್‌ಸಿಸಿ ತಂಡದ ಲೀಡರ್ ಆಗಿ ಟೀಮ್‌ಅನ್ನ ಮುನ್ನೆಡೆಸುವದೊಡ್ಡಜವಾಬ್ದಾರಿಯನ್ನ ತೆಗೆದುಕೊಳ್ಳುವ ಮಟ್ಟಕ್ಕೆ ಹೋಗಿಯೇ ಬಿಟಿದ್ದ ಸಂತೋಷ್ !

ಸೇನಾ ಶಿಬಿರದಿಂದ ಪ್ರೇರಣೆ : ತನ್ನಊರಿನಲ್ಲಿಯಾವಾಗಲೋಒಮ್ಮೆ ನಡೆದ ಭಾರತೀಯ ಸೇನಾ ಶಿಬಿರದಿಂದ ಮತ್ತಷ್ಟು ಪ್ರೇರಣೆ ಪಡೆದಿದ್ದ ಸಂತೋಷ್. ಶಾಲೆಗೂ ಚಕ್ಕರ್ ಹಾಕಿ ಬೆಳಗ್ಗೆ ಎದ್ದೊಡನೆ ಶಿಬಿರ ನಡೆಯುತ್ತಿದ್ದ ಸ್ಥಳಕ್ಕೆ ಹಾಜರಾಗಿಬಿಡುತ್ತಿದ್ದ. ಅಲ್ಲಿ ಸೈನಿಕರಿಗೆ ನೀಡುತ್ತಿದ್ದ ತರಬೇತಿಗಳನ್ನು ಕುತೂಹಲದಿಂದ ನೋಡುತ್ತ… ನೋಡುತ್ತ… ಮತ್ತಷ್ಟುಆಕರ್ಷಿತನಾದ. ಅಲ್ಲಿನ ಕಲೆಗಳನ್ನು ಮನೆಗೆ ಬಂದುಅಭ್ಯಾಸ ಮಾಡುತ್ತಿದ್ದ. ಈ ಬಾಲಕನ ಆಸಕ್ತಿಯನ್ನುಕಂಡ ಅಲ್ಲಿನ ಅಧಿಕಾರಿಗಳು ಸೇನೆಗೆ ಸೇರುವ ಮಾರ್ಗಗಳ ಬಗ್ಗೆ, ಒಂದಷ್ಟು ಸಲಹೆ, ಮಾರ್ಗದರ್ಶನ ಮಾಡಿದ್ದರು.

ಅತ್ತ ಕನಸು ಚಿಗುರುತ್ತಿತ್ತು :ಇತ್ತ ಮೊಟಕುಗೊಳ್ಳುತ್ತಿತ್ತು : ಸಂತೋಷನ ಕನಸು ಅತ್ತ ಮೆಲ್ಲ, ಮೆಲ್ಲನೆಚಿಗುರುತ್ತಿತ್ತು. ಆ ಕನಸಿಗೆ ನೀರೆರೆದು ಪೋಷಣೆ ಮಾಡಬೇಕಿದ್ದ ಸಂತೋಷ್‌ತಂದೆಇತ್ತಚಿವುಟುವ ಕೆಲಸ ಮಾಡುತ್ತಿದ್ದರು. ಸುಮ್ಮನೆ ಮೇಲ್ನೋಟಕ್ಕೆ ಹೇಳಬೇಕು ಎಂದರೆ ಸಂತೋಷ್‌ತಂದೆಒಬ್ಬ ಬೇಜಾಬ್ದಾರಿ ಮನುಷ್ಯ. ಮಕ್ಕಳ ಬಗ್ಗೆ ಕಾಳಜಿ ಇಲ್ಲ. ಅವರ ಭವಿಷ್ಯದ ಬಗ್ಗೆ ಕನಸಿಲ್ಲ. ಸದಾ ಉದಾಸೀನದ ಮಾತುಗಳು. ಮನೆಯಲ್ಲಿಅನಾವಶ್ಯಕ ಜಗಳಗಳು ಸಂತೋಷ ಆ ಎಳೆಯ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರಿತ್ತು. ಅಷ್ಟು ಸಾಲದುಎನ್ನುವಂತೆ ಸಂತೋಷ್‌ತಂದೆಗೆ ಮೂವರು ಪತ್ನಿಯರು. ಸದಾತನ್ನ ಖುಷಿ, ಸಂತೋಷವನ್ನು ಮಾತ್ರ ಪರಿಗಣಿಸುತ್ತಿದ್ದತಂದೆ, ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂಗಮನಕೊಡುತ್ತಿರಲಿಲ್ಲ. ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಿಸಬೇಕು, ನಾಲ್ಕಾರು ಕಾಸು ಸಂಪಾದನೆ ಮಾಡಬೇಕು. ಮಕ್ಕಳ ಭವಿಷ್ಯಕ್ಕೆ ಅಷ್ಟೋ, ಇಷ್ಟೋ ಆಸ್ತಿ-ಪಾಸ್ತಿ ಮಾಡಬೇಕು ಎಂಬ ಯಾವುದೇಗೋಜೀಗೂ ಹೋದವರಲ್ಲ. ಇದರಿಂದ ಸಂತೋಷ್‌ಗೆತಂದೆಯನ್ನುಕಂಡರೆಒಂದುರೀತಿಯತಿರಸ್ಕಾರದ ಭಾವ. ಮಕ್ಕಳಿಗೆ ಮದುವೆ ಮಾಡುವ ವಯಸ್ಸಿನಲ್ಲಿ ತಂದೆ ಮತ್ತೊಂದು ಮದುವೆಯಾವುದನ್ನು ಸಹಿಸಲಿಲ್ಲ. ಆದರೆಅದನ್ನುಗಟ್ಟಿಯಾಗಿ ವಿರೋಧಿಸುವ ವಯಸ್ಸುಅವನದಾಗಿರಲಿಲ್ಲ.

16 ನೇ ವಯಸ್ಸಿನಲ್ಲಿ ತಪ್ಪಿತು ಹಾದಿ : ಸಂತೋಷ್‌ಗೆ ಮನೆಯಕಿರಿಕಿರಿ ಸದಾಇರುತ್ತಲೇಇತ್ತು. ಆದರೂಅದರ ನಡುವೆಯೂ ಹೇಗೋ ತನ್ನಕನಸನ್ನು ಈಡೇರಿಸಿಕೊಳ್ಳಲು ಸಮಸ್ಯೆಯನ್ನು ಬದಿಗೆ ಒತ್ತಿ ಪ್ರಯತ್ನಿಸುತ್ತಲೇಇದ್ದ. ಸಂತೋಷ್ ೧೦ನೇ ತರಗತಿಗೆ ಬರುವ ವೇಳೆಗೆ ಎಲ್ಲವೂಚೆನ್ನಾಗಿತ್ತು. ಆದರೆ ೧೦ನೇ ತರಗತಿಯಲ್ಲಿತಂದೆಯ ಬಗ್ಗೆ ಮತ್ತಷ್ಟೂದ್ವೇಷಕಾರಲು ಶುರುಮಾಡಿದ. ಸಂತೋಷನ ಮನಸ್ಥಿತಿ, ಪರಿಸ್ಥಿತಿ ಎಲ್ಲವೂಗೊಂದಲದಿಂದಕೂಡಿತ್ತು. ಈ ಸಮಯದಲ್ಲಿ ಕೆಲ ಕೆಟ್ಟ ಸ್ನೇಹಿತರ ಸಹವಾಸ ಸಂತೋಷ್‌ಕನಸನ್ನು ಕಂಗೆಡಿಸಿತು. ಇದರಿಂದಆತನಜೀವನದ ಹಾದಿಯೇತಪ್ಪಿತು. ಸ್ನೇಹಿತರೊಂದಿಗೆ ಸೇರಿಕೊಂಡು ಶಾಲೆಗೆ ಚೆಕ್ಕರ್ ಹಾಕುವುದು. ಚೆಕ್ಕರ್ ಹಾಕಿ ಸಿನಿಮಾ ನೋಡುವುದು. ಹೀಗೆ ಹಂತ, ಹಂತವಾಗಿ ದುರಭ್ಯಾಸವನ್ನು ಮೈಗೂಡಿಸಿಕೊಂಡು ಬರಲು ಪ್ರಾರಂಭ ಮಾಡಿಬಿಟ್ಟ ಸಂತೋಷ್. ಇದೆಲ್ಲವನು ಕೇಳಿದರೆ ತನ್ನ ಮನೆಯ ಪರಿಸ್ಥಿತಿಯನ್ನು ಕಾರಣವನ್ನಾಗಿ ನೀಡುತ್ತಿದ್ದ. ಪರಿಣಾಮ ಓದಿನ ಕಡೆಗೆ ಹಾಗೂ ತಾನೂ ಸೈನಿಕನಾಗಬೇಕು ಎನ್ನುವಗಮನದಕಡೆಯಿಂದ ವಿಮುಕ್ತನಾಗುತ್ತ ಬರಲುತೊಡಗಿದ. ಜೇಬಲ್ಲಿ ದುಡ್ಡುಇಲ್ಲದಿದ್ದರೂ ಹೇಗಾದರೂ ಮಾಡಿ ಹಣ ಹೊಂದಿಸಿ ಸ್ನೇಹಿತರೊಂದಿಗೆಧೂಮಪಾನ ಮಾಡುತ್ತಿದ್ದ. ಈ ವೇಳೆ ಸಣ್ಣದಾಗಿ ಪ್ರಾರಂಭವಾದಅಭ್ಯಾಸ, ಅವನಿಗೆ ಗೊತ್ತಿಲ್ಲದರೀತಿಯಲ್ಲಿಚಟವಾಗಿ ಆವರಿಸಿಕೊಂಡಿತು.

10ನೇ ತರಗತಿಗೆ ಮುಗಿಯಿತು ಓದು : ಸಂತೋಷ್ ಶಾಲೆಯಲ್ಲಿಕ್ರೀಡೆ ಹಾಗೂ ಎನ್‌ಸಿಸಿಯಲ್ಲಿ ಮುಂದಿದ್ದರೂ ಓದಿನಲ್ಲಿ ಹಿಂದೆ ಬಿದ್ದಿರಲಿಲ್ಲ. ತಕ್ಕಮಟ್ಟಿಗೆಓದುತ್ತಿದ್ದ. ಆದರೆಧೂಮಪಾನ ಮತ್ತುಕೆಟ್ಟ ಸ್ನೇಹಿತರ ಸಹವಾಸದಿಂದ ಸಂತೋಷ್‌ಓದುವಕಡೆಗೆ ಆಸಕ್ತಿ ಕಳೆದುಕೊಂಡಿದ್ದ. ಪರಿಣಾಮ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಫೇಲ್‌ಆದ. ಸಂತೋಷಕನಸನ್ನು ತಿಳಿದಿದ್ದ ತಾಯಿ, ಧೈರ್ಯತುಂಬಿದರು. ಫೇಲ್‌ಆಗಿರುವ ವಿಷಯವನ್ನು ಮತ್ತೆಕಟ್ಟಿ ಪಾಸ್ ಮಾಡಿಕೊಳ್ಳಲು ಮಗನಿಗೆ ಬುದ್ದಿವಾದ ಹೇಳಿದರು. ನೀನು ಸೇನೆಗೆ ಸೇರುವಕನಸನ್ನು ನನಸು ಮಾಡಿಕೊಎಂದು ಸ್ಥೈರ್ಯತುಂಬುತ್ತಿದ್ದರು. ಆದರೆ ಸಂತೋಷ್‌ಗೆ ಈ ವಿಷಯಗಳು ಅನಾಸಕ್ತಿಯಾಗಿತೋರಿತು. ಮಗನ ಈ ನಡಾವಳಿಗೆ ಏನು ಕಾರಣಎಂದು ಶೋಧಿಸಿದಾಗ, ಸಂತೋಷನಚಟದ ವಿಷಯ ಆಕೆಗೆ ತಿಳಿದು ಹೋಯಿತು. ಇದರಿಂದತಾಯಿತುಂಬ ನೊಂದುಕೊಂಡರು. ತಂದೆ ಮತ್ತಷ್ಟು ನಿಂದಿಸಲು ಶುರು ಮಾಡಿಬಿಟ್ಟರು.

ಕೆಲಸಕ್ಕೆ ಅಲೆದಾಡಿದ ಸಂತೋಷ ! ಯಾವಾಗ ಮಗ ಫೇಲ್ ಆಗಿ ಮನೆಯಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿದನೋ ತಂದೆ-ಮಗನಿಗೆ ಇನ್ನಷ್ಟು ಮುಖ ಮುನಿಸು ಶುರುವಾಗಿಬಿಟ್ಟಿತು. ಈ ಕಾರಣದಿಂದ ಮನೆಯಲ್ಲಿ ಸದಾ ಜಗಳ. ಇತ್ತತಾಯಿಗೆ ನೆಮ್ಮದಿ ಇಲ್ಲ. ಸಂತೋಷನಿಗೆ ಬುದ್ದಿವಾದ ಹೇಳಿದರೂ ಕೇಳುತ್ತಿಲ್ಲ. ಕೊನೆಗೆ ಮನೆಯಲ್ಲೇ ಸದಾಇರುವುದಿಕ್ಕಿಂತಎಲ್ಲಾದರೂ ಕೆಲಸಕ್ಕೆ ಸೇರಿಸಿದರೆ ಆಗಲಾದರೂಇಬ್ಬರು ಸರಿಯೋಗಬಹುದುಎಂದು ಮನಗಂಡುತಾಯಿ ಕೆಲಸಕ್ಕೆ ಸೇರಿಸಲು ಮುಂದಾಗುತ್ತಾರೆ. ಅದರಂತೆ ಸಂತೋಷತಾಯಿಯ ಮಾತನ್ನುತೆಗೆದುಹಾಕದೆಅಂಗಡಿ, ಫ್ಯಾಕ್ಟರಿಗಳಲ್ಲಿ ಕೆಲಸ ಹುಡಿಕಿಕೊಂಡು ಹೋಗುತ್ತಾನೆ. ಆದರೆಎಲ್ಲೂ ಕೆಲಸ ಸಿಗುವುದಿಲ್ಲ. ಆದರೆ ಕೊನೆಗೆ ಅವನಿಗೆ ಸಿಕ್ಕಿದ್ದು ಬಾರ್‌ಅಂಡ್‌ರೆಸ್ಟೋರೆಂಟ್‌ನಲ್ಲಿ ಕೆಲಸ.

ಬಾರ್‌ನಲ್ಲಿ ಕೆಲಸ ಬೇಡ ಎಂದರು ತಾಯಿ ! ಬಾರ್‌ಗಳಲ್ಲಿ ಕೆಲಸ ಮಾಡು. ಇಲ್ಲಿ ತಿಂಗಳಿಗೆ ೯೦೦ ರೂ. ಸಂಬಳ ಮತ್ತು ನಿತ್ಯ ೪೦೦ ಟಿಪ್ಸ್ ಸಿಗುತ್ತದೆ. ಅಂಗಡಿ, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡಿದರೆ ತಿಂಗಳಿಗೆ ಬರಿ ೪೦೦ ರೂ. ಮಾತ್ರ ಸಿಗುತ್ತದೆ ಎಂದು ಸ್ನೇಹಿತರು ಸಂತೋಷ್ ಮನಸ್ಸನ್ನು ಮೊದಲೇ ಕೆಡಿಸಿದ್ದರು. ಅದರಂತೆ ಸಂತೋಷನೂ ಹಣಕ್ಕೆಆಕರ್ಷಿತನಾಗಿ ಬಾರ್‌ನಲ್ಲಿ ಕೆಲಸಕ್ಕೆ ಸೇರಲುಉತ್ಸುಕನಾಗಿಬಿಡುತ್ತಾನೆ. ಆದರೆ ಬಾರಿಗೆ ಕೆಲಸಕ್ಕೆ ಕಳುಹಿಸಿದರೆ ಮಗ ಎಲ್ಲಿ ಹಾದಿತಪ್ಪುತ್ತಾನೋಎಂದುತಾಯಿ ಆತಂಕಗೊಂಡಿದ್ದಳು. ಬಾರ್‌ಗಳಲ್ಲಿ ಕೆಲಸ ಮಾಡುವುದು ಬೇಡಎಂದುತಾಯಿ ಎಷ್ಟೇ ಹೇಳಿದರೂ ಕೇಳಲಿಲ್ಲ ಸಂತೋಷ್. ಕೊನೆಗೆ ಅಲ್ಲೆ ಕೆಲಸಕ್ಕೆ ಸೇರಿಯೇ ಬಿಟ್ಟ ಸಂತೋಷ. ಅದರಂತೆಎರಡು ವರ್ಷ ಶ್ರಮ ವಹಿಸಿ ದುಡಿದ, ಹತ್ತಾರು ಕಾಸು ಸಂಪಾದನೆ ಮಾಡಿದ, ತಾಯಿಗೆ ಸಂತೋಷವೂಆಯಿತು. ಮಗ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದರೂಕುಡಿಯುತ್ತಿಲ್ಲ. ಇದೆರೀತಿ ಮುಂದುವರಿದುತನ್ನ ಕಾಲ ಮೇಲೆ ತಾನು ನಿಂತುಕೊಂಡರೆ ಸಾಕು ಎನ್ನುವ ಆಸೆ ಮಾತ್ರಇತ್ತು.

ರುಚಿ ನೋಡಲೆಂದು ಪ್ರಾರಂಭವಾಯಿತು ವ್ಯಸನ : ಬಾರ್‌ನಲ್ಲಿ ಕೆಲಸಕ್ಕೆ ಸೇರಿ ೨ ವರ್ಷದ ವರೆಗೂ ಮದ್ಯವನ್ನೂಕಿಂಚಿತ್ತೂ ಮುಟ್ಟದ ಸಂತೋಷ, ಒಂದು ದಿನ ಕುತೂಹಲಕ್ಕಾಗಿರುಚಿ ನೋಡಿಯೇ ಬಿಡುತ್ತಾನೆ. ಈ ಮೊದಲ ಕುಡಿತ ಸಂತೋಷನ ಬದುಕಿಗೆ ಮಾರಕವಾಗಿ ಬಿಡುತ್ತದೆ. ದಿನ ಕಳೆಯುತ್ತ ಕಳೆಯುತ್ತ, ಮದ್ಯ ಸಂತೋಷನನ್ನು ಆವರಿಸಿಕೊಳ್ಳಲು ಪ್ರಾರಂಭಿಸುತ್ತದೆ. ಆದರೆಇದರ ಬಗ್ಗೆ ಆತನಿಗೆಕಿಂಚಿತ್ತೂ ಪ್ರಜ್ಞೆಇರುವುದಿಲ್ಲ. ಸ್ನೇಹಿತರೊಂದಿಗೆ ಪಾರ್ಟಿ, ಅದುಇದುಎಂದು ಒಂದಲ್ಲ ಒಂದುಕಾರಣಕ್ಕೆ ಸಂತೋಷ್ ಮದ್ಯವನ್ನು ಸೇವನೆ ಮಾಡುತ್ತಲೇಇರುತ್ತಾನೆ. ಈ ಅಭ್ಯಾಸಆತನನ್ನುಎಲ್ಲಿಗೆತೆಗೆದುಕೊಂಡು ಹೋಗಿಬಿಟ್ಟಿತುಎಂದರೆ, ನಿತ್ಯ ಮುಂಜಾನೆಯಿಂದ ಮಧ್ಯರಾತ್ರಿಯ ವರೆಗೂ ನಶೆಯಲ್ಲೇಇರುವ ಪರಿಸ್ಥಿತಿಗೆ ತೆಗೆದುಕೊಂಡು ಹೋಗಿ ಬಿಡುತ್ತದೆ. ಪರಿಣಾಮ ಮದ್ಯ ಸಂತೋಷನ ವ್ಯಕ್ತಿತ್ವದಲ್ಲಿದೊಡ್ಡ ಮಟ್ಟದ ಬದಲಾವಣೆತಂದಿದ್ದಂತು ಸುಳ್ಳಲ್ಲ. ಬಾಲ್ಯದಿಂದಲೂಎಲ್ಲರಿಂದಲೂ ಸರಿ ಎನ್ನಿಸಿಕೊಂಡಿದ್ದ ಸಂತೋಷ, ಕುಡಿತದದಾಸ್ಯದಿಂದಎಲ್ಲರಿಂದಲೂ ನಿಂದನೆಗೆ ಒಳಗಾಗುವ ಪರಿಸ್ಥಿತಿಗೆ ಬಂದುಬಿಟ್ಟ. ಕುಡಿದರೆ ಸಂತೋಷ ಮನುಷ್ಯನಾಗಿರುತ್ತಿರಲಿಲ್ಲ. ಅವರಿವರ ಬಳಿ ಸುಮ್ಮ, ಸುಮ್ಮನೆ ಜಗಳ ತೆಗೆಯುತ್ತಿದ್ದ. ಮನೆಯಲ್ಲಿಗದ್ದಲ ಎಬ್ಬಿಸುತ್ತಿದ್ದ. ಬರುಬರುತ್ತ ಬಾರ್‌ಗ್ರಾಹಕರಜೊತೆಗೂ ಜಗಳ, ಹೊಡೆದಾಟ, ಬಡಿದಾಟ ಮಾಡಲು ಶುರುಮಾಡಿಬಿಟ್ಟ. ತಾನುಧೈರ್ಯವಾಗಿ ಜಗಳವಾಡಬೇಕು ಎಂದರೆಕುಡಿಯಬೇಕುಎನ್ನುವುದನ್ನು ಮಿತ್ಯದಲ್ಲಿದ್ದ ಸಂತೋಷ.

4 ವರ್ಷದ ಬಳಿಕ ಆರೋಗ್ಯ ಸಮಸ್ಯೆ : ಕುಡಿತ ಶುರು ಮಾಡಿದ ಪ್ರಾರಂಭದ ೪ ವರ್ಷಗಳಲ್ಲಿ ಯಾವುದೆಆರೋಗ್ಯ ಸಮಸ್ಯೆ ಸಂತೋಷ್‌ಗೆಕಾಡಲಿಲ್ಲ. ಆದರೆ ಆ ಬಳಿಕ ಅವನಿಗೆ ಹಂತ, ಹಂತವಾಗಿ ಆರೋಗ್ಯ ಸಮಸ್ಯೆಕಾಡಲು ಶುರುವಾಗಿಬಿಟ್ಟಿತ್ತು. ಅದುಎಲ್ಲಿಗೆ ಹೋಗಿ ತಲುಪಿತುಎಂದರೆಕುಡಿದರೆ ಸಾಕು, ರಕ್ತವನ್ನೆ ವಾಂತಿ ಮಾಡುವ ಪರಿಸ್ಥಿತಿಗೆ ಬಂತು. ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಹೊತ್ತು, ಗೊತ್ತು ನೋಡದೆಕುಡಿಯುತ್ತಿದ್ದಕುಡಿತ ಸಂತೋಷ್‌ನನ್ನುಇನ್ನಿಲ್ಲದಂತೆಆರೋಗ್ಯ ಸಮಸ್ಯೆಗೆಈಡು ಮಾಡಿಬಿಟ್ಟಿತ್ತು. ಆದರೂಕೂಡ ಸಂತೋಷ್‌ಗೆಕುಡಿತ ಬಿಟ್ಟುಇರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನುಕಂಡತಾಯಿಗೆ ದಿಕ್ಕೆ ತೋಚದಂತೆ ಆಗಿ ಹೋಯಿತು. ಕೂಡಲೇ ಸಂತೋಷ್‌ನನ್ನು ಒಂದೊಳ್ಳೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು. ವೈದ್ಯರುಕೂಡಕುಡಿದರೆ ಸಾವು ಸಂಭವಿಸಬಹುದುಎನ್ನುವಎಚ್ಚರಿಕೆಯನ್ನೂ ನೀಡಿದ್ದರು. ಆದರೆ ಸಂತೋಷ, ಸ್ವಲ್ಪಗುಣಮುಖನಾದಕೂಡಲೇ ಮತ್ತೆಕುಡಿತದ ವ್ಯಸನಕ್ಕೆಜಾರಿ ಬಿಡುತ್ತಿದ್ದ.

ದೇವರ ಮೊರೆ ಹೋದರೂಕುಡಿತ ಬಿಡಲು ಸಾಧ್ಯವಾಗಲಿಲ್ಲ : ಕುಡಿತದಿಂದಆದಅನಾರೋಗ್ಯದ ಬಗ್ಗೆ ಸಂತೋಷನಿಗೆ ಸ್ವಯಂ ಭಯ ಶುರುವಾಗಿಬಿಟ್ಟಿತ್ತು. ಕುಡಿದರೆ ನಾನು ಸತ್ತು ಹೋಗಬಹುದುಎನ್ನುವಆತಂಕಅವನ್ನನ್ನು ಆವರಿಸಿಕೊಂಡು ಬಿಟ್ಟಿತ್ತು. ಇಲ್ಲ ನಾನು ಬದುಕಬೇಕು.! ಹೇಗಾದರೂ ಮಾಡಿ ನಾನು ಕುಡತ ಬಿಡಬೇಕುಎಂದುತನಗೆತಾನೆ, ಸ್ವಯಂ ಪ್ರೇರಣೆ ತೆಗೆದುಕೊಳ್ಳುತ್ತಾನೆ ಸಂತೋಷ ಹಾಗೂತನ್ನ ನಡಾವಳಿಕೆಗಳಿಗೆ ಸ್ವಯಂ ನಿರ್ಭಂದಗಳನ್ನು ಹಾಕಿಕೊಳ್ಳುತ್ತಾನೆ. ಆಗ ಅವನು ಹೋಗುವುದೆದೇವರ ಮೊರೆಗೆ. ಹೌದು..!ಕುಡಿತ ಬಿಡಲುದೇವರಿಗೆಅರಕೆ ಕಟ್ಟಿಕೊಳ್ಳುವುದು, ಮುಡಿಕೊಡುವುದು, ತಿಂಗಳುಗಟ್ಟಲೆ ಅಯ್ಯಪ್ಪನ ಮಾಲೆ ಹಾಕಿಕೊಳ್ಳುವುದು. ಹೀಗೆ ಕುಡಿತ ಬಿಡಲು ಒಂದಲ್ಲ ಒಂದು ಸ್ವಯಂ ಮಾರ್ಗವನ್ನು ಹಾಕಿಕೊಂಡು ಬರುತ್ತಿರುತ್ತಾನೆ. ಆದರೆ ವ್ರತ ಮುಗಿಯುತ್ತಿದ್ದಂತೆ ಮತ್ತೆಕುಡಿತ ಶುರು ಮಾಡಿಬಿಡುತ್ತಿದ್ದ. ಇದುಅವನಲ್ಲಿಗೊಂದಲಕ್ಕೆ ಸಿಲುಕಿಕೊಳ್ಳುವಂತೆ ಮಾಡಿಬಿಡುತ್ತದೆ.

ಬದುಕು ಬದಲಿಸಿದ ಬಸವಮಾರ್ಗ :
ಹೀಗೆ ಸತತ 16 ವರ್ಷಗಳ ಕಾಲ ಕುಡಿತ ಸಂತೋಷನಿಗೆ ಮೈಸೂರಿನಜೆಎಸ್‌ಎಸ್ ವತಿಯಿಂದ ಆಯೋಜಿಸಿದ್ದ ಕುಡಿತ ಬಿಡಿಸುವ ಶಿಬಿರ ನೆರವಿಗೆ ಬರುತ್ತದೆ. ಪತ್ರಿಕೆಯಲ್ಲಿ ಶಿಬಿರದ ಬಗ್ಗೆ ಮಾಹಿತಿ ತಿಳಿದ ಸಂತೋಷ ಹಿಂದು, ಮುಂದು ನೋಡದೆ ಶಿಬಿರಕ್ಕೆ ದಾಖಲಾಗಿಬಿಡುತ್ತಾನೆ. ಅಲ್ಲಿ ಅವನಿಗೆ ಕುಡಿತಒಂದುದೈಹಿಕ, ಮಾನಸಿಕ ಮತ್ತುಆತ್ಮಿಕ ಕಾಯಿಲೆ ಎಂದುಗೊತ್ತಾಗುತ್ತದೆ. ಆತನೂ ಸೇರಿದಂತೆ ಮನೆಯಲ್ಲಿ ಶಿಬಿರದಿಂದ ಬಂದ ಮೇಲೆ ಕುಡಿತ ಬಿಡುತ್ತಾನೆ. ಹೊಸ ಮನುಷ್ಯನಾಗಿ ಬಾಳುತ್ತಾನೆ ಎಂದುಎಲ್ಲರೂಅಂದುಕೊಂಡಿದ್ದರು. ಆದರೆ ಮತ್ತೆಎಡವಿ ಬೀಳುತ್ತಾನೆ. ಮತ್ತೆಕುಡಿತಕ್ಕೆದಾಸನಾಗುತ್ತಾನೆ. ಈ ವೇಳೆ ಆತನ ಕೈ ಹಿಡಿದದ್ದು, ಮೈಸೂರಿನ ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿಕೇಂದ್ರ. ಬಸವಮಾರ್ಗ ಸಂಸ್ಥೆ ಉಗಮ ಸಂತೋಷನಕುಡಿತಕ್ಕೆ ಬ್ರೇಕ್ ಹಾಕುತ್ತದೆ. ಸಂಸ್ಥೆಯ ನಿರಂತರ ಸಂಪರ್ಕದಿಂದ ಸಂತೋಷನ ಬದುಕಲ್ಲಿ ಆನಂದ ಮರಳುತ್ತದೆ.

ಬಸವಮಾರ್ಗದಲ್ಲೇ ವೃತ್ತಿಆರಂಭ :
ಬಸವಮಾರ್ಗದಲ್ಲಿ ಸೇವೆ ಮತ್ತುಆಲ್ಕೋಹಾಲ್ ಅನಾನಿಮಸ್‌ಕಾರ್ಯಕ್ರಮದಿಂದಆರಂಭವಾದ ವೃತ್ತಿ, ಆತನಜೀವನಕ್ಕೆ ಹೊಸ ತಿರುವನ್ನುಕೊಟ್ಟಿತ್ತು. ಸಂತೋಷ್ ಕಳೆದ ೬ ವರ್ಷಗಳಿಂದ ಬಸವಮಾರ್ಗ ವ್ಯಸನಮುಕ್ತಕೇಂದ್ರದಲ್ಲೇಒಬ್ಬ ಪ್ರಾಮಾಣಿಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ. ಕುಡತ ಬಿಟ್ಟುಉತ್ತಮ ವ್ಯಕ್ತಿಯಾಗಿ ಬದಲಾಗಿದ್ದಾನೆ. ಮನಃಪರಿವರ್ತನೆ ಮಾಡಿಕೊಂಡುಕುಟುಂಬದಜೊತೆಯಲ್ಲೂಅನ್ಯೂನ್ಯವಾಗಿಇದ್ದಾನೆ. ೨೩ ವರ್ಷಗಳಿಂದ ಮಾತು ಬಿಟ್ಟಿದತಂದೆಯಜೊತೆಅನ್ಯೂನ್ಯವಾಗಿದ್ದಾನೆ. ವ್ಯಸನ ತ್ಯೆಜಿಸಿದ ಮೇಲೆ ಆತನಿಗೆ ಮದುವೆಯೂಆಗಿದೆ. ಬಸವಮಾರ್ಗ ಫೌಂಡೇಷನ್ ಸಂತೋಷಜೀವನಕ್ಕೆ ಹೊಸ ಅರ್ಥಕೊಟ್ಟಿದೆ. ಕುಡತಿ ಬಿಟ್ಟ ಮೇಲೆ ಸಂತೋಷ ಹೀಗ ಸಂತೋಷದಿಂದಜೀವನ ಮಾಡುತ್ತಿದ್ದಾನೆ. ಸಂತೋಷಇತರೆ ವ್ಯಸನಿಗಳಿಗೆ ಮಾದರಿಯಾಗಲಿ ಶುಭವಾಗಲಿ ಸಂತೋಷ್….!

ಎಸ್.ಬಸವರಾಜು
ಸಂಸ್ಥಾಪಕರು
ಬಸವಮಾರ್ಗ ವ್ಯಸನಮುಕ್ತ ಮತ್ತು ಪುನರ್ವಸತಿ ಕೇಂದ್ರ
ಮೈಸೂರು

Leave a Reply

Your email address will not be published. Required fields are marked *