ಬಸವಮಾರ್ಗ ಉಚಿತ ವಸತಿ ನಿಲಯ ವಿಸ್ತರಣೆಗೆ ಯೋಜನೆ

  • ಸಂಸ್ಥಾಪಕ ಎಸ್. ಬಸವರಾಜು ಹೇಳಿಕೆ
  • ಹಾಸ್ಟೆಲ್ ವಿದ್ಯಾರ್ಥಿಗಳಿ0ದ ಕೃತಜ್ಞತಾ ಕಾರ್ಯಕ್ರಮ

ಮೈಸೂರು : ಈ ಸಾಲಿನ ಶೈಕ್ಷಣಿಕ ವರ್ಷದಿಂದ ಬಸವಮಾರ್ಗ ಫೌಂಡೇಷನ್ ಉಚಿತ ವಸತಿ ನಿಲಯವನ್ನು 100 ವಿದ್ಯಾರ್ಥಿಗಳಿಗೆ ವಿಸ್ತರಿಸುವ ಗುರಿಹೊಂದಲಾಗಿದೆ ಎಂದು ಫೌಂಡೇಷನ್ ಸಂಸ್ಥಾಪಕ ಎಸ್. ಬಸವರಾಜು ಹೇಳಿದರು.

ನಗರದ ಸರಸ್ವತಿಪುರಂನಲ್ಲಿ ಇರುವ ಬಸವಮಾರ್ಗ ಫೌಂಡೇಷನ್ ಉಚಿತ ವಸತಿ ನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಕೃತಜ್ಞತಾ ಕಾರ್ಯಕ್ರಮದಲ್ಲಿ, ವಸತಿ ನಿಲಯ ಮಕ್ಕಳಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಬಸವಮಾರ್ಗ ಫೌಂಡೇಷನ್ ವ್ಯಸನಮುಕ್ತ ಸಮಾಜ ನಿರ್ಮಾಣ ಕನಸ ಹೊತ್ತು ಕಳೆದ ಆರು ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ವ್ಯಸನಕ್ಕೆ ದಾಸರಾದ ಪಾಲಕರ ಮಕ್ಕಳು ಮತ್ತು ಬಡ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಏನಾದರೂ ಕೊಡುಗೆ ನೀಡಬೇಕೆಂದು ಕುಕ್ಕರಹಳ್ಳಿ ಸರ್ಕಾರಿ ಶಾಲೆಯನ್ನು ದತ್ತು ಪಡೆಯಲಾಯಿತು. ಆ ಶಾಲೆಗೆ ದೂರದ ಊರುಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಈ ಪ್ರಯಾಣ ಮಕ್ಕಳ ಓದಿಗೆ ಅಡಚಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸ್ಥಾಪನೆ ಮಾಡಬೇಕು ಎನ್ನುವ ಕಲ್ಪನೆ ಬಂದಾಗ, ಬಸವಮಾರ್ಗ ಉಚಿತ ವಸತಿ ನಿಲಯ ತಲೆ ಎತ್ತಿ ನಿಂತಿತು. ಈಗ ಕುಕ್ಕರಹಳ್ಳಿ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಬೇರೆ, ಬೇರೆ ಶಾಲೆಯ ವಿದ್ಯಾರ್ಥಿಗಳು ನಮ್ಮಲ್ಲಿ ವಸತಿ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ವಸತಿ ನಿಲಯ ಕಲ್ಪಿಸಿದಂತೆ ವಿದ್ಯಾರ್ಥಿನಿಯರಿರ ಓದಿಗೂ ಪೂರಕವಾಗುವಂತೆ ಬಸವಮಾರ್ಗ ಸಂಸ್ಥೆಯಿAದ ಬಸ್ ವ್ಯವಸ್ಥೆ ಮಾಡಿಕೊಡಲಾಗಿದೆ. ಕುಕ್ಕರಹಳ್ಳಿ ಶಾಲೆಗೆ ದೂರದೂರುಗಳಿಂದ ಹೆಣ್ಣು ಮಕ್ಕಳು ಬರುತ್ತಿದ್ದರು. ಸರಿಯಾದ ಸಮಯಕ್ಕೆ ಬಸ್ ಬಾರದೆ ಇದ್ದುದ್ದರಿಂದ ಅವರ ಓದಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ಸಂಸ್ಥೆಯಿAದ ಹೆಣ್ಣುಮಕ್ಕಳಿಗೆಂದೇ ಬಸ್ ಕೊಡುಗೆ ನೀಡಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ನಿತ್ಯ ಈ ಬಸ್ ಗ್ರಾಮಾಂತರ ಭಾಗದ ವಿದ್ಯಾರ್ಥಿನಿಯರನ್ನು ಶಾಲೆಗೆ ಕರೆದುಕೊಂಡು ಬಂದು ಶಾಲೆ ಬಿಟ್ಟ ಮೇಲೆ ಮತ್ತೆ ಅವರನ್ನು ಮನೆಗೆ ಬಿಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ವಿದ್ಯಾರ್ಥಿನಿಯರಿಗೂ ವಸತಿ ನಿಲಯ ಸ್ಥಾಪನೆ ಮಾಡಬೇಕು ಎನ್ನುವ ಬೇಡಿಕೆ ಒತ್ತಾಯ ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಅವರಿಗೂ ವಸತಿ ನಿಲಯ ಸ್ಥಾಪನೆ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಬಸವಮಾರ್ಗ ವಸತಿ ನಿಲಯದಲ್ಲಿ ಮಕ್ಕಳಿಗೆ ಕೇವಲ ಆಶ್ರಮವನ್ನು ಮಾತ್ರ ನೀಡಿಲ್ಲ. ವಿದ್ಯಾರ್ಥಿಗಳ ಓದಿಗೆ ಪೂರಕವಾಗಿ ಒಂದೊAದು ವಿಷಯಕ್ಕೂ ಒಂದೊAದು ಶಿಕ್ಷಕರನ್ನು ನೇಮಿಸಿಕೊಂಡು ಅವರ ಮೂಲಕ ಟ್ಯೂಷನ್ ಕೊಡಿಸಲಾಗುತ್ತಿದೆ. ನಮ್ಮ ವಸತಿ ನಿಲಯಕ್ಕೆ ದಾಖಲಾದ ಮೇಲೆ ವಿದ್ಯಾರ್ಥಿಗಳು ಪ್ರತಿ ಹಂತದ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿAದ ತೇರ್ಗಡೆಯಾಗುತ್ತಿದ್ದಾರೆ. ಇದರಿಂದ ಶಾಲೆಗೂ ಉತ್ತಮ ಹೆಸರು ಬರುತ್ತಿದೆ. ವಸತಿ ನಿಲಯದ ಈ ಸಾಲಿನ ಶೈಕ್ಷಣಿಕ ವಿದ್ಯಾರ್ಥಿಗಳು ಮುಂದಿನ ಹಂತಗಳಿಗೆ ಹೋಗುವ ವಿದ್ಯಾರ್ಥಿಗಳು ಕೃತಜ್ಞತಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹರ್ಷ ತಂದಿದೆ. ನಮ್ಮ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವುದರೊAದಿಗೆ ಮುಂದಿನ ದಿನಗಳಲ್ಲಿ ಶ್ರೇಷ್ಠ ವ್ಯಕ್ತಿತ್ವದೊಂದಿಗೆ ಪ್ರಗತಿ ಸಾಧಿಸಬೇಕು. ಆ ಮೂಲಕ ದೇಶಕ್ಕೆ ಕೀರ್ತಿ ತರುವ ಕೆಲಸಗಳನ್ನು ಮಾಡಬೇಕು ಎಂದು ಶುಭಕೋರಿದರು.

ಶಿಕ್ಷಕರಾದ ನಿರಂಜನ್ ರಾಜೇ ಅರಸ್, ಡಾ.ಸುನೀಲ್ ಪಿ.ರಾಜ್, ಪುನಿತಾ, ಕೌಸಲ್ಯ, ವಾರ್ಡನ್ ಜೀವನ್, ಮಕ್ಕಳು ಮತ್ತು ಪೋಷಕರು ಇದ್ದರು.

ನಗರದ ಸರಸ್ವತಿಪುರಂನಲ್ಲಿ ಇರುವ ಬಸವಮಾರ್ಗ ಫೌಂಡೇಷನ್ ಉಚಿತ ವಸತಿ ನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಕೃತಜ್ಞತಾ ಕಾರ್ಯಕ್ರಮದಲ್ಲಿ ವಸತಿ ನಿಲಯದ ಮಕ್ಕಳು ಎಸ್.ಬಸವರಾಜು ಅವರಿಗೆ ಸನ್ಮಾನ ಮಾಡಿದರು. ನಿರಂಜನ್ ರಾಜೇ ಅರಸ್, ಡಾ.ಸುನೀಲ್ ಪಿ.ರಾಜ್, ಪುನಿತಾ, ಕೌಸಲ್ಯಾ, ಜೀವನ್ ಇತರರು ಇದ್ದರು.

Leave a Reply

Your email address will not be published. Required fields are marked *