ಮನಸ್ಸು ಶುದ್ಧಿಯಾಗಿ ಹೃದಯಪೂರ್ವಕ ಕಾರ್ಯಮಾಡಲು ಭಗವದ್ಗೀತೆ ಮಾರ್ಗದರ್ಶಕ : ಶ್ರೀಅಶೋಕ್ ಭಟ್

ಚಾಮರಾಜನಗರ: ಮನಸ್ಸು ಶುದ್ಧಿಯಾಗಿ ಹೃದಯಪೂರ್ವಕ ಕಾರ್ಯಮಾಡಲು ಭಗವದ್ಗೀತೆ ಮಾರ್ಗದರ್ಶಕವಾಗಿದೆ. ಶ್ರೀ ಭಗವದ್ಗೀತಾ ಅಧ್ಯಯನ, ಪಾರಾಯಣದಿಂದ ಶಿಕ್ಷಣ ಹಂತದಲ್ಲಿ ಏಕಾಗ್ರತೆ ಹೆಚ್ಚಾಗಿ ಮನಸ್ಸು ವಿಕಾಸ ಹೊಂದಿ, ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯವಿದೆ ಎಂದು ಶಿವಮೊಗ್ಗದ ಹಿರಿಯ ವಕೀಲರು, ಶ್ರೀ ಭಗವದ್ಗೀತೆ ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಅಶೋಕ್ ಭಟ್ ತಿಳಿಸಿದರು.
ನಗರದ ಸೇವಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ, ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಶಿರಶಿ, ಉತ್ತರ ಕನ್ನಡ, ಶ್ರೀ ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಶ್ರೀ ಭಗವದ್ಗೀತಾ ಅಭಿಯಾನ-೨೦೨೫ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭಗವದ್ಗೀತೆ ಅಧ್ಯಯನದಿಂದ ದುರ್ಬಲ ಮನಸ್ಸು ಹೋಗಿ ಆತ್ಮ ಶಕ್ತಿ ಹೆಚ್ಚಿ, ಶ್ರೇಷ್ಠರಾಗಿ ಬದುಕಲು ಶಕ್ತಿ ನೀಡುತ್ತದೆ ಎಂದರು.
ಅಭಿಯಾನದ ಗೌರವಾಧ್ಯಕ್ಷ ಜಿ.ಎಂ.ಹೆಗಡೆ, ಕಳೆದ ದಶಕಗಳಿಂದ ಭಗವದ್ಗೀತಾ ಅಭಿಯಾನ ಜಿಲ್ಲೆಯಲ್ಲಿ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಸಾವಿರಾರು ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಸರ್ವರೂ ಕಲಿತು ಸಮರ್ಪಣಾ ಮಾಡುವ ಕಾರ್ಯದಲ್ಲಿ ಪಾಲ್ಗೊಂಡಿರುವುದು ಸಂತಸ ಎಂದರು.
ಮಹರ್ಷಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಾರಾಯಣ ದೇಸಾಯಿ ಭಗವದ್ಗೀತೆಯ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಭಗವದ್ಗೀತೆ ಅಭಿಯಾನದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ, ಸೇವಾ ಭಾರತಿ ಸಂಸ್ಥೆ ಕಾರ್ಯದರ್ಶಿ ವಾಸುದೇವರಾವ್, ಬಾಲಸುಬ್ರಹ್ಮಣ್ಯ, ಸೇವಾಭಾರತಿ ಸಂಸ್ಥೆಯ ಅಭಿಲಾಷ್, ಅಭಿಯಾನ ಸಮಿತಿಯ ಅಕ್ಷಯಭಟ್, ಶೋಭಾ, ಎಸ್ ಸುರೇಶ್, ಕೇಶವಮೂರ್ತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *