‘ಭಗೀರಥ ಪ್ರಿಮೀಯರ್ ಲೀಗ್ ಐಪಿಎಲ್ ಸೀಸನ್-2 ಲೋಗೊ ಬಿಡುಗಡೆ

ಪಂದ್ಯಾವಳಿ ಯಶಸ್ಸಿಗೆ ಫೈನಾಪಲ್ ಮಂಜು ಸಲಹೆ

ಚಾಮರಾಜನಗರ: ನಗರದಲ್ಲಿ ‘ಭಗೀರಥ ಪ್ರಿಮೀಯರ್ ಲೀಗ್ ಐಪಿಎಲ್ ಸೀಸನ್-2 ಲೋಗೊವನ್ನು ಮಲೆ ಮಹದೇಶ್ವರ ಫ್ರೂಟ್ಸ್ ಮಾಲೀಕರಾದ ಪೈನಾಪಲ್ ಮಂಜು ಬಿಡುಗಡೆ ಮಾಡಿದರು.

ಈ ವೇಳೆ ಮಾತನಾಡಿದ ಅವರು ಕ್ರೀಡಾಕೂಟಗಳಲ್ಲಿ ಸೋಲುಗೆಲುವು ಸಹಜ, ಎರಡನ್ನು ಸಮಾನವಾಗಿ ಸ್ವೀಕರಿಸುವ ಮೂಲಕ ಕ್ರೀಡಾಪಟುಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು, ಯಾವುದೇ ಪಂದ್ಯಾವಳಿಯನ್ನು ಆಯೋಜನೆ ಮಾಡಿದರೂ, ನಿಮ್ಮ ಜೊತೆ ಕೈ ಜೋಡಿಸುತ್ತೇವೆ, ನಮ್ಮ ಸಹಕಾರ ಇದ್ದೇ ಇರುತ್ತದೆ. ಮುಂಬರುವ ಭಗೀರಥ ಪ್ರೀಮಿಯರ್ ಲೀಗ್ ಐಪಿಎಲ್ ಸೀಸನ್ -2 ಪಂದ್ಯಾವಳಿಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಲೋಗೋ ಬಿಡುಗಡೆ ವೇಳೆ ¥ಟಾಕಿಸಿಡಿಸಿ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ರಾಜೇಂದ್ರ, ಮಾರ್ಕೆಟ್ ಅಧ್ಯಕ್ಷ ಕಿಟ್ಟಿ, ಜವರ, ಸಲೀಂ, ಕೆ.ಟಿ.ಆರ್ ಮಹೇಶ್, ಆರ್.ಪಿ. ರುದ್ರ, ರಾಹುಲ್ ಭಾಸ್ಕರ್, ಮನು, ಸಮೀ ಉಲ್ಲಾ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *