ಭಗವಾನ್ ಬಿರ್ಸಾ ಮುಂಡಾ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದರು : ಆರ್.ಅಶೋಕ್

ಚಾಮರಾಜನಗರ : ಭಗವಾನ್ ಬಿರ್ಸಾ ಮುಂಡಾ ಬ್ರಿಟಿಷ್ ಆಳ್ವಿಕೆಯ ವಿರುದ್ಧ ದಂಗೆ ಎದ್ದು ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದರು ಎಂದು ವಿಪಕ್ಷನಾಯಕ ಆ‌ರ್. ಅಶೋಕ್ ಹೇಳಿದರು.
 ನಗರದ ವರನಟ ಡಾ.ರಾಜ್ ಕುಮಾರ್  ಕಲಾಮಂದಿರದಲ್ಲಿ  ಬಿಜೆಪಿ ವತಿಯಿಂದ ನಡೆದ ಜನಜಾತೀಯ ಗೌರವ ದಿವಸ ಭಗವಾನ್ ಬಿರ್ಸಾಮುಂಡಾ ಅವರ 150ನೇ ಜಯಂತಿ ಸಮಾರಂಭವನ್ನು ಉದ್ಘಾಟಿಸಿದ ಮಾತನಾಡಿದರು.
ಬಿರ್ಸಾ ಮುಂಡಾ ಅವರ ಜಯಂತಿ ನರೇಂದ್ರಮೋದಿ ಅವರ ನೇತೃತ್ವ ಕೇಂದ್ರ ಸರ್ಕಾರ ಇಡೀ ದೇಶಾದ್ಯಂತ ಆಚರಣೆ ಮಾಡುತಿದೆ. ಪ್ರಪ್ರಥಮ ಬಾರಿಗೆ ಬ್ರಿಟಿಷರ ವಿರುದ್ಧ ಧ್ವನಿಎತ್ತಿ ಹೋರಾಡಿದರು. 25ನೇ ವರ್ಷಕ್ಕೆ ನಿಧನರಾದರು. ಅವರು 18 ವರ್ಷಕ್ಕೆ ಬುಡಕಟ್ಟು ಸಮುದಾಯವನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಮೂಲಕ ಬುಡಕಟ್ಟು ಸಂಸ್ಕೃತಿ ಸಂರಕ್ಷಣೆ ಮಾಡಿದರು. ಆ ಕಾಲದಲ್ಲಿ ಬ್ರಿಟಿಷರು ಮತಾಂತರ ಮಾಡುವ ಹುನ್ನಾರ ಮಾಡಿದರು. ಮತಾಂತರ ವಿರುದ್ಧವೂ ಹೋರಾಟ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಬಿರ್ಸಾ ಮುಂಡಾ ಅವರು ದೇಶಕ್ಕೆ ಕೀರ್ತಿ ತರುವ ಕೆಲಸವನ್ನು ಮಾಡಿದರು. ಅವರ ಜಯಂತಿಯನ್ನು ಕೇಂದ್ರ ಸರ್ಕಾರ, ಬಿಜೆಪಿ ಆಚರಣೆ ಮಾಡುವ ಮೂಲಕ ಬುಡಕಟ್ಟು ಜನರ ಹಕ್ಕುಗಳನ್ನು ರಕ್ಷಣೆ ಮಾಡಲಾಗುತ್ತದೆ. ಸಮಾಜದಲ್ಲಿ ಒಂದಾಗಿ ಕೆಲಸ ಮಾಡುವ ಅವಕಾಶವನ್ನು ಮೋದಿಯವರು ಕಲ್ಪಿಸಿಕೊಡುತ್ತಿದ್ದಾರೆ.ಬಿರ್ಸಾಮುಂಡಾ ಅವರ ತ್ಯಾಗವು ಇಂದಿಗೂ ಆದಿವಾಸಿಗಳ ಸಮುದಾಯಗಳಿಗೆ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಇತರರಿಗೆ ಸ್ಫೂರ್ತಿಯಾಗಿದೆ ಎಂದರು.
  ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಮಾಜಿ ಸಚಿವೆ ಭಾರತಿಪ್ರವೀಣ್ ಪವರ್ ಮಾತನಾಡಿ,   ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಭಗವಾನ್ ಬಿರ್ಸಾಮುಂಡಾ ಜಯಂತಿ ಆಚರಣೆ ಮಾಡುವ ಅವರ ಜೀವನ ಚರಿತ್ರೆಯನ್ನು ದೇಶಕ್ಕೆ ತಿಳಿಸಿಕೊಡುವ ಕೆಲಸ ಮಾಡುತ್ತಿದೆ ಇಂತಹ ಕೆಲಸವನ್ನು ಬೇರೆ ಸರ್ಕಾರ ಮಾಡಿಲ್ಲ. ಅವರು ದೇಶಕ್ಕಾಗಿ, ಬುಡಕಟ್ಟು ಸಮುದಾಯಕ್ಕಾಗಿ ತ್ಯಾಗ ಮಾಡಿದ್ದಾರೆ. ಮೋದಿಯವರು ನಮಗೆ ದೇವರು ಕೊಟ್ಟವರವಾಗಿದ್ದು ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡಬೇಕಿದೆ. ಆಗಾಗಿ ಅವರು ತಂದಿರುವ ಯೋಜನೆಗಳ ನ್ನು ಮನೆಮನೆಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಭಗವಾನ್ ಬಿರ್ಸಾಮುಂಡಾ ಅವರು ಬ್ರಿಟಿಷರ ವಿರುದ್ದ ಹೋರಾಟ ಮಾಡಿ ಬುಡಕಟ್ಟು ಸಮುದಾಯಗಳ ರಕ್ಷಣೆ ಮಾಡಿದ ಮಹಾಪುರುಷರು. ಅವರನ್ನು ಸ್ಮರಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಿದೆ ಎಂದರು.
 ಸಮಾರಂಭದಲ್ಲಿ  ಎಸ್ ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಚಿವ ಎನ್.ಮಹೇಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಸ್.ಬಾಲರಾಜು, ಪ್ರೋ.ಮಲ್ಲಿಕಾರ್ಜುನಪ್ಪ,
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹಾದೇವಸ್ವಾಮಿ,  ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ಮಾಜಿ ಅಧ್ಯಕ್ಷ ಆರ್.ಸುಂದರ್, ಮುಖಂಡ ಅಪ್ಪಣ್ಣ ಎಸ್ ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್, ಜಿಲ್ಲಾಧ್ಯಕ್ಷ ಚಂದ್ರಶೇಖರ್, ಜಿ.ಪಂ.ಮಾಜಿ ಸದಸ್ಯ ಬಾಲರಾಜು,  ನಗರ ಮಂಡಲ ಅಧ್ಯಕ್ಷ ಶಿವರಾಜ್, ಚೂಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ಜಿಲ್ಲಾ ಉಪಾಧ್ಯಕ್ಷ ಶಿವುವಿರಾಟ್, ತಾಲೂಕು ಪ್ರಧಾನ ಕಾರ್ಯದರ್ಶಿ ಗಳಾದ ಕೂಸಣ್ಣ, ಮಹೇಶ್, ರಾಮಸಮುದ್ರ ಶಿವಣ್ಣ,ಜಿಲ್ಲಾ‌ಮೋರ್ಚಾದ ಅಧ್ಯಕ್ಷೆ ಕಮಲಮ್ಮ, ಪ್ರಧಾನ ಕಾರ್ಯದರ್ಶಿ ಶೈಲಜಾ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *