ಚಾಮರಾಜನಗರದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ

  • ಭೀಮರಾವ್ ಹೆಬ್ಬಾಗಿಲು ಮುಂಭಾಗದಲ್ಲಿ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮ

ಚಾಮರಾಜನಗರ: ದಲಿತ ಸಂಘರ್ಷ ಸಮಿತಿ  ಡಿ.ಜಿ. ಸಾಗರ್ ಬಣದ ವತಿಯಿಂದ ನಗರದಲ್ಲಿಮಹಾರ್ ವೀರಯೋಧರ ಭೀಮ ಕೋರೆಗಾಂವ್
ವಿಜಯೋತ್ಸವ  ಆಚರಿಸಲಾಯಿತು.

ನಗರದ  ಭೀಮರಾವ್ ಹೆಬ್ಬಾಗಿಲು ಬಳಿ ಪಟಾಕಿ ಸಿಡಿಸಿ,  ಸಿಹಿಹಂಚಿ ಮಹಾರ್ ಸೈನಿಕರ ಪರ ಜೈಕಾರ ಕೂಗಿ ಸಂಭ್ರಮಿಸಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಮಾತನಾಡಿ, 30 ಸಾವಿರ ಪೇಶ್ವೆಗಳನ್ನು 500 ಮಹಾರ್ ಸೈನಿಕರು ಸೋಲಿಸಿ ವಿಜಯಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾ ಗುತ್ತಿದೆ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲುಕೀಳುಗಳ ವಿರುದ್ಧ ನಿಂತು ಮಾನವೀಯ ಮೌಲ್ಯಗಳನ್ನು ಪಡೆದು ಕೊಳ್ಳಲು ಹಂಬಲಿಸುವ ಮಹಾರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟ ವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಟೋ ಉಮೇಶ್,  ಶಿವಸ್ವಾಮಿ ಕೊತ್ತಲವಾಡಿ ಸಿದ್ದಪ್ಪ , ಚಿಕ್ಕ, ಮಂಜೇಶ್, ರಂಗಸ್ವಾಮಿ, ಪಾಪಣಿ, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *