- ಶಾಸಕ ಪುಟ್ಟರಂಗಶೆಟ್ಟಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಶುಭ ಕೋರಿಕೆ
ಚಾಮರಾಜನಗರ : 208ನೇ ಭೀಮ ಕೊರೆಗಾಂವ್ ವಿಜಯೋತ್ಸವದ ಅಂಗವಾಗಿ ಅಂಬೇಡ್ಕರ್ ಅನುಯಾಯಿಗಳ ಬಳಗ ಮತ್ತು ಕಾನ್ಸಿರಾಂ ವಿದ್ಯಾರ್ಥಿ ಸಂಘದ ವತಿಯಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಯಿತು.
ರಾಮಸಮುದ್ರದಲ್ಲಿ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಶಾಸಕರು ಬೈಕ್ ರ್ಯಾಲಿ ಚಾಲನೆ ನೀಡಿ ಶುಭ ಕೋರಿದರು. ಚಾಲನೆಗೊಂಡ ಬೈಕ್ ರ್ಯಾಲಿಯು ಅಲ್ಲಿಂದ ಹೊರಟು, ಭುವನೇಶ್ವರಿ. ಡಿವೆಯೇಷನ್ ರಸ್ತೆ,, ಗುಂಡ್ಲುಪೇಟೆ ವೃತ್ತ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿರುವ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಮಕ್ಕಳಿಗೆ ಮಾಲಾರ್ಪಣೆ ಬೈಕ್ ರ್ಯಾಲಿ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ವಕೀಲರಾದ ಮಹೇಂದ್ರ ಮಾತನಾಡಿ, ಭೀಮ ಕೋರೆಗಾಂವ್ ಯುದ್ಧ ಒಂದು ಸ್ವಾಭಿಮಾನದ ಯದ್ಧವಾಗಿದೆ. ಮಹಾರಾಷ್ಟ್ರದ ಪೂನಾ ಪ್ರಾಂತ್ಯದಲ್ಲಿ ಭೀಮನದಿ ದಡದಲ್ಲಿ ನಡೆದಂತಹ ಒಂದು ಯುದ್ಧ ಸಾವಿರಾರು ವರ್ಷ ಮನುಸ್ಮೃತಿ ಮನುವಾದವನ್ನು ಘೋಷಣೆ ಮಾಡಿಕೊಂಡು ಕಾನೂನು ಆಗಿ ಜಾರಿ ಮಾಡಿಕೊಂಡು ಆಳ್ವಿಕೆ ಮಾಡುತ್ತಿದ್ದ ರಾಜರು. ಜನರ ನಡುವೆ ನಡೆದ ಮಹತ್ವ ಯುದ್ಧ ಎಂದು ಹೇಳಬಹುದು ಎಂದರು.
ಕಾರ್ಯಕ್ರಮದಲ್ಲಿ ಕಾನ್ಸಿರಾಂ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ವಾಸು ಹೊಂಡರಬಾಳು, ಭೀಮರಾಂ ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಅಮಿತ್,
ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ್, ಸಿ.ಕೆ. ಮಂಜುನಾಥ್, ಸಿ.ಎಂ.ಶಿವಣ್ಣ, ಬಿಎಸ್‌ಪಿ ಎಸ್.ಪಿ.ಮಹೇಶ್ ಕಾಂತರಾಜು, ಬಾಬು, ಅಕ್ಷಯ್, ಸ್ವಾಮಿ ಮಧು, ಗಣೇಶ್, ಸುಭಾಷ್ ಇತರರು ಹಾಜರಿದ್ದರು.