ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯಾಧ್ಯಕ್ಷರ ಹುಟ್ಟುಹಬ್ಬ: ಭೋಜನ ವ್ಯವಸ್ಥೆ

ಚಾಮರಾಜನಗರ : ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿ ಬಗಳದ ವತಿಯಿಂದ ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಪಾರ್ವತಿ ಬಾಲ ಸೇವಾಶ್ರಮದ ಮಕ್ಕಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಯಿತು.
ನಾಯಕ ಜನಾಂಗದ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ಅವರ ಪುತ್ರ ಸಂತೋಷ್‌ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.  ಸಂತೋಷ್‌, ಬುಲೆಟ್ ಚಂದ್ರು ಮಾತನಾಡಿ, ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಪಾರ್ವತಿ ಬಾಲ ಸೇವಾಶ್ರಮದ ಮಕ್ಕಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಯಿತು. ಅವರಿಗೆ ಶ್ರೀಚಾಮರಾಜೇಶ್ವರಸ್ವಾಮಿ ಹೆಚ್ಚಿನ ಆರೋಗ್ಯ. ಆಯಸು ಕರುಣಿಸಲಿ, ರಾಜಕಾರಣದಲ್ಲಿ ಉನ್ನತ ಸ್ಥಾನಮಾನ ದೊರಕಿಸಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಶಂಕರನಾಯಕ, ಚಂದ್ರು, ಮಹೇಶ್, ಸಂತೋಷ್, ಕುಮಾರ್, ಕಿರಣ್, ಪ್ರಜ್ವಲ್ ನಾಯಕ, ಮಾತಾಜಿ ಚಂದ್ರಕಲಾ, ಪಾರ್ವತಿ ಹಾಜರಿದ್ದರು.

Leave a Reply

Your email address will not be published. Required fields are marked *