ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 51 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ರಾಜರತ್ನ ಅಪ್ಪು ಯುವಸೇನಾ ಸಮಿತಿ ವತಿಯಿಂದ ಚಿಕನ್ ಬಿರಿಯಾನಿ ವಿತರಿಸಲಾಯಿತು.
ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿರುವ ಕಾಮಧೇನು ಮಿಲ್ಕ್ ಪಾರ್ಲರ್ ಮುಂಭಾಗದಲ್ಲಿ ರಾಜರತ್ನ ಅಪ್ಪು ಯುವಸೇನಾ ಸಮಿತಿ ಅಯೋಜಿಸಿದ ಕಾರ್ಯಕ್ರಮದಲ್ಲಿ ಅಪ್ಪು ಕಟೌಟ್ ಗೆ ಮಾಲಾರ್ಪಣೆ ಮಾಡಿ ಕೇಕ್ ಕತ್ತರಿಸಿ ಅಪ್ಪು ಅಪ್ಪು ಅಪ್ಪು ಎಂದು ಜೈಕಾರ ಕೂಗಿ ಸಂಭ್ರಮಿಸಿದರು. ನಂತರ ಚಿಕನ್ ಬಿರಿಯಾನಿ ವಿತರಿಸಿದರು.
ಅಧ್ಯಕ್ಷ ಕ್ಯಾಂಟೀನ್ ಮಂಜು, ಮಿಲನಮಂಜು, ಕಾರ್ತಿಕ್ ಪವರ್,ರಮೇಶ್, ಮದನ್, ಕಾರ್ತಿಕ್ ಕಾರ್, ಕೆ. ಆರ್.ಮಂಜು,ಬಂಗಾರನಾಯಕ,ಮಣಿ, ಅಂಕಶೆಟ್ಟಿ, ಶಿವು, ಪ್ರದೀಪ್, ಮೋಹನ್, ಮಹೇಶ್ ಅಧಿತಿ, ಚೇತನ್, ಸುಸೈನ್, ವಿನೋದ್, ಪ್ರಭ ಮಹೇಶ, ಮಂಜುನಾಥ್, ಕುಮಾರ್, ರಾಜೇಂದ್ರ, ಸಿದ್ದರಾಜು, ಹರದನಹಳ್ಳಿ ಮಹೇಶ್ಇತರರು ಹಾಜರಿದ್ದರು.