ಬೂತ್‌ಮಟ್ಟದಿಂದಲ್ಲೇ ಬಿಜೆಪಿ ಸದೃಢಗೊಳಿಸಲು ಸಜ್ಜಾಗಿ : ಜಯಸುಂದರ್

  • ಬಿಜೆಪಿ ಎಸ್‌ಟಿ ಮೋರ್ಚಾದ ಜಿಲ್ಲಾ ಮಟ್ಟದ ಕಾರ್ಯಾಗಾರ

ಚಾಮರಾಜನಗರ: ಜಿಲ್ಲೆಯಲ್ಲಿ ತಳಮಟ್ಟದಿಂದಲ್ಲೇ ಪಕ್ಷವನ್ನು ಸದೃಢಗೊಳಿಸಲು ಸಜ್ಜಾಗಬೇಕು ಎಂದು ಬಿಜೆಪಿ ಎಸ್‌ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಎಸ್‌ಟಿ ಮೋರ್ಚಾದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷರಾದ ಸಿ.ಎಸ್.ನಿರಂಜನ್‌ಕುಮಾರ್ ಅವರ ಸೂಚನೆ ಮೇರೆಗೆ ಎಸ್‌ಟಿ ಮೋರ್ಚಾದ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಅಯೋಜಿಸಲಾಗಿದೆ ಇದರ ಉದ್ದೇಶ ಜಿಲ್ಲೆಯ ಎಂಟು ಮಂಡಲಗಳ ಪದಾಧಿಕಾರಿಗಳ ಪಟ್ಟಿ ಆಗಬೇಕಿದೆ. ಸಕ್ರೀಯ ಪದಾಧಿಕಾರಿಗಳ ಒಳ್ಳೆಯ ತಂಡವನ್ನು ರಚನೆ ಮಾಡಬೇಕಿದೆ ಎಂದರು.
ಆಯಾಯ ಮಂಡಲಗಳಲ್ಲಿ ಸಭೆ ಮಾಡಬೇಕು ಅ ಮೂಲಕ ಮುಂಬರುವ ಗ್ರಾಮ ಪಂಚಾಯಿತಿ, ನಗರಸಭಾ, ಜಿ.ಪಂ.ತಾ.ಪಂ., ಸ್ಥಳೀಯ ಸಂಸ್ಥೆಯಗಳ ಚುನಾವಣೆಯಲ್ಲಿ ಸಮುದಾಯ ಹೆಚ್ಚು ಯುವಕರನ್ನು ತೊಡಗಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಹುರಿದುಂಬಿಸಿ ಅವರಿಗೆ ಅಧಿಕಾರ ಕೊಡಿಸುವ ನಿಟ್ಟಿನಲ್ಲಿ ಈಗಿನಿಂದಲ್ಲೇ ಸಕ್ರಿಯರಾಗಬೇಕು. ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದರೆ ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಬಹುಮತ ಗೆಲುವು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಎಲ್ಲ ಮಂಡಲ ಅಧ್ಯಕ್ಷರುಗಳು ತಮ್ಮ ಪದಾಧಿಕಾರಿಗಳ ಪಟ್ಟಿ ಮಾಡಿ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಸಂಘಟಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಎಸ್‌ಟಿ ಮೋರ್ಚಾದ ಜಿಲ್ಲಾ ಉಸ್ತುವಾರಿ ಮಹೇಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕೆಂಪನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುತ್ತೂರು ನಾಗರಾಜು, ಯಾನಗಳ್ಳಿ ಕರಿನಾಯಕ, ಕಿಲಗೆರೆ ಬಂಗಾರು, ತೆರಕಣಾಂಬಿ ರಮೇಶ್, ಮಧು, ಉಡಿಗಾಲ ಮಹೇಶ್, ಪುಣಜನೂರು ಸೋಮು, ನಾಗೇಶ್ ಮಾಸ್ಟರ್, ರಘು, ಚಿಕ್ಕಾಟಿ ಶಿವಣ್ಣ, ಗುಂಡ್ಲುಪೇಟೆ ಮಂಡಲ ಅಧ್ಯಕ್ಷ ಮಂಜುನಾಥ್‌, ಕಿಟ್ಟಿ, ಚಂದ್ರೇಶ್, ಸೀಗಮಾರನಾಯಕ, ಬಿ.ರಾಮನಾಯಕ, ಸಿದ್ದಪ್ಪಾಜಿ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *