ಜಿಲ್ಲೆಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಸದೃಢಗೊಂಡರೆ ಬಿಜೆಪಿ ಗೆಲುವು ಖಚಿತ : ಎನ್.ಮಹೇಶ್

  • ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾದ ವಿಶೇಷ ಸಭೆ


ಚಾಮರಾಜನಗರ : ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸಬೇಕಾದರೆ ಎಸ್‌ಸಿ ಮೋರ್ಚಾ ಬಹಳ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಮಾಜಿ ಸಚಿವರು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಎಸ್‌ಸಿ ಮೋರ್ಚಾದ ನೂತನ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಮೊದಲು ಅಥವಾ ಎರಡನೆಯ ಸ್ಥಾನದಲ್ಲಿರುವ ಜನಸಂಖ್ಯೆ ಜಿಲ್ಲೆಯಲ್ಲಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಸಿ ಸಮುದಾಯ ನಂಬ‌ರ್ ಒನ್ ಸ್ಥಾನದಲ್ಲಿದ್ದು, 60 ಸಾವಿರ ಮತದಾರರು ಇದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 45 ರಿಂದ 50 ಸಾವಿರ ಇದ್ದಾರೆ. ಚಾಮರಾಜನಗರ, ಹನೂರು ವಿಧಾನಸಭಾ ಕ್ಷೇತ್ರದಲ್ಲೂ ಅಷ್ಟೆ ಇದ್ದಾರೆ ಎಂದರು.

ಬಿಜೆಪಿಯಲ್ಲಿ ಮುಖಂಡರು, ಕಾರ್ಯಕರ್ತರು ಗಮನಿಸಿ ಜಿಲ್ಲೆಯಲ್ಲಿ ಬಿಜೆಪಿಗೆ ಸೋಲಿಗೆ ಕಾರಣ ಎಸ್‌ಸಿ ಸಮುದಾಯವಾಗಿದೆ. ಇದು ವಸ್ತು ಸ್ಥಿತಿ ನಾವು ಅರ್ಥಮಾಡಿಕೊಳ್ಳಬೇಕು. ಸಮುದಾಯವನ್ನು ಜಾಗೃತಿಗೊಳಿಸಿ ಬಿಜೆಪಿಯ ಮೇಲಿರುವ ಅನುಮಾನಗಳು, ಅಪನಂಬಿಕೆಗಳನ್ನು ಹೋಗಲಾಡಿಸಿದರೆ ಯಾವ ಕಾರಣಕ್ಕೂ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ನಮ್ಮ ಸಮುದಾಯದ ನಡುವೆ ಕಾಂಗ್ರೆಸ್‌ನವರು ಬಿತ್ತಿರುವಂತಹ ಅಪನಂಬಿಕೆ ಇದೆಯಲ್ಲ. ಅದನ್ನು ಜಿಲ್ಲೆಯಲ್ಲಿ ಎಸ್‌ಸಿ ಮೋರ್ಚಾ ಪ್ರವಾಸಕೈಗೊಂಡು ಹೋಗಲಾಡಿಸುವ ಕೆಲಸ ಮಾಡಬೇಕು. ನಮ್ಮ ಕಾಲೋನಿಯಲ್ಲಿರುವ ಅಪನಂಬಿಕೆಗಳನ್ನು ನಾವೇ ಕುಳಿತು ಸರಿಪಡಿಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಿಸುವ ಜವಾಬ್ದಾರಿ ಎಸ್‌ಸಿ ಮೋರ್ಚಾದ ಮೇಲಿದೆ ಎಂದರು.

ಹಳೇ ಮೈಸೂರು ಭಾಗ ಕಷ್ಟ ಇದೆ. ಅ ಭಾಗದಲ್ಲಿ 12ರಿಂದ 15 ಸೀಟು ಗೆಲ್ಲುವ ತನಕ 113 ದಾಟಲ್ಲ ಎಂದು ಅಮಿತ್‌ಶಾ ಅವರು ಬಹಿರಂಗವಾಗಿ ಹೇಳಿದ್ದಾರೆ. ಈ ಭಾಗದಲ್ಲಿ ಕಾಂಗ್ರೆಸ್ ಯಾಕೆ ಪ್ರಾಬಲ್ಯವಾಗಿರುವುದಕ್ಕೆ ಮುಖ್ಯ ಕಾರಣ ದಲಿತರು ಕಾಂಗ್ರೆಸ್ ಮತ ಹಾಕುವುದು ಅಷ್ಟೆ. ಜಿಲ್ಲೆಯಲ್ಲಿ ಎಸ್‌ಸಿ. ಮೋರ್ಚಾದ ಸದೃಢವಾಗಬೇಕು ಜಿಲ್ಲೆಯ 8 ಮಂಡಲಗಳಲ್ಲೂ ಪದಾಧಿಕಾರಿಗಳು ಮಾಡಬೇಕು ಜಿಲ್ಲೆಯಲ್ಲಿ ಸಂಘಟನೆಯ ಜಾಲ ಗಟ್ಟಿಗೊಳ್ಳಬೇಕು ಅ ನಿಟ್ಟಿನಲ್ಲಿ ಎಸ್‌ಸಿ ಮೋರ್ಚಾ ಬೆಳೆಯಬೇಕು. ಅದಕ್ಕಾಗಿ ಬೇಕಾದರ ಎಲ್ಲ ಸಹಕಾರವನ್ನು ನೀಡಲು ನಾನು ಬದ್ಧವಾಗಿದ್ದೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷ ನವೀನ್ ಮೌರ್ಯ ಮಾತನಾಡಿ ಎಸ್‌ಸಿ ಮೋರ್ಚಾದ ಮೊದಲ ವಿಶೇಷ ಸಭೆಯು ಯಶ್ವಸಿಯಾಗಿ ನಡೆದಿರುವುದು ತುಂಭಾ ಸಂತಸವಾಗುತ್ತದೆ. ನನ್ನನ್ನು ಎಸ್‌ಸಿ ಮೋರ್ಚಾದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ ಜಿಲ್ಲಾಧ್ಯಕ್ಷರಾದ ಸಿ.ಎಸ್.ನಿರಂಜನ್‌ಕುಮಾರ್, ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹಾಗೂ ಎಲ್ಲ ಮುಖಂಡರಿಗೆ ಈ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷಕ್ಕೆ ಚ್ಯುತಿಯಾಗದ ರೀತಿಯಲ್ಲಿ ಎಲ್ಲ ಸಹಕಾರ, ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತೇನೆ ಎಂದರು.

ಎಸ್‌ಸಿ ಮೋರ್ಚಾದ ಉಸ್ತುವಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನೂರು ಮಹದೇವಸ್ವಾಮಿ, ಎಸ್‌ಸಿ ಮೋರ್ಚಾದ ನಿಕಟಪೂರ್ವ ಅಧ್ಯಕ್ಷ ಮೂಡಹಳ್ಳಿ ಮೂರ್ತಿ, ಮುಖಂಡ ಕೋಡಿಉಗನೆ ಮಂಜು ಮಾತನಾಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಉತ್ತುವಳ್ಳಿ ಪದ್ಮ, ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಶಿವಣ್ಣ, ನಲ್ಲೂರು ಪರಮೇಶ್ವರ್, ನಗರಸಭಾ ಮಾಜಿ ಸದಸ್ಯ ಕುಮುದಾಕೇಶವಮೂರ್ತಿ, ಡ್ರೈವರ್ ಮಹದೇವಯ್ಯ, ಲಾಟರಿ ಸಿದ್ದರಾಜು, ಭಾನುಪ್ರಕಾಶ್, ಹಸಗೂಲಿ, ಟಗರಪುರ ರೇವಣ್ಣ, ನಾಗಸ್ವಾಮಿ, ವಡ್ಡಲ್‌ಪುರ ನಾಗೇಂದ್ರ, ಕೊತ್ತನೂರು ರಾಜಶೇಖರ್, ನಲ್ಲೂರು ಶ್ರೀನಾಥ್, ಶೇಷಪ್ಪಾಪಾಸ್ವಾನ್, ಶಿವಮ್ಮ, ಹೇಮಂತ್, ರಾಮಸಮುದ್ರರಾಚಪ್ಪ ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *