ಚಾಮರಾಜನಗರ: ಪ್ರತಿಯೊಬ್ಬ ವಿದ್ಯಾರ್ಥಿಗಳು ರಕ್ತದಾನ ಮಾಡುವ ಸೇವಾ ಮನೋಭಾವನೆ ಬೆಳೆಸಿ ಕೊಳ್ಳಿ ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರೊಸಿ ಶೈಲೇಶ್ ಕುಮಾರ್ ತಿಳಿಸಿದರು.
ನಗರ ಜೋಡಿ ಜೋಡಿ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಐಕ್ಯೂಎಸಿ, ಯುವ ರೆಡ್ ಕ್ರಾಸ್ ಘಟಕ. ವಿಶ್ವ ಆರೋಗ್ಯ ದಿನ ಮತ್ತು ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ. ವಿದ್ಯಾರ್ಥಿಗಳು ರಕ್ತದಾನ ಮಾಡಿ ಇತರ ಜೀವ ಉಳಿಸಿ ಎಂದು ಮನವಿ ಮಾಡಿದವರು ಆರೋಗ್ಯವಂತ ಪ್ರತಿಯೊಬ್ಬ ವಿದ್ಯಾರ್ಥಿಗಳು ವರ್ಷಕ್ಕೆ ಕನಿಷ್ಠ ಮೂರು ಬಾರಿ ಆದರೂ ರಕ್ತದಾನ ಮಾಡುವ ಮನೋಭಾವನೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು
ಕಾಲೇಜಿನ ಪ್ರೊಫೆಸರ್ ಹಾಗೂ ಯುವ ರೆಡ್ ಕ್ರಾಸ್ ಘಟಕಸಂಯೋಜಕ, ಡಾ ಆರ್ ಪ್ರಸಾದ್ ಮಾತನಾಡಿಸಂಪನ್ಮೂಲ ವ್ಯಕ್ತಿ. ಭಾರತೀಯ ರೆಡ್ ಕ್ರಾಸ್,ಡಾ ಮಹೇಶ್, ಹಾಗೂ ಡಾಕ್ಟರ್ ಶ್ವೇತ ಶಶಿಧರ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರಿಗೆ ಆಕಸ್ಮಿಕವಾಗಿ ಅಪಘಾತ ಹಾಗೂ ಕಾಲೇಜಿನಲ್ಲಿ ಬಿದ್ದು ಗಾಯ ಆದರೆ ಯಾವ ರೀತಿ ಪ್ರಥಮ ಚಿಕಿತ್ಸೆ ನೀಡುವುದು ಎಂಬುದರ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದರು ಇದರಿಂದ ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅನುಕೂಲವಾಯಿತು ಎಂದು ತಿಳಿಸಿದರು.
ಕಾಲೇಜಿನIQACಸಂಯೋಜಕಿ ಡಾ ಲಿಖಿತಾ ಎಸ್ ಅನುರಾಧ ಮಾತನಾಡಿ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಜೊತೆಗೆ ಈಗಾಗಲೇ ರಾಷ್ಟ್ರೀಯ ನಾಯಕರ ಜಯಂತಿ ಕಾರ್ಯಕ್ರಮಗಳಲ್ಲಿ ರಕ್ತದಾನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಗಂಡು ಹೆಣ್ಣು ಎಂಬ ಭೇದ ಭಾವ ಇಲ್ಲದೆ ಯಾರಿಗೆ ರಕ್ತ ಬೇಕು ಅಂತ ನಾಗರಿಕರಿಗೆ ರಕ್ತದಾನ ಮಾಡಿ ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಕಾರ್ಯಕ್ರಮದಲ್ಲಿ ಚಾಮರಾಜನಗರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ ಬಂಗಾರು. ಭಾರತೀಯ ರೆಡ್ ಕ್ರಾಸ್ ಘಟಕದ. ಕಾರ್ಯದರ್ಶಿಡಾ. ಶ್ವೇತ ಶಶಿಧರ್. ಡಾಕ್ಟರ್ ಮಹೇಶ್. ಪ್ರೊಫೆಸರ್ ದೀಪ. ಪ್ರೊ ಬಾಲಸುಬ್ರಮಣ್ಯ, ವಿದ್ಯಾರ್ಥಿನಿ ಸಂಘದ ಮಹಾಲಕ್ಷ್ಮಿ ಸೇರಿದಂತೆ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಜರಿದ್ದರು