


ಚಾಮರಾಜನಗರದಲ್ಲಿ “ರಕ್ತ ಚಂದ್ರ ಗ್ರಹಣ” ರಾಹುಗ್ರಸ್ತ ಖಗ್ರಾಸ ಚಂದ್ರಗ್ರಹಣ ಚಂದ್ರನು ಕೆಂಪು ಬಣ್ಣದಲ್ಲಿ ಗೋಕೋಚರವಾಗಿದ್ದಾನೆ.
ರಾಹುಗ್ರಸ್ತ ಖಗ್ರಾಸಚಂದ್ರಗ್ರಹಣ ಶ್ರೀ ವಿಶ್ವಾವಸುನಾಮ ಸಂವತ್ಸರ ಭಾದ್ರಪದ ಶುಕ್ಲ ಪೂರ್ಣಿಮಾ,ಶತಭಿಷ ನಕ್ಷತ್ರ ಕುಂಭ ರಾಶಿಯಲ್ಲಿ ರಾಹುಗ್ರಸ್ತ ಖಗ್ರಾಸ ಚಂದ್ರಗ್ರಹಣವು ಇದಾಗಿದೆ. ಈ ಗ್ರಹಣವು ಸುಧೀರ್ಘ ಗ್ರಹಣ ಎಂದು ಗುರುತಿಸಲಾಗಿದೆ.
ಅಲ್ಲದೆ ಏಳು ವರ್ಷಗಳ ಬಳಿಕ ಭಾರತದಲ್ಲಿ ಗೋಚರವಾಗುತ್ತಿರುವ ಕಾರಣ ಭಾರತೀಯರಿಗೆ ಇನ್ನಷ್ಟು ವಿಶೇಷವಾಗಿ ಗೋಚರವಾಗಿದೆ.
ಚಂದ್ರ ಗ್ರಹಣದ ಪ್ರಾರಂಭ ಕಾಲ 9 :57pm ,ಗ್ರಹಣದ ಮಧ್ಯಮ ಕಾಲ 11:44pm, ಸಂಪೂರ್ಣ ಚಂದ್ರ ಗ್ರಹಣ 11 ರಿಂದ 12:23 ರವರೆಗೆ, ಗ್ರಹಣದ ಅಂತ್ಯಕಾಲ 1:30AM. ಒಟ್ಟಾರೆ ಗ್ರಹಣ ಸಂಭವಿಸುವ ಒಟ್ಟು ಸಮಯ 5 ಗಂಟೆ 7 ನಿಮಿಷಗಳು.
ಚಿತ್ರ : ಎಸ್ ಚರಣ್ ಬಿಳಿಗಿರಿ, ಚಾಮರಾಜನಗರ