
ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಹೆಬ್ಸೂರು ಗ್ರಾಮದಲ್ಲಿ ಅತಿ ಶೀಘ್ರದಲ್ಲಿಯೇ ಬಿಎಂಸಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ಹೇಳಿದರು.
ಅವರು ಸಾಲಿಗ್ರಾಮ ತಾಲೂಕಿನ ಹೆಬ್ಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಘವು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುವ ಮೂಲಕ ಪ್ರಸ್ತುತ ಸಾಲಿನಲ್ಲಿ ಸುಮಾರು ಎರಡು ಕೋಟಿ ರೂ ಗಳ ವ್ಯವಹಾರವನ್ನು ಮಾಡಿ ಸುಮಾರು ೬,೫೦,೦೦೦ ರೂ ನಿವ್ವಳ ಲಾಭಗಳಿಸಿದೆ ಎಂದರು.
ಹಾಲು ಉತ್ಪಾದಕರುಗಳು ಸಂಘಕ್ಕೆ ಗುಣಮಟ್ಟದ ಹಾಲನ್ನು ನೀಡುವ ಮೂಲಕ ಸಂಘದ ಬೆಳವಣಿಗೆಯೊಂದಿಗೆ ತಮ್ಮ ಕುಟುಂಬಗಳು ಆರ್ಥಿಕ ಅಭಿವೃದ್ಧಿ ಹೊಂದಬೇಕೆAದು ಕರೆ ನೀಡಿದರು.
ಮೈಮುಲ್ ವತಿಯಿಂದ ರೈತರುಗಳಿಗೆ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮೈಮುಲ್ ಸದಾ ರೈತರ ಪರವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಸಂಘಕ್ಕೂ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಹಾಕಿದ ಹಾಲು ಉತ್ಪಾದಕರುಗಳನ್ನು ಹಾಗೂ ಹಾಲು ಉತ್ಪಾದಕರುಗಳ ಪ್ರತಿಭಾವಂತ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ವಿಸ್ತರಣಾಧಿಕಾರಿ ನೇಮಿನಾಥ ಮಾಕಾಣಿ, ಸಂಘದ ಅಧ್ಯಕ್ಷ ಗೋವಿಂದೇಗೌಡ, ಉಪಾಧ್ಯಕ್ಷೆ ಶಾರದ, ನಿರ್ದೇಶಕರುಗಳಾದ ಶ್ರೀನಿವಾಸ, ಎಚ್.ಜೆ.ರಮೇಶ, ಸುನಿಲ್ ಕುಮಾರ್, ಹೆಚ್.ಆರ್.ನಾಗೇಶ್, ಹೆಚ್.ಜೆ.ರೋಹಿತ್, ರಾಮಶೆಟ್ಟಿ, ರಾಜಮ್ಮ, ಭಾರತಿ, ಗಿರಿಜಮ್ಮ, ಸಿಇಓ ಗಿರೀಶ್, ಸಿಬ್ಬಂದಿಗಳಾದ ಹೆಚ್.ಎಂ.ಹರ್ಷಿತ್, ಪ್ರಜ್ವಲ್, ಗ್ರಾ.ಪಂ. ಸದಸ್ಯ ಮಹೇಂದ್ರ, ಸಂಘದ ಮಾಜಿ ಅಧ್ಯಕ್ಷ ಹರೀಶ್, ಗಾಯನಹಳ್ಳಿ ಡೇರಿ ಅಧ್ಯಕ್ಷ ಜ್ಯೋತಿಪ್ರಕಾಶ್, ಸಿಇಒ ನಾಗೇಶ್, ತಾಲೂಕು ಹಾಲಿನ ಡೇರಿಗಳ ನೌಕರರ ಸಂಘದ ಉಪಾಧ್ಯಕ್ಷ ಬೆಟ್ಟಹಳ್ಳಿ ದಿನೇಶ್, ಖಜಾಂಚಿ ಎಲ್.ಎಂ.ಮAಜುನಾಥ್, ಮುಖಂಡರುಗಳಾದ ಕಪನೀಗೌಡ, ದಿನೇಶ್, ರವಿ, ಮಹೇಶ್ ಸೇರಿದಂತೆ ಹಲವರು ಇದ್ದರು.