ಕಟ್ಟಡ, ನಿವೇಶನ ಮಾಲೀಕರು ನಮೂನೆ-3, ನಮೂನೆ-3ಎ ಪಡೆದುಕೊಳ್ಳಲು ಸೂಚನೆ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡಗಳು, ನಿವೇಶನಗಳನ್ನು ಹೊಂದಿರುವ ಆಸ್ತಿ ಮಾಲೀಕರು, ಅನುಭೋಗದಾರರು ಸರ್ಕಾರದ ಅಧಿಸೂಚನೆಯಂತೆ ಗಣಕೀಕೃತ ನಮೂನೆ-3 ಮತ್ತು ನಮೂನೆ-3ಎ ಯನ್ನು ಪಡೆದುಕೊಳ್ಳುವಂತೆ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

ಸರ್ಕಾರದ ಅಂತಿಮ ಅಧಿಸೂಚನೆ ಅನ್ವಯ ಎಲ್ಲಾ ರೀತಿಯ ಕಟ್ಟಡ ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಣೆಗೊಳಿಸಿ ಆಸ್ತಿ ತೆರಿಗೆಯನ್ನು 2024-25ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು ಸಂಬಂಧಪಟ್ಟ ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲಾತಿಗಳನ್ನು ಪಡೆದು, ಕರ್ನಾಟಕ ಪೌರಸಭೆಗಳ ಅಧಿನಿಯಮದ 1964ರ ಸೆಕ್ಷನ್ 106 (1ಬಿ)(ii) ಅನ್ವಯ ರಿಜಿಸ್ಟರ್-ಎ ನಲ್ಲಿ (ನಮೂನೆ-3) ಅಧಿಕೃತ ಸ್ವತ್ತುಗಳು ಹಾಗೂ ರಿಜಿಸ್ಟರ್-ಬಿ ನಲ್ಲಿ (ನಮೂನೆ-3ಎ) ಅನಧಿಕೃತ ಸ್ವತ್ತುಗಳ ಮಾಹಿತಿಯುಳ್ಳ ವಹಿಯನ್ನು ನಿರ್ವಹಿಸಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯೊಳಗೆ ಬರುವ ಸರ್ಕಾರಿ ಜಾಗ, ಅರೆಸರ್ಕಾರಿ, ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಸ್ವತ್ತುಗಳನ್ನು ಹೊರತುಪಡಿಸಿ ಇನ್ನುಳಿದ ಕಟ್ಟಡಗಳ ನಿವೇಶನಗಳ ಮಾಲೀಕರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಪೂರಕ ನೋಂದಾಯಿತ ದಾಖಲೆ ಪತ್ರಗಳು, ಸ್ವತ್ತಿನ ಭಾವಚಿತ್ರ, ಮಾಲೀಕರ ಫೆÇೀಟೋ, ನಮೂನೆ-15 (ಇಸಿ), ಕೆ.ಇ.ಬಿ ಬಿಲ್, ಕುಡಿಯುವ ನೀರಿನ ಬಿಲ್, ಕಟ್ಟಡ ಪರವಾನಗಿ ಮತ್ತು ಅನುಮೋದಿತ ನಕ್ಷೆ, ಏಕ ನಿವೇಶನ ವಿನ್ಯಾಸ ಅನುಮೋದನೆ ಅಥವಾ ಅನುಮೋದಿತ ಬಡಾವಣೆಯ ನಕ್ಷೆ, ಅಲಿನೇಷನ್ ನಕಲು ಪ್ರತಿ ಆರ್.ಟಿಸಿ ಮ್ಯೂಟೇಶನ್ ನಕಲು ಪ್ರತಿ, ಮಾಲೀಕರ ಆಧಾರ್ ಕಾರ್ಡ್ ಪ್ರತಿ, ಪಾನ್ ಕಾರ್ಡ್ ಪ್ರತಿ ಅಥವಾ ಚುನಾವಣಾ ಗುರುತಿನ ಚೀಟಿ ಹಾಗೂ ಇತರೆ ಅವಶ್ಯಕ ದಾಖಲಾತಿಗಳನ್ನು ಸಲ್ಲಿಸಿ ಸ್ವತ್ತಿಗೆ ಸಂಬಂಧಪಟ್ಟ ಆಸ್ತಿ ತೆರಿಗೆಯನ್ನು ಪಾವತಿಸಬೇಕು.
ಆಸ್ತಿಯನ್ನು ಗಣಕೀಕರಿಸಿಕೊಂಡು ನಮೂನೆ-3 ನಮೂನೆ-3ಎ ಗಳನ್ನು ಪಡೆದುಕೊಂಡು ನೋಂದಾಯಿತ ಕಚೇರಿಯಲ್ಲಿ ಕ್ರಯ ಪತ್ರ, ದಾನ ಪತ್ರ, ವಿಭಾಗ ಪತ್ರ, ಹಕ್ಕು ಖುಲಾಸೆ ಹಾಗೂ ಇತರೆ ದಾಖಲೆ ಪತ್ರಗಳನ್ನು ನೋಂದಣಿ ಮಾಡಿಸಿಕೊಂಡು ಸದುಪಯೋಗ ಮಾಡಿಕೊಳ್ಳುವ ಅವಕಾಶ ಪಡೆಯಬಹುದಾಗಿರುತ್ತದೆ. ಸರ್ಕಾರದ ಅಧಿಸೂಚನೆಯಂತೆ ಗಣಕೀಕೃತ ನಮೂನೆ-3 ಮತ್ತು (ನಮೂನೆ-3ಎ ರನ್ನು ಪಡೆದುಕೊಳ್ಳÀಬೇಕು.

ತಪ್ಪಿದಲ್ಲಿ ಸಂಬಂಧಪಟ್ಟ ಆಸ್ತಿ ಮಾಲೀಕರಿಗೆ ನಿಯಮ 10ಎ ರಂತೆ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಕಂದಾಯಾಧಿಕಾರಿ, ಕಂದಾಯ ನಿರೀಕ್ಷಕರನ್ನು ಸಂಪರ್ಕಿಸುವಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *