ಪಿಯುಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ, ಪೆನ್ನು ನೀಡಿ ಶುಭ ಕೋರಿದ ಉದ್ಯಮಿ ಶ್ರೀನಿಧಿಕುದರ್

ಚಾಮರಾಜನಗರ:   ಇಂದಿನಿಂದ ಆರಂಭವಾದ ಪಿಯುಸಿ ಪರೀಕ್ಷೆ ಬರೆಯಲು ನಗರದ ಜೆಎಸ್ಎಸ್ ಮಹಿಳಾ ಕಾಲೇಜಿಗೆ ಬಂದ ವಿದ್ಯಾರ್ಥಿಗಳಿಗೆ ಉದ್ಯಮಿ, ಸಮಾಜಸೇವಕ ಶ್ರೀನಿಧಿಕುದರ್ ಗುಲಾಬಿ ಹೂ, ಪೆನ್ನು ನೀಡಿ ಆಲ್ ದ ಬೆಸ್ಟ್‌ ಹೇಳಿದರು.
   ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಪ್ರಮುಖ ಘಟ್ಟವಾಗಿದೆ. ಆಗಾಗಿ ವಿದ್ಯಾರ್ಥಿಗಳು ಧೈರ್ಯದಿಂದ ಚೆನ್ನಾಗಿ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ರಾಜ್ಯದಲ್ಲೇ ಚಾಮರಾಜನಗರ ಜಿಲ್ಲೆಯು ಫಲಿತಾಂಶ ದಲ್ಲಿ ಪ್ರಥಮಸ್ಥಾನಕ್ಕೆ ಬರಲಿ ಎಂದು ಆಶಿಸಿದರು.
  ಈ ಸಂದರ್ಭದಲ್ಲಿ ಡಾ.ಎಸ್.ಪಿ.ಬಾಲಸುಬ್ರಮಣ್ಯo ಗಾನಗಂಧರ್ವ ಸಾಂಸ್ಕೃತಿಕ ಕಲಾವೇದಿಕೆಯ ಗೌರವಾಧ್ಯಕ್ಷ ಸುರೇಶ್ ಗೌಡ, ಅಧ್ಯಕ್ಷ ಹೊಸೂರು ಶಿವಣ್ಣ, ಉಪಾಧ್ಯಕ್ಷೆ ವಸಂತ ಬಂಗಾರು,     ಚಾಮರಾಜನಗರ ವಿಶ್ವವಿದ್ಯಾನಿಲಯ ಸಂಶೋಧನಾ ಸಹ ಪ್ರಾಧ್ಯಾಪಕ ಡಾ. ಎಂ.ಕುಮಾರ್,  ಕನ್ನಡ ಉಪನ್ಯಾಸಕ ಗುರುರಾಜ್ ಯರಗನಹಳ್ಳಿ ,
ಹೊನ್ನೂರು ಕೃಷ್ಣಮೂರ್ತಿ. ಬ್ರೈಟ್ ಶಿವರಾಜ್ ಹಾಜರಿದ್ದರು.

Leave a Reply

Your email address will not be published. Required fields are marked *