ಸಿ.ಎಸ್.‌ರುದ್ರಸ್ವಾಮಿ ನಿಧನ

ಚಾಮರಾಜನಗರ: ಚಾಮರಾಜನಗರದ ಸತ್ಯಮಂಗಲ ರಸ್ತೆಯಲ್ಲಿರುವ ಕುವೆಂಪು ಬಡಾವಣೆ ನಿವಾಸಿ, ಅಡಕೆ ವ್ಯಾಪಾರಿಗಳೂ ಆದ ಸಿ.ಎಸ್. ರುದ್ರಸ್ವಾಮಿ (ರುದ್ರಪ್ಪ 87) ಸೋಮವಾರ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ನಾಗರತ್ನಮ್ಮ, ಮಕ್ಕಳಾದ ನಾಗನಂದಿನಿ, ಮೋಹನ್ ಕುಮಾರ್, ಅಶ್ವಿನಿ, ಪಲ್ಲವಿ, ಅಳಿಯ ಮಹೇಶ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *