ಕ್ಯಾಲೆಂಡರ್ ದೈನಂದಿನ ಜೀವನಕ್ಕೆ ಅವಶ್ಯಕ: ಸುಧಾ

  • ನಗರಸಭೆಯ 2026ನೇ ಸಾಲಿನ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ

ಚಾಮರಾಜನಗರ: ನಗರಸಭೆಯ ಕಲ್ಯಾಣ ಶಾಖೆ ವತಿಯಿಂದ ಹೊರತಂದಿರುವ 2026ನೇ ಸಾಲಿನ ವಾರ್ಷಿಕ ಕ್ಯಾಲೆಂಡರ್ ನ್ನು  
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸುಧಾ ಬಿಡುಗಡೆ ಮಾಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ನಗರಾಭಿವೃದ್ಧಿ ಕೋಶದಲ್ಲಿ  ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ, ನಗರಸಭೆ ಕಲ್ಯಾಣ ಶಾಖಾ ವತಿಯಿಂದ  2026ನೇ ಸಾಲಿನ ಕ್ಯಾಲೆಂಡರ್ ಹೊಂದಿರುವುದು ಸಂತಸದ ವಿಷಯವಾಗಿದೆ ಎಂದು ಮೆಚ್ಚಿಗೆ ವ್ಯಕ್ತ ಪಡಿಸಿದರು.
ಕ್ಯಾಲೆಂಡರ್‌ನಲ್ಲಿ ನಗರಸಭೆಯ ಕಲ್ಯಾಣ ಶಾಖಾ ಕಾರ್ಯಕ್ರಮಗಳನ್ನು ಮುದ್ರಿಸಿ ಜನರಿಗೆ ತಿಳಿಸುವ ಕೆಲಸವನ್ನು ವೆಂಕಟನಾಯಕ ಮಾಡಿದ್ದಾರೆ. ಈ ಕ್ಯಾಲೆಂಡರ್ ದಿನನಿತ್ಯದ ಕಾರ್ಯಗಳು ಸಭೆಗಳು, ಇತರ ಮಾಹಿತಿ ತಳಿಯಲು ಸಹಾಯ ಮಾಡುತ್ತದೆ. ದೈನಂದಿನ ಜೀವನಕ್ಕೆ  ಸಹಾಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಭಾರ ಪೌರಾಯುಕ್ತ ಪ್ರಕಾಶ್, ಕಾರ್ಯಪಾಲಕ ಅಭಿಯಂತರಾದ ಆಲ್ತಾಫ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ ಸಮಾಜಸೇವಕ ಡಾ.ಪರಮೇಶಪ್ಪ, ಯೋಜನಾಧಿ ಕಾರಿ ವೆಂಕಟನಾಯಕ, ಪೌರ ನೌಕರರ ಸಂಘದ ಅಧ್ಯಕ್ಷ ಪಳನಿಸ್ವಾಮಿ,  ನೋಡಲಾಧಿಕಾರಿ ಚೇತನ್ ಕುಮಾ‌ರ್, ಪ್ರದೀಪ್‌, ಅಶ್ವಿನಿ, ಚೈತ್ರ, ಸಂತೋಷ್, ನವೀನ್, ಬಸವಣ್ಣ, ಮಣಿಕಂಠ, ಸಿಆರ್‌ಪಿ ಗಳಾ ಜ್ಯೋತಿ, ನರ್ಗೀಸ್ ಬಾನು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *