ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಂದ ಕ್ಯಾಲೆಂಡರ್ ಬಿಡುಗಡೆ

 ಚಾಮರಾಜನಗರ : ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಹೊರತಂದಿರುವ 2026ನೇ ಸಾಲಿನ ವಾರ್ಷಿಕ ಕ್ಯಾಲೆಂಡರನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಬಿಡುಗಡೆ ಮಾಡಿ ಶುಭಕೋರಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯ ವಾರ್ಷಿಕ ಕ್ಯಾಲೆಂಡರನ್ನು ಬಿಡುಗಡೆ ಮಾಡಿ  ಪದಾಧಿಕಾರಿಗಳಿಗೆ ಹೊಸವರ್ಷದ ಶುಭಾಯಶ ಕೋರಿದರು.
ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಚಾ.ಗು.ನಾಗರಾಜು ಮಾತನಾಡಿ, ಕನ್ನಡ ಪರ ಸಂಘಟನೆ ಗಳಿಂದ ಗಡಿಜಿಲ್ಲೆಯಲ್ಲಿ ಕನ್ನಡ ಗಟ್ಟಿಯಾಗಿ ಉಳಿದಿದೆ. ನಾಡಿನ ಜನತೆಯ ಹೊಸ ವರ್ಷವೂ ಒಳಿತು ಮಾಡಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಜಿ.ಪಂ.ಸಿಇಓ ಮೋನಾರೋತ್, ಉಪಾಧ್ಯಕ್ಷ ಮನಮೋಹನ್, ಜಿಲ್ಲಾಧ್ಯಕ್ಷ ಸಂತೋಷ್, ಖಜಾಂಚಿ ಅನುರಾಜ್‌ಗೌಡ, ಕಾರ್ಯದರ್ಶಿ ಸುನೀಲ್‌ಕುಮಾರ್, ಜಿಲ್ಲಾಧ್ಯಕ್ಷ ಹೊನ್ನಶೆಟ್ಟರಹುಂಡಿ ದೇವರಾಜು, ಸಿ.ಚನ್ನಬಸವಯ್ಯ, ಅಮಚವಾಡಿ ಕುಮಾರ್, ರವಿಚಂದ್ರಪ್ರಸಾದ್ ಕಹಳೆ, ನಾಗರಾಜು, ರಾಮು, ಸಿದ್ದು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *