ಸೋಮವಾರಪೇಟೆಯಲ್ಲಿ ಬಸವ ಜಯಂತಿ ಆಚರಣೆ : ಪ್ರಸಾದ ವಿತರಣೆ

ಚಾಮರಾಜನಗರ: ನಗರದ ಸೋಮವಾರಪೇಟೆಯ ಒಂದನೇ ವಾರ್ಡಿನಲ್ಲಿ ಶ್ರೀ ಬಸವ ಯುವ ಬಳಗದಿಂದ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಆಚರಣೆ ಮಾಡಲಾಯಿತು.

ಗ್ರಾಮದ ಮುಂಭಾಗದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸುವ ಜೊತೆಗೆ, ಗಣ್ಯರು ಹಾಗೂ ಗ್ರಾಮಸ್ಥರು ವಿಶೇಷ ಪೂಜೆಯಲ್ಲಿ ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಗಣ್ಯರು, 12ನೇ ಶತಮಾನದಲ್ಲಿಯೇ ಬಸವಣ್ಣ ಅವರು ವೀರಶೈವ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿ, ಜಗತ್ತಿಗೆ ಶಾಂತಿ ಸಹಬಾಳ್ವೆ ಹಾಗೂ ಸಮಾನತೆಯ ನೀತಿ ಪಾಠವನ್ನು ಬೋದಿಸಿದರು. ಬಸವಾಧಿ ಶರಣರು ರಚನೆ ಮಾಡಿದ ವಚನಗಳು ಇಂದಿಗೂ ಸಹ ಹೆಚ್ಚು ಪ್ರಸ್ತುತವಾಗಿದೆ. ಅನುಭವ ಮಂಪಟವನ್ನು ಸ್ಥಾಪನೆ ಮಾಡಿ. ಸಮಾಜ ಆಗುಹೋಗುಗಳನ್ನು ಚರ್ಚಿಸಿ, ಪರಿಹಾರ ಕಲ್ಪಿಸುವ ಕಾಯಕದಲ್ಲಿ ನಿರತರಾಗಿದ್ದು, ಕಾಯವೇ ಕೈಲಾಸ ಎಂದು ಸಾರಿದವರು ಬಸವಣ್ಣ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು ಬಸವ ಯುವ ಬಳಗದ ಸಂತೋμï, ಕಾರ್ತಿಕ್, ಮೋಹನ್, ಶರತ್ , ಮಲ್ಲೇಶ್ ಹಾಗೂ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *