ಗಿಡನೆಟ್ಟು ಹುಟ್ಟುಹಬ್ಬ ಆಚರಿಸಿಕೊಂಡ ಚಾ.ರಂ.ಶ್ರೀನಿವಾಸಗೌಡ

ಚಾಮರಾಜನಗರ: ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರು ತಮ್ಮ ಹುಟ್ಟುಹಬ್ಬದ
ಅಂಗವಾಗಿ ನಗರದ ಚಾಮರಾಜೇಶ್ವರ ಉದ್ಯಾನವನದಲ್ಲಿ ತಮ್ಮ ಬೆಂಬಲಿಗರೊಂದಿಗೆ ಗಿಡನೆಟ್ಟು ,ಕೇಕ್ ಕತ್ತರಿಸಿ, ಹಂಚುವ ಮೂಲಕ ಆಚರಿಸಿಕೊಂಡರು.
ಸಮಾಜ ಸೇವಕ, ಉದ್ಯಮಿ ಶ್ರೀನಿಧಿಕುದರ್ ಮಾತನಾಡಿ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರು ಜಿಲ್ಲೆಯಲ್ಲಿ ಕನ್ನಡ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಚಾಮರಾಜೇಶ್ವರ ಉದ್ಯಾನವನದಲ್ಲಿ ಗಿಡನೆಟ್ಟು,ಕೇಕ್ ಕತ್ತರಿಸುವ ಮೂಲಕ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ದೇವರು ಅವರಿಗೆ ಹೆಚ್ಚಿನ ಆರೋಗ್ಯ,ಆಯಸ್ಸು ಕರುಣಿಸಲಿ ಎಂದು ಆಶಿಸಿದರು.
    ಈ ಸಂದರ್ಶನದಲ್ಲಿ ಮುಖಂಡರಾದ ಶಾ.ಮುರಳಿ, ಚಾ.ವೆಂ.ರಾಜ್ ಗೋಪಾಲ್, ಪಣ್ಯದಹುಂಡಿ ರಾಜು,  
ಮಹೇಶ್ ಗೌಡ ನಗರಸಭಾ ಮಾಜಿ ಸದಸ್ಯ ಗಣೇಶದೀಕ್ಷಿತ್,  ಸಮಾಜ ಸೇವಕ ಶ್ರೀನಿಧಿಕುದರ್, ಮುತ್ತಿಗೆ ಗೋವಿಂದರಾಜು, ಜಿ.ಬಂಗಾರು, ರವಿಚಂದ್ರಪ್ರಸಾದ್, ಶಿವಣ್ಣ, ರಾಚಪ್ಪ,  ಲೋಕೇಶ್,
ಚಿನ್ನಸ್ವಾಮಿ,  ಅರುಣ್ ಕುಮಾರ್ ಗೌಡ, ವೀರಭದ್ರಪ್ಪ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *