ಚಾಮರಾಜನಗರ: ಚಾಮರಾಜನಗರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿಗರಾದ ಎಚ್.ಎನ್. ಮಹದೇವಸ್ವಾಮಿ( ಸೋಮೇಶ್) ಹಾಗೂ ಉಪಾಧ್ಯಕ್ಷರಾಗಿ ಎಲ್. ರಾಮಚಂದ್ರ ಅವಿರೋಧವಾಗಿ ಆಯ್ಕೆಯಾದರು.
ನಗರದ ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರಾದ ಎಚ್.ಎನ್. ಮಹದೇವಸ್ವಾಮಿ ( ಸೋಮೇಶ್) ಅಧ್ಯಕ್ಷ ಸ್ಥಾನಕ್ಕೆ, ಎಲ್. ರಾಮಚಂದ್ರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಬಸವರಾಜು ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷ –ಉಪಾಧ್ಯಕ್ಷರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಎಪಿಎಂಸಿ ಕಾರ್ಯದರ್ಶಿ ಪ್ರಕಾಶ್‍ಕುಮಾರ್ ಇದ್ದರು.
ರೈತರ ಅಭಿವೃದ್ದಿಗೆ ಒತ್ತು : ನೂತನ ಅಧ್ಯಕ್ಷ –ಉಪಾಧ್ಯಕ್ಷರಾಗಿ ಆಯ್ಕೆಯಾದ ಸೋಮೇಶ್, ರಾಮಚಂದ್ರ ಮಾತನಾಡಿದ, ಜಿಲ್ಲೆಯ ವರಿಷ್ಠರು ಹಾಗೂ ನಿರ್ದೇಶಕರು ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಕ್ಕೆ ಅಭಾರಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಎಪಿಎಂಸಿಯಿಂದ ದೊರೆಯುವ ಎಲ್ಲಾ ರೀತಿಯ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ನಮ್ಮ ಆಯ್ಕೆಗೆ ಕಾರಣರಾದ ಉಸ್ತುವಾರಿ ಸಚಿವರಾದ ವೆಂಕಟೇಶ್, ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ, ಹಾಗು ಪಕ್ಷದ ಎಲ್ಲಾ ಮುಖಂಡರಿಗೆ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದರು.
ವಿಜಯೋತ್ಸವ , ಸನ್ಮಾನ ; ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದ ಸೋಮೇಶ್, ರಾಮಚಂದ್ರ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನೂತನ ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ ಹಾಗೂ ಮುಖಂಡರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ನಿರ್ದೇಶಕರಾದ ಆಲೂರು ಪ್ರದೀಪ್, ಹೊಮ್ಮ ರವಿಶಂಕರಮೂರ್ತಿ, ಗುರುಸ್ವಾಮಿ,ಪ್ರೇಮ ಶೇಖರಪ್ಪ, ಎಂ. ಮಹೇಶ್, ವೆಂಕಟರಾವ್‍ಸಾಠೆ, ಪುಟ್ಟಬಸವಮ್ಮ, ಕೈಸರ್ ಅಹಮದ್ , ಎಂ.ಬಿ. ಕುಮಾರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವ್, ಚಿಕ್ಕಮಹದೇವ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಬ್ಲಾಕ್ ಅಧ್ಯಕ್ಷರಾದ ಎ.ಎಸ್. ಗುರುಸ್ವಾಮಿ, ಮಹಮಹದ್ ಅಸ್ಗರ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ನಾಗೇಂದ್ರ ನಾಯಕ, ಜಿ.ಪಂ. ಮಾಜಿ ಸದಸ್ಯರಾದ ಎಸ್. ಸೋಮನಾಯಕ, ರವಿಗೌಡ, ಎನ್.ಎಂ. ಶಿವಸ್ವಾಮಿ, ಕೋಡಿಉಗನೆ ಪುರುಷೊತ್ತಮ್, ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ಮೋಹನ್‍ನಗು, ಅಕ್ಷಯ್, ಕೋಡಿಮೋಳೆ ಪ್ರಕಾಶ್, ಶ್ರೀನಿವಾಸ್,ಎನ್.ಆರ್. ಪುರುಷೋತ್ತಮ್, ನಾಗಸುಂದ್ರಪ್ಪ, ಉಡಿಗಾಲ ನಂಜಪ್ಪ ಮೊದಲಾದವರು ಇದ್ದರು.