ಚಾ.ನಗರ ಜಿಲ್ಲೆ ಅಭಿವೃದ್ದಿ ಪಥದಲ್ಲಿ ಸಾಗುತ್ತಿರುವ ಸಂಪತ್ಭರಿತ ಜಿಲ್ಲೆ : ಮಹೇಶ್ ಪೈ ಅಭಿಮತ

ಚಾ.ನಗರ ಸತ್ಯಮಂಗಲ ರಸ್ತೆಯಲ್ಲಿ ಕೆನರಾ ಬ್ಯಾಂಕ್ ಎರಡನೇ ಶಾಖೆ ಆರಂಭ


ಚಾಮರಾಜನಗರ: ಚಾಮರಾಜನಗರ ಜಿಲ್ಲೆಯು ಪ್ರಕೃತಿ ಸಂಪತ್ತು ಹೊಂದಿರುವ ಅಭಿವೃದ್ದಿಯತ್ತ ಸಾಗುತ್ತಿರುವ ಜಿಲ್ಲೆಯಾಗಿದ್ದು, ಇಲ್ಲಿ ಎರಡನೇ ಶಾಖೆ ಆರಂಭಿಸುತ್ತಿರುವುದು ಸಂತಸ ಎಂದಿದೆ ಎಂದು ಕೆನರಾ ಬ್ಯಾಂಕಿನ ಮುಖ್ಯ ಪ್ರಧಾನ ಪ್ರಬಂಧಕ ಎಂ.ಮಹೇಶ್ ಪೈ ತಿಳಿಸಿದರು.
ನಗರದ ಸತ್ಯ ಮಂಗಲ ರಸ್ತೆಯಲ್ಲಿ ಕೆನರಾ ಬ್ಯಾಂಕಿನ ನೂತನ ಶಾಖೆಯನ್ನು ಉದ್ಗಾಟಿಸಿ ಮಾತನಾಡಿದ ಅವರು, ಕಳೆದ ೧೯೭೩ ರಲ್ಲಿ ಚಾ.ನಗರದಲ್ಲಿ ಕೆನರಾ ಬ್ಯಾಂಕ್ ಶಾಖೆಯನ್ನು ಆರಂಭಿಸಲಾಯಿತು. ಇಲ್ಲಿತನಕ ಬಹಳಷ್ಟು ಉತ್ತಮವಾಗಿ ವಹಿವಾಟು ಮಾಡುವ ಜೊತೆಗೆ ಜಿಲ್ಲೆಯ ಅರ್ಥಿಕ ಅಭಿವೃದ್ದಿಯಲ್ಲಿ ತನ್ನದೇ ಅದ ಸೇವೆಯನ್ನು ಸಲ್ಲಿಸಿದೆ. ನಮ್ಮ ಎಲ್ಲಾ ಹಿರಿಯ ಗ್ರಾಹಕರ ಸಹಕಾರದಿಂದ ಬ್ಯಾಂಕ್ ಅಭಿವೃದ್ದಿಯಾಗಿದೆ ಎಂದರು.
ಈಗ ಮತ್ತೇ ಜನರ ಆಶಯದಂತೆ ಜಿಲ್ಲಾ ಕೇಂದ್ರದಲ್ಲಿಯೇ ಮತ್ತೊಂದು ಶಾಖೆ ಆರಂಭಿಸಬೇಕೆAಬ ನಮ್ಮ ಚಿಂತನೆಯೊAದಿಗೆ ೨೦೨೩ರಲ್ಲಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈಗ ಆರಂಭಿಸಲು ಸೂಚನೆ ದೊರೆಯಿತು. ಅದು ಸಹ ಅಕ್ಟೋಬರ್ ಮೊದಲ ವಾರದಲ್ಲಿಯೇ ಬ್ಯಾಂಕ್ ಶಾಖೆ ಆರಂಭಿಸುವ ನಮ್ಮ ಕನಸು ನೆನಸಾಗಿದೆ. ಈ ಕಾರ್ಯಕ್ಕೆ ಸಹಕಾರ ನೀಡಿದ ಎಲ್ಲಾ ಪ್ರೀತಿಪಾತ್ರರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಕೆನರಾ ಬ್ಯಾಂಕ್ ಅತ್ಯಂತ ವಿಶ್ವಾಸಾರ್ಹತೆಯನ್ನು ಹೊಂದಿದ್ದು, ಇಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು, ಸರ್ಕಾರಿ ಸವಲತ್ತು ಹಾಗೂ ಇತರೇ ಯೋಜನೆಗಳ ಪ್ರಯೋಜವನ್ನು ಪಡೆದುಕೊಳ್ಳಲು ಗ್ರಾಹಕರು ಮುಂದಾಗಬೇಕು. ಮಹಿಳೆಯರು ಸಹ ಹೆಚ್ಚು ಹೆಚ್ಚು ಬ್ಯಾಂಕಿAಗ್ ವ್ಯವಹಾರ ಹೊಂದಬೇಕು, ಕಟ್ಟಕಡೆಯ ವ್ಯಕ್ತಿಗೂ ಸಹ ಬ್ಯಾಂಕಿAಗ್ ಸೇವೆ ತಲುಪಬೇಕೆಂಬುವುದು ನಮ್ಮ ಆಶಯವಾಗಿದೆ ಎಂದರು.
ಚಾ.ನಗರ ಕೃಷಿ ಕಾಲೇಜಿನ ಹಿರಿಯ ಅಧಿಕಾರಿ ಡಾ. ಸಿ. ದೊರೆಸ್ವಾಮಿ ಮಾತನಾಡಿ, ಚಾಮರಾಜನಗರ ಜಿಲ್ಲೆಯನ್ನು ನಾನು ಒಮ್ಮೆ ಹಿಂದುಳಿದ ಜಿಲ್ಲೆ ಎಂದು ಪ್ರಸ್ತಾಪ ಮಾಡಿದೆ. ಇದಕ್ಕೆ ಚಾ.ನಗರ ಜಿಲ್ಲೆಯ ಹರಿಶಿನ, ಬಾಳೆ, ಕಬ್ಬು ಹೆಸರು ವಾಸಿಯಾಗಿದೆ. ಕರಿಕಲ್ಲುಗೆ ಉದ್ಯಮದಲ್ಲಿ ವಿದೇಶದಲ್ಲಿ ಚಾ.ನಗರ ಪ್ರಸಿದ್ದಿಯಾಗಿದೆ. ಇಂತ ಜಿಲ್ಲೆ ಅಭಿವೃದ್ದಿ ಯನ್ನು ಹೊಂದಿದ ಜಿಲ್ಲೆ ಎಂದು ಹೆಮ್ಮೆಯಿಂಎ ಹೇಳಿ ಎಂದರು. ಹೀಗಾಗಿ ಕೆನರಾ ಬ್ಯಾಂಕ್ ಎರಡನೇ ಶಾಖೆ ಆರಂಭಿಸಿರುವುದು ಸಂತಸ ವಾಗಿದೆ. ನಮ್ಮ ಮುಖ್ಯ ಕಚೇರಿಯ ಬ್ಯಾಂಕ್ ಕೂಡ ಕೆನರಾ ಆಗಿದೆ. ಹೀಗಾಗಿ ಚಾ.ನಗರದಲ್ಲಿ ನಮ್ಮ ಕಾಲೇಜಿನ ಬ್ಯಾಂಕ್ ಖಾತೆಯು ಸಹ ಕೆನರಾ ಬ್ಯಾಂಕ್ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಹಿರಿಯ ಮ್ಯಾನೇಜರ್ ಟಿ.ಕ.ಎ ಪ್ರವೀನ್, ಸಹಾಯಕ ಜನರಲ್ ಮಾನೇಜರ್ ಪಿ.ಎಸ್. ಉಮೇಶ್, ವಿಭಾಗೀಯ ಮ್ಯಾನೇಜರ್‌ಗಳಾಧ ರಾಗ್ಗೀಶ್, ನೂತನ ಶಾಖೆಯ ಮ್ಯಾನೇಜರ್ ಪ್ರವೀಣ್, ಸಂದೀಪ್, ಚಾ.ನಗರ ಶಾಖೆ ಮ್ಯಾನೇಜರ್, ಪ್ರಕಾಶ್, ಚಾ.ನಗರ ಹಿರಿಯ ಗ್ರಾಹಕರಾದ ಅನಂತಕುಮಾರ್, ಕಿಲಗೆರೆ ಚಂದ್ರಶೇಖರ್, ಮಾಯಾ ವೆಂಕಟೇಶ್,ಯೂಸೆಪ್ ಖಾಮಿಲ್‌ಖಾನ್, ಮಹೇಶ್ ಬೇಡರಪುರ, ಪ್ರಶಾಂತ್ ಈಶ್ವರಿ ಟ್ರಾಕ್ಟರ್, ಬಸವರಾಜು, ಪ್ರಕಾಶ್, ಸುಭಾಷ್, ಲೋಕೇಶ್, ಕಟ್ಟಡದ ಮಾಲೀಕರಾದ ರಾಜೇಶ್ವರಿ, ಪಿ.ಎಸ್. ಕುಮಾರ್,ಮಹದೇವಸ್ವಾಮಿ, ಮೊದಲಾದವರು ಇದ್ದರು.

Leave a Reply

Your email address will not be published. Required fields are marked *