ಚಾಮರಾಜನಗರ ನಗರಸಭೆ 1.87 ಲಕ್ಷ ಉಳಿತಾಯ ಬಜೆಟ್ ಮಂಡನೆ

  • ಚಾ.ನಗರ ನಗರಸಭೆ: ಮೂಲಸೌಕರ್ಯಗಳಿಗೆ ಆದ್ಯತೆ, ಬಜೆಟ್‌ ಮೊತ್ತ 7711.62 ಲಕ್ಷ

ಚಾಮರಾಜನಗರ:ನಗರದ ವ್ಯಾಪ್ತಿಯಲ್ಲಿ ಮೂಲಸೌಕರ್ಯಗಳಿಗೆ ಒತ್ತು ನೀಡುವ ಜೊತೆಗೆ 1.87.66 ಕೋಟಿ ಉಳಿತಾಯದ  ಬಜೆಟ್ನ್ನು ನಗರ ಸಭೆ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶ್ರೀರೂಪ ಬುಧವಾರ ಮಂಡಿಸಿದರು.

ನಗರಸಭಾ ಸಭಾಂಗಣದಲ್ಲಿ  2026–27ನೇ ಸಾಲಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ನಿರೀಕ್ಷಿಸಲಾಗಿರುವ ಅನುದಾನಗಳ ಸೇರಿದಂತೆ 5895.73 ಲಕ್ಷಗಳು ಸೇರಿದಂತೆ ನಗರಸಭೆಯ ಸ್ವಂತ ಮೂಲಗಳಿಂದ ಕ್ರೋಢೀಕರಿಸಲು ಉದ್ದೇಶಿರುವ ಆದಾಯಮೂಲಗಳಿಂದ 2117.73 ಲಕ್ಷಗಳು ಸೇರಿದಂತೆ ಪ್ರಮುಖ ವೆಚ್ಚಗಳಿಗೆ 7523.96 ಲಕ್ಷಗಳು ಸೇರಿ ನಗರಸಭಾ ಎಲ್ಲ ಬಾಬ್ತುಗಳಿಗೂ ಅನುದಾನ ಹಂಚಿಕೆ ಮಾಡಿ 187.66 ,  ಆಯವ್ಯಯ ವನ್ನು ಮಂಡಿಸಿದರು.

ನಗರಸಭೆಗೆ 16 ನೇ ಹಣಕಾಸು ಆಯೋಗದಿಂದ 810 ಲಕ್ಷ, ಎಸ್ ಎಫ್ ಸಿ ಅನುದಾನದಿಂದ 300 ಲಕ್ಷ, ಎಸ್ ಎಫ್ ಸಿ ವೇತನ ಅನುದಾನ 597 ಲಕ್ಷ,  ಎಸ್ ಎಫ್ ಸಿ ವಿದ್ಯುತ್ ಅನುದಾನ (ಬೀದಿ ದೀಪ) 263 ಲಕ್ಷ, ಎಸ್ ಎಫ್ ಸಿ ವಿದ್ಯುತ್ ಅನುದಾನ ನೀರು ಸರಬರಾಜು 653 ಲಕ್ಷ, ಸ್ಚಚ್ಚ ಭಾರತ್ ಅಭಿಯಾನಯಡಿ 620 ಲಕ್ಷ, ವಿದ್ಯುತ್ ಚಿತಾಗಾರ ನಿರ್ಮಾಣಕ್ಕಾಗಿ 400 ಲಕ್ಷ, ಪೌರಕಾರ್ಮಿಕರ ಗೃಹ ಭಾಗ್ಯ ಅನುದಾನ 50 ಲಕ್ಷ ಸೇರಿದಂತೆ ಇತರೆ ಬಾಬ್ತುಗಳಿಂದ 5895 .73  ಅನುದಾನವನ್ನು ಈ ವರ್ಷದಲ್ಲಿ ಈ ವರ್ಷದಲ್ಲಿ ನಿರೀಕ್ಷೆ ಮಾಡಲಾಗಿದೆ ಎಂದರು.

2026-27 ನೇ ಸಾಲಿನಲ್ಲಿ 32 ಲಕ್ಷ ರೂ .ಗಳಲ್ಲಿ ಪುಡ್ ಕೋರ್ಟ್ ನಗರಸಭೆ ಮಳಿಗೆ ಬಾಡಿಗೆಯಿಂದ ಲಭ್ಯವಿರುವ 40.69  ಮಳಿಗೆ ಗಳ ನವೀಕರಣ, ನಗರಸಭಾ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳ ನಾಮಫಲಕ ಅಳವಡಿಸಲು 20 ಲಕ್ಷ, ಅಮೃತ – 2.0 ಯೋಜನೆಯಡಿ ಉದ್ಯಾನವನಗಳ ಅಭಿವೃದ್ಧಿ, ನಗರ ಹಸರೀಕರಣ ಹಾಗೂ 5 ಪಾರ್ಕ್ ಅಭಿವೃದ್ಧಿ  ಹಸಿರೀಕರಣಗೊಳಿಸಲು ಆದ್ಯತೆ ನೀಡಲಾಗಿದೆ ಎಂದರು.
ನಗರದ ಅಭಿವೃದ್ಧಿಗೆ ಆದ್ಯತೆ’ ಬಜೆಟ್‌ ವಿಶೇಷ ಸಭೆಯಲ್ಲಿ ಭಾಗವಹಿಸಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಕುಡಿಯುವನೀರು, ಸ್ವಚ್ಚತೆ , ಒಳಚರಂಡಿ ಮೊದಲ ಆದ್ಯತೆ ನೀಡಬೇಕು. 31 ವಾರ್ಡ್ ಗಳು ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಅಂತರ್ಜಲ ಕುಸಿದಿದೆ. ಆಗಾಗಿ ಬೋರ್ ಕೊರೆದರು ನೀರು‌ ಬರುತ್ತಿಲ್ಲ. ಆಗಾಗಿ ಕಾವೇರಿ ನೀರನ್ನು ಸಮರ್ಪಕವಾಗಿ ಸರಬರಾಜು ಕುಡಿಯುವ ನೀರಿನ‌ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭಾ ಆದಾಯ ಕ್ರೋಡೀಕರಿಸುವಲ್ಲಿ ವಿಫಲವಾಗಿದೆ. ಹೋಟಲ್ , ಸೇರಿದಂತೆ ವಿವಿಧ ಉದ್ಯಮಗಳಿಂದ ಸರಿಯಾಗಿ ತೆರಿಗೆ ವಸೂಲಾತಿ ಆಗಿಲ್ಲ ಇಂತಗ ಆದಾಯ ಬಿಟ್ಟರೆ ನಗರ ಅಭಿವೃದ್ಧಿ ಹೇಗೆ ಎಂದು ಅಧಿಕಾರಿಗಳ ತರಾಟೆ ತೆಗೆದುಕೊಂಡರು. ಸಭೆಯಲ್ಲಿ ಯೋಜನಾ ನಿರ್ದೇಶಕ ವೆಂಕಟೇಶ್, ಪೌರಾಯುಕ್ತ ಪರಶುರಾಮ ಛಲವಾದಿ ಹಾಗೂ ಅಧಿಕಾರಿಗಳ ಭಾಗವಹಿಸಿದ್ದರು.

Leave a Reply

Your email address will not be published. Required fields are marked *